RSS

ನಿನ್ನೆಡೆಗೆ ಬರುವಾಗ / ninnedege baruvaaga

12 May

click to play

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ಸಡಗರದ ಮಾತುಗಳ ಬಿಂಕವೇಕೆ?
ನಿನ್ನ ಮುಂದಿರುವಾಗ ಮಂತ್ರಗಳ ಮರೆಯೇಕೆ? ಸಂಪ್ರದಾಯದ ಮರುಳು ಲಜ್ಜೆಯೇಕೆ?

|| ನಿನ್ನೆಡೆಗೆ ಬರುವಾಗ ||

ನೇವುರದ ಗೆಜ್ಜೆಗಳ ಕಿಂಕಿಣಿಯ ದನಿ ನಿನ್ನ ಸವಿಗೊರಳಿನಿಂಚರವ ಕೆಡಿಸದಿರಲಿ
ಸಿಂಗರದ ಜವನಿಕೆಯು ದೊರೆ ನಿನ್ನ ಸಿರಿಮೆಯ ಸೌಂದರ್ಯವನು ಮಬ್ಬುಗೊಳಿಸದಿರಲಿ

|| ನಿನ್ನೆಡೆಗೆ ಬರುವಾಗ ||

ನಗ್ನತೆಗೆ ನಾಚದೆಲೆ ಸಿರಿದಳಿರ ತೆಕ್ಕೆಯಿಂ ಮೂಡಿಸುಗ್ಗಿಯನೊಲಿವ ಹೂವಿನಂತೆ
ಸಿಂಗರದ ಹೊರೆಯುಳಿದು ಮಂತ್ರಗಳ ಮರೆಯುಳಿದು ಪ್ರೇಮದಾರತಿ ಹಿಡಿದು ತೇಲಿ ಬರುವೆ

|| ನಿನ್ನೆಡೆಗೆ ಬರುವಾಗ ||

*** ಕುವೆಂಪು ***
*** ಸಂಗೀತ ಕಟ್ಟಿ ***

download ninnedege baruvaaga

 

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: