RSS

ಹುಚ್ಚು ಖೋಡಿ ಮನಸು / huchchu khodi manasu

17 Jun

click to play

ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು

ಮಾತು ಮಾತಿಗೇಕೋ ನಗು
ಮರುಘಳಿಗೆಯೇ ಮೌನ,
ಕನ್ನಡಿ ಮುಂದಷ್ಟು ಹೊತ್ತು
ಬರೆಯದಿರುವ ಕವನ ||

ಸೆರಗು ತೀಡಿದಷ್ಟು ಸುಕ್ಕು
ಹಠ ಮಾಡುವ ಕೂದಲು
ನಿರಿ ಏಕೋ ಸರಿಯಾಗದು
ಮತ್ತೆ ಒಳಗೆ ಹೋದಳು ||

ಕೆನ್ನೆ ಕೊಂಚ ಕೆಂಪಾಯಿತೆ
ತುಟಿಯ ರಂಗು ಹೆಚ್ಚೇ
ನಗುತ ಅವಳ ಛೇಡಿಸುತಿದೆ
ಗಲ್ಲದ ಕರಿ ಮಚ್ಚೆ ||

ಬರಿ ಹಸಿರು ಬರಿ ಹೂವು
ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ
ಸುಮ್ಮನೆ ನಿಟ್ಟುಸಿರು ||

ಸಾಹಿತ್ಯ – ಹೆಚ್.ಎಸ್. ವೆಂಕಟೇಶ ಮೂರ್ತಿ
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ

download huchchu khodi manasu

 

Tags: , , , , ,

3 responses to “ಹುಚ್ಚು ಖೋಡಿ ಮನಸು / huchchu khodi manasu

  1. Sandhya Bhat

    June 20, 2012 at 12:14 pm

    ಮೊದಲೆಲ್ಲ ಯಾವ್ದಾದ್ರು ಹಾಡು ನೆನಪಾದಾಗ ಇದನ್ನೆಲ್ಲಿ ಹುಡುಕೋದು ಅಂತ ಅಂದ್ಕೋತಿದ್ದೆ. ಈವಾಗ ಅಭಿಜ್ಞ ಇದೆಯಲ್ಲ ಅಂತ ಅಂದ್ಕೋತೀನಿ… ನಿನ್ನೆ ತಾನೇ ಹುಚ್ಚು ಮನಸಿಗೆ ಈ ಹಾಡು ನೆನಪಾಗಿತ್ತು… ಇವತ್ತು ಕೇಳಿ ಖುಷಿ ಆಯಿತು… Thank you…

     
  2. coffeewithkiran

    June 20, 2012 at 2:48 pm

    ನಿಮ್ಮ comment ನೋಡಿ ತುಂಬಾ ಖುಷಿ ಆಯಿತು, ಭೇಟಿ ನೀಡಿದ್ದಕ್ಕೆ ಧನ್ಯವಾದಗಳು ಸಂಧ್ಯಾರವರೆ…

     
  3. Manju Yadav Kariganooru

    January 18, 2014 at 2:30 pm

    B.R.Chaya avra dhwaniniyalli ee Bhavageete sogasagide avra dhwaniya geeteyanna upload madi dayavittu…..

     

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: