RSS

ಎಲ್ಲೋ ದೂರದಿ ಜಿನುಗುವ ಹನಿಗಳೆ / ello dooradi jinuguva hanigale

25 ಏಪ್ರಿಲ್

click to play audio

ಎಲ್ಲೋ ದೂರದಿ ಜಿನುಗುವ ಹನಿಗಳೆ
ಬನ್ನಿ ಬನ್ನಿ ಬಿರುಮಳೆಯಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆ ಕೆರೆ
ಹೊಸ ಹಸುರೇಳಲಿ ನವುರಾಗಿ || ಎಲ್ಲೋ ||

ಎಲ್ಲೋ ದೂರದಿ ಜಿನುಗುವ ದನಿಗಳೆ
ಬನ್ನಿ ಬನ್ನಿ ರಸಗೀತೆಗಳಾಗಿ
ಮೌನದಿ ಮಲಗಿದ ವಾದ್ಯವೃಂದಗಳ
ಮೇಲಾಡಿರಿ ಚೆಲು ಬೆರಳಾಗಿ || ಎಲ್ಲೋ ||

ಎಲ್ಲೋ ದೂರದಿ ಮಿನುಗುವ ಕಿಡಿಗಳೆ
ಬನ್ನಿ ಬನ್ನಿ ಹೊಂಗಿರಣಗಳಾಗಿ
ಹಣತೆ ಹಣತೆಗಳ ತುಟಿಯೊಳು ಕುಡಿನಗೆ
ಮಿಂಚಿಸಿ ಒಳ ಹೊರಗನು ಬೆಳಗಿ || ಎಲ್ಲೋ ||

ಎಲ್ಲೋ ದೂರದಿ ಚಿಕ್ಕೆಗೆಜ್ಜೆಗಳ
ಕಟ್ಟಿ ನರ್ತಿಸುವ ಹೆಜ್ಜೆಗಳೇ
ಬನ್ನಿ ನನ್ನೆಡೆಗೆ ಲಾಸ್ಯವನಾಡಿರಿ
ಚಿಮ್ಮಲಿ ನಲವಿನ ಬುಗ್ಗೆಗಳೇ || ಎಲ್ಲೋ ||

ಸಾಹಿತ್ಯ –  ಜಿ. ಎಸ್. ಶಿವರುದ್ರಪ್ಪ
ಸಂಗೀತ –  ಎಸ್ ಸೋಮಸುಂದರಂ
ಗಾಯನ – ಕಸ್ತೂರಿ ಶಂಕರ್
 
download ello dooradi jinuguva hanigale
 
 

ಟ್ಯಾಗ್ ಗಳು: , , , , , , ,

1 responses to “ಎಲ್ಲೋ ದೂರದಿ ಜಿನುಗುವ ಹನಿಗಳೆ / ello dooradi jinuguva hanigale

  1. shama sukrutham

    ಮಾರ್ಚ್ 1, 2016 at 10:43 ಫೂರ್ವಾಹ್ನ

    ಈ ಹಾಡಿಗೆ ಸಂಗೀತ ಕೂಡ ಕಸ್ತೂರಿ ಶಂಕರ್ ಅವರದೇ. ಸೋಮಸುಂದರಂ ಅವರದಲ್ಲ

     

ನಿಮ್ಮ ಟಿಪ್ಪಣಿ ಬರೆಯಿರಿ