RSS

ಅವನ್ನೋಡ ಕೊಳಲೂದಿ / Avn Noda kolaroori

21 ಏಪ್ರಿಲ್

ಅವನ್ನೋಡ ಕೊಳಲೂದಿ ಕುಣಿಯುವ ಹುಡುಗ
ಹುಚ್ಚು ಕೆರಳಿಸುತಾನೋ ಅಂಗಾಂಗದೊಳಗ
ಹೆಗಲಿನ ಗುಂಗಡಿ, ನೆತ್ತಿ ತುರಾಯಿ,
ಗರಿ ಬಿಚ್ಚಿ ಕುಣಿದ್ಹಾಂಗ ಶ್ರಾವಣದ ಸೋಗಿ.
ಅವನ್ನೋಡ….

ಕಲ್ಲೆಂದು ಮೆಲ್ಲಗೆ ಸೋಲ್ಲಿಲ್ಲದೆ ಬಂದ,
ಎಡದ ಕೈಯಲಿ ಎನ್ನ ಸೂರ್ಮುಡಿಯ ಹಿಡಿದ,
ಬಲಗೈಲಿ ಮುಡಿಗೆ ಮಲ್ಲಿಗೆ ಸುತ್ತಿ ನಲಿದ,
ಮುಂಗುರುಳು ನ್ಯಾವರಿಸಿ ಕಣ್ಣು ಹಪ್ಪಾದ.
ಅವನ್ನೋಡ….

ತಡೆಯಲಾಗಲೇ ಇಲ್ಲ ನಮ್ಮ ಮೈ ನವಿರ,
ಮೈತುಂಬ ಸಡ ಸಡ ತುಳುಕ್ಯಾವ ಬೆವರ,
ಹಟ್ಟಿ ಸ್ವಾಮಿಯೇ ನಿನ್ನ ಕಟ್ಟಳೆಯ ಹುರಿತ,
ಅಡಿಗಡಿಗೆ ಇರಲಾರೆ ನಾ ನಿನ್ನ ಮರೆತ.
ಅವನ್ನೋಡ….

ನಿಲ್ಲೋ ಗೊಲ್ಲರ ಹುಡುಗ ಕೊಳಲೂದಬ್ಯಾಡ,
ನಮ್ಮ ರಾಗದ ಹುಚ್ಚ ಕೆರಳಿಸಬ್ಯಾಡ,
ಮಂದಿ ಏನಂದಾರೋ ನಾ ಹಿಂದೆ ಬರಲು,
ವಾರಿಗೀ ದೇವರು ಕೊಪಗೊಂಡಾರೋ.
ಅವನ್ನೋಡ….

ತಿಳಿಯಬಲ್ಲವರೆಲ್ಲ ತಿಳಿ ಹೇಳಿರಮ್ಮ,
ಸುರರ ಜಾತಿಗೆ ನಾನು ಹೊರೆತಾದೇನಮ್ಮ ,
ನಾವು ಹೊನ್ನಿಗರವ್ವ ಚೆಲುವನ ಕಲೆಗೆ.
ಕಲೆಯೊಂದಿಗೆ ಇವನ ಒಕ್ಕ ಒಲುಮೆಗೆ.
ಅವನ್ನೋಡ….

ಸಾಹಿತ್ಯ – ಚಂದ್ರಶೇಖರ ಕಂಬಾರ
ಸಂಗೀತ – ?
ಗಾಯನ – ?

download avn noda kolaroori

thanks to vasu for this wonderful song
http://kannadabhavageetegalu.blogspot.in/2011/12/blog-post_28.html

Advertisements
 

ಟ್ಯಾಗ್ ಗಳು: , , , , , ,

3 responses to “ಅವನ್ನೋಡ ಕೊಳಲೂದಿ / Avn Noda kolaroori

  1. yuvalahari

    ಏಪ್ರಿಲ್ 25, 2012 at 9:48 ಅಪರಾಹ್ನ

    please do mention poets name below the script.. thank u…

     
  2. raoavg

    ಆಗಷ್ಟ್ 25, 2012 at 2:50 ಅಪರಾಹ್ನ

    ಅವನ್ನೋಡ ಕೊಳಲೂದಿ / Avn Noda kolaroori track is supposed to play for 8 & odd minutes but stops abruptly after 6+ minutes.

     
    • coffeewithkiran

      ಆಗಷ್ಟ್ 25, 2012 at 6:53 ಅಪರಾಹ್ನ

      rao sir , ಹಾಡಿರೋದು ೬ ನಿಮಿಷ ಮಾತ್ರ ಅನ್ನಿಸುತ್ತೆ, ಅದನ್ನು ನಾನು online website ನಿಂದ record ಮಾಡಿದ್ದು, ಎಡಿಟ್ ಮಾಡಬೇಕಿತ್ತು ಹಾಗೆ ಬಿಟ್ಟಿರುವೆ. ಸಮಯ ಸಿಕ್ಕಾಗ ಮತ್ತೊಮ್ಮೆ ಎಡಿಟ್ ಮಾಡಿ upload ಮಾಡುವೆ, ಧನ್ಯವಾದಗಳು ಸರ್, ಭೇಟಿ ನೀಡುತ್ತಿರಿ 🙂

       

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: