RSS

ಕರವ ಜೋಡಿಸ ಬನ್ನಿ / karava jodisa banni

08 Jul

click to play

ಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿ
ಸ್ವರವ ಕೂಡಿಸ ಬನ್ನಿ ಒಕ್ಕೊರಲ ಘೋಷದಲಿ
ನವಯುಗದ ನಿರ್ಮಾಣ ಗೈವ ಶುಭ ಆಶಯಕೆ
ಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು ||

ಉತ್ತುಂಗ ಸಂಸ್ಕೃತಿಯ ವಾರಸಿಕೆ ಎಮಗಿಹುದು
ತಾಯ್ನೆಲೆದ ಉನ್ನತಿಯ ಆದರ್ಶ ಗುರಿಯಿಹುದು
ಕಷ್ಟಗಳನೆದುರಿಸುವ ಕೆಚ್ಚೆದೆಯ ಬಲವಿಹುದು
ವೈರಿಗಳ ವ್ಯೂಹಗಳ ಭೇದಿಸುವ ಛಲವಿಹುದು ||

ನಮನ ನಿರ್ಬಂಧಗಳ ಅಂಜಿಕೆಯು ನಮಗಿಲ್ಲ
ಆಳುವರ ಸರಕೃಪೆಯ ಆಸರೆಯ ಹಂಗಿಲ್ಲ
ಕಠಿಣ ಅಗ್ನಿಪರೀಕ್ಷೆಗಳಾ ಗೆದ್ದು ಬಂದಿಹೆವು
ಮರಣಕೂಪದಿ ಧುಮುಕಿ ಮೇಲೆದ್ದು ಬಂದಿಹೆವು ||

ಕಾಶ್ಮೀರದಾ ಕೂಗು ನಿಮಗೆ ಕೇಳಿಸದೇನು
ತಾಯೊಡಲ ತಳಮಳವು ಮನವ ಬಾಧಿಸದೇನು
ಮೆರೆಯುತಿರೆ ಎಲ್ಲೆಲ್ಲೂ ದ್ರೋಹಾವಿಚಿತ್ರತೆಯು
ಮೈಮರೆತು ಮಲಗಿದರೆ ಎಲ್ಲಿಹುದು ಭದ್ರತೆಯು ||

ನೀವು ಕಿವಿಗೊಡಬೇಡಿ ಸ್ವಾರ್ಥಿಗಳ ನುಡಿಗಳಿಗೆ
ಆಜ್ಯವನು ಎರೆಯದಿರಿ ಕುಟಿಲತೆಯ ಕಿಡಿಗಳಿಗೆ
ಸಹಕರಿಸಿ ಬೋಧನೆಗೆ ಬಲವೀವ ಸಾಧನೆಗೆ
ಹಿಂದು ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದನೆಗೆ ||

download karava jodisa banni

 

Tags:

3 responses to “ಕರವ ಜೋಡಿಸ ಬನ್ನಿ / karava jodisa banni

  1. lafontedeglidei

    July 9, 2012 at 2:24 am

    A salute to Sardinia compliments for your blog

     
  2. Shubhada Chadaga

    August 6, 2012 at 3:22 pm

    ಚೇತನಾ ಬ್ಲಾಗಲ್ಲಿ ನೀವು ಬರೆದ ಕಮೆಂಟ್ ಓದಿ ಹುಬ್ಬೇರಿಸ್ಕೊಂಡು ಇಲ್ಲಿ ಬಂದಿದ್ದಕ್ಕೂ ಸಾರ್ಥಕ ಆಯ್ತು! ಒಳ್ಳೊಳ್ಳೆ ಹಾಡುಗಳನ್ನೆಲ್ಲ ಒಟ್ಟು ಸೇರಿಸ್ತಾ ತುಂಬ ಒಳ್ಳೆಯ ಕೆಲಸ ಮಾಡ್ತಿದ್ದೀರಾ. ಹಾರ್ದಿಕ ಅಭಿನಂದನೆಗಳು. ಹೀಗೇ ಮುಂದುವರಿಸ್ತಿರಿ. ನನ್ನಂಥೋರಿಗೆ ತುಂಬ ಉಪಕಾರ ಆಗುತ್ತೆ🙂
    http://paarijata.blogspot.in/

     
    • coffeewithkiran

      August 6, 2012 at 5:53 pm

      🙂 Shubhada Chadaga ಧನ್ಯವಾದಗಳು…
      ಭೇಟಿ ಕೊಡುತ್ತಿರಿ…

       

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: