RSS

ನೀನು ಮುಗಿಲು ನಾನು ನೆಲ / neenu mugilu naanu nela

24 Jun

click to play

ನೀನು ಮುಗಿಲು, ನಾನು ನೆಲ.
ನಿನ್ನ ಒಲವೆ ನನ್ನ ಬಲ.
ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ.

ನಾನು ಎಳೆವೆ, ನೀನು ಮಣಿವೆ,
ನಾನು ಕರೆವೆ, ನೀನು ಸುರಿವೆ.
ನಮ್ಮಿಬ್ಬರ ಒಲುಮೆ ನಲುಮೆ ಜಗಕಾಯಿತು ಹುಣ್ಣಿಮೆ.
ನಾನಚಲದ ತುಟಿಯೆತ್ತುವೆ,
ನೀ ಮಳೆಯೊಲು ಮುತ್ತನಿಡುವೆ.
ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ.

ಸೂರ್ಯ ಚಂದ್ರ ಚಿಕ್ಕೆಗಣ್ಣ,
ತೆರೆದು ನೀನು ಸುರಿವ ಬಣ್ಣ.
ಹಸಿರಾಯಿತು ಹೂವಾಯಿತು ಚೆಲುವಾಯಿತು ಈ ನೆಲ.
ನೀನು ಗಂಡು, ನಾನು ಹೆಣ್ಣು,
ನೀನು ರೆಪ್ಪೆ, ನಾನು ಕಣ್ಣು.
ನಮ್ಮಿಬ್ಬರ ಮಿಲನದಿಂದ ಸುಫಲವಾಯ್ತು ಜೀವನ.

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ?
ಗಾಯನ – ರತ್ನಮಾಲ ಪ್ರಕಾಶ್

download neenu mugilu naanu nela

 

Tags: , , , , ,

2 responses to “ನೀನು ಮುಗಿಲು ನಾನು ನೆಲ / neenu mugilu naanu nela

  1. Sandhya Bhat

    June 26, 2012 at 10:33 am

    ಯಾವುದೊ ಬಸ್ ಲಿ ಕುಳಿತು ಕೇಳಿದ ಈ ಹಾಡಿಗಾಗಿ ತುಂಬಾ ಹುಡುಕಿದ್ದೇ… ಎಷ್ಟೋ ದಿನಗಳು ಈ ಹಾಡಿನ ಮೊದಲ ಎರಡು ಸಾಲುಗಳು ನನ್ನ ಜಿ ಮೇಲ್ ನ ಸ್ಟೇಟಸ್ ಮೆಸೇಜ್ ಆಗಿದ್ದವು.. Thank you for this song

     

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: