RSS

ಹಾವು ಅಂದ್ರೆ ಮರಿ ಗುಬ್ಬಿಗೆ / haavu andre mari gubbige

08 ಜುಲೈ

click to play

ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ
ಅಮ್ಮ ಅಮ್ಮ ಬುಸ್ಸ್ ಬುಸ್ಸ್ ಹಾವು ಹ್ಯಾಗಿರತ್ತೆ ||

ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ
ಒಳ್ಳೆ ಪ್ರಶ್ನೆ ಹಾವು-ಹ್ಯಾಗಿರತ್ತೆ ಹಾವು ಹ್ಯಾಗಿರತ್ತೆ
ಹಾವಿರತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ
ಸಪೂರ ಥಳ ಥಳ ಕೆಂಡದ ಕಣ್ಣು ಕಡ್ಡಿ ದಪ್ಪಗೆ ||

ಸೂರಿಗೆ ಸುತ್ತಿ ಜೋತಾಡತ್ತೆ ಗೋಧಿ ಬೆನ್ನು
ದೀಪದ ಹಾಗೆ ಉರಿತಿರತ್ತೆ ಹಾವಿನ ಕಣ್ಣು
ಬುಸ್ಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ
ಇಡಿ ಇಡಿಯಾಗಿ ನುಂಗ್ ಬಿಡುತ್ತೆ ಹಕ್ಕಿ ಮೊಟ್ಟೆ

ಹಕ್ಕಿಯ ಮೊಟ್ಟೆ ನುಂಗಿದ್ ಮೇಲೆ ಇಡಿ ಇಡೀಲಿ
ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ
ಹಕ್ಕಿ ಮರಿ ಹುಟ್ಕೋಳ್ಳತ್ತೆ ಹಾವಿನ ಹೊಟ್ಟೆಲಿ
ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ

ನಿಟ್ಟುಸಿರಿತ್ತು ಅಮ್ಮ ಗುಬ್ಬಿ ಇಲ್ಲ ಬಂಗಾರ
ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ್ ಮೇಲೆ ಹೇಳೋದ್ ಇನ್ನೇನು
ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು

ಸಾಹಿತ್ಯ – ಹೆಚ್ ಎಸ್ ವೆಂಕಟೇಶ ಮೂರ್ತಿ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್ / ಬಿ ಆರ್ ಛಾಯಾ

download haavu andre mari gubbige

Advertisements
 

ಟ್ಯಾಗ್ ಗಳು: , ,

4 responses to “ಹಾವು ಅಂದ್ರೆ ಮರಿ ಗುಬ್ಬಿಗೆ / haavu andre mari gubbige

 1. Sandhya Bhat

  ಜುಲೈ 13, 2012 at 5:28 ಅಪರಾಹ್ನ

  ಹಾಯ್ ಅಭಿಜ್ಞ,
  ಈ ಹಾಡಿನ ವಿಡಿಯೋ ರೂಪವನ್ನು ಚಿಕ್ಕವಳಿದ್ದಾಗ ದೂರದರ್ಶನದಲ್ಲಿ ನೋಡ್ತಿದ್ದೆ.. ನನ್ನ ಅಕ್ಕನ ಮಗನಿಗೆ ತೋರಿಸ್ತೀನಿ ಅಂದಿದ್ದೆ. ವಿಡಿಯೋ ಸಿಕ್ಕಿಲ್ಲ ಆದ್ರೆ ಈ ಹಾಡನ್ನಂತೂ ಖಂಡಿತ ಕೇಳಿಸುತ್ತೇನೆ.
  ಥ್ಯಾಂಕ್ಯು ಮತ್ತೆ ಬಾಲ್ಯ ನೆನಪಿಸಿದ್ದಕ್ಕೆ..

   
  • coffeewithkiran

   ಜುಲೈ 15, 2012 at 10:00 ಅಪರಾಹ್ನ

   ಧನ್ಯವಾದಗಳು ಸಂಧ್ಯಾ
   ನಿಮ್ಮ ಅಕ್ಕನ ಮಗನ reaction ಹೇಗಿತ್ತು ಅಂತ ಹೇಳೋದು ಮರೀಬೇಡಿ ಮತ್ತೆ

    
 2. Ramamohana Endorse

  ಆಗಷ್ಟ್ 2, 2013 at 5:34 ಅಪರಾಹ್ನ

  dear kiran, I read about this site in news paper. You have done a great , wondderful job. But when I click the songs are nat playing. I’m using desk top with win7pro. Please guide me. my mail : ekrm2012@gmail.com. I’ll be eagerly waiting for your reply.
  regards,
  Ramamohana, Nanjangud (+919448150792)

   
 3. Anu Chandra

  ಆಗಷ್ಟ್ 4, 2014 at 6:35 ಅಪರಾಹ್ನ

  please kiranravare, preethige elle ellide nalle song haaki

   

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

 
%d bloggers like this: