RSS

ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ / naadadeviye kande ninna

08 ಜುಲೈ

click to play

ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯಾ
ನೋವು ನಲಿವು ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ
ಒ೦ದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇಧ ತಾಯೀ
ಒ೦ದೆ ನೆಲದ ರಸ ಹೀರಲೇನು ಸಿಹಿ ಕಹಿಯ ರುಚಿಯ ಕಾಯೀ || ನಾಡದೇವಿಯೇ ||

ಕತ್ತಲಲ್ಲಿ ಕಂಗೆಟ್ಟು ಎಡವಿ ತಡವರಿಸುತಿರಲು ಮಂದೀ
ಕಡೆಗಣಿಸುತವರ ನಡೆದಿರುವನೊಬ್ಬ ಸ್ವಹಿತಕ್ಕೆ ಹಿರಿದು ದೊಂದಿ
ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬಾ || ನಾಡದೇವಿಯೇ ||

ಅನ್ನವಿರದ ಹಸುಳೆಗಳ ತಬ್ಬಿ ಅಳುತಿರುವ ತಾಯ ಕಂಡೆ
ದುಃಖ ಪೂರ ಉಕ್ಕುಕ್ಕಿ ಮೊರೆಯೇ ಕೊಚ್ಚಿತ್ತು ಬಾಳ ದಂಡೆ
ನರನನ್ನೆ ಗಾಳವಾಗಿಸಿಯೇ ಬಾಳ ನೀರಲ್ಲಿ ನರಿಗಳೆಷ್ಟೋ
ನಾವೆಲ್ಲಾ ಒಂದೆನುವ ಸತ್ಯ ಮೆಟ್ಟಿದ ನಾಡಿ ಹರಿಗಳೆಷ್ಟೋ || ನಾಡದೇವಿಯೇ ||

ಸಾಹಿತ್ಯ – ಕೆ.ಎಸ್.ನಿಸಾರ್ ಅಹಮದ್
ಸಂಗೀತ/ಗಾಯನ – ಸಿ ಅಶ್ವಥ್

download naadadeviye kande ninna madilalli

Advertisements
 

ಟ್ಯಾಗ್ ಗಳು: ,

One response to “ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ / naadadeviye kande ninna

  1. Siddharudh P T

    ಜೂನ್ 13, 2014 at 12:07 ಅಪರಾಹ್ನ

    please correct: ಎದೆಯಾಯಿತದಕೆ “ವಶ್ಯ”.. not “ವರ್ಷ”.

     

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

 
%d bloggers like this: