RSS

ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ / yaake heege beesuttirabeku gaali

20 May

click to play

ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ
ಯಾಕೆ ಕಡಲು ದಡ ಮೀರದೆ ನಿಂತಿದೆ ತಾಳಿ
ನೆಲಕೆ ಯಾಕೆ ಮಳೆ ಹೂಡಲೆ ಬೇಕು ದಾಳಿ
ನಗುವ ಯಾಕೆ ಅವ ಜೀವಗಳೆಲ್ಲವ ಹೂಳಿ

ಹೇಗೆ ಚಿಗುರುವುದು ಬೋಳು ಗಿಡದಿಂದ ಹಸಿರು
ಹೇಗೆ ಸೇರುವುದು ದೇಹ ದೇಹದಲಿ ಉಸಿರು
ಯಾವುದು ಈ ವಿಶ್ವವನೆ ಪೊರೆಯುವ ಬಸಿರು
ಚುಕ್ಕಿ ಸಾಲಿನಲಿ ಹೊಳೆಯುವುದಾದರ ಹೆಸರು

ಯಾರು ಕರೆಸುವರು ತಪ್ಪದೆ ಪ್ರತಿದಿನ ಸೂರ್ಯನ
ಯಾರು ಕರೆಸುವರು ಬಾನಿಗೆ ಹುಣ್ಣಿಮೆ ಚಂದ್ರನ
ಫಳ ಫಳ ಹೊಳೆಯುವ ತಾರೆಗೆ ಯಾರೋ ಕಾರಣ
ಬುಗುರಿ ಆಡಿಸುವರಾರೋ ಭೂಮಿಯ ದಿನ ದಿನ

ಅದನು ಕಾಣುವ ಆಸೆಯು ಕಾಡಲಿ ಕಣ್ಣನು
ಅದನು ಕೇಳುವ ಆಸೆಯು ಕವಿಯಲಿ ಕಿವಿಯನು
ಅದನು ಅರಿಯುವ ಬಯಕೆಯು ಬೆರೆಸಲಿ ಹಾಡನು
ಅದರೊಳು ಬೆರೆಯುವ ಹುಚ್ಚಿಗೆ ತಿರಿಸುವೆ ಬಾಳನು

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ / ಗಾಯನ – ರಾಜು ಅನಂತಸ್ವಾಮಿ

ಹಾಡನ್ನು ಬರೆದು ಕೊಟ್ಟ ವಸು ರವರಿಗೆ ಧನ್ಯವಾದಗಳು

download yaake heege beesuttirabeku gaali

 

Tags: , , , , ,

2 responses to “ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ / yaake heege beesuttirabeku gaali

  1. kanasu26

    December 22, 2013 at 4:50 pm

    Sahithya: Dr.N.S. Lakshminarayana Bhatta..🙂

     
  2. coffeewithkiran

    December 23, 2013 at 5:19 pm

    ಧನ್ಯವಾದಗಳು kanasu🙂

     

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: