RSS

ಕಾಗದದ ದೋಣಿಗಳು / kaagadada donigalu

26 Aug

click to play

ಕಾಗದದ ದೋಣಿಗಳು ತೇಲಿದರು ಏನಂತೆ
ಮಿನುಗದೇ ಮರಿ ಬೆಳಕು ಮಡಿಲಿನಲ್ಲಿ
ತೆವಳಿದರು ಏನಂತೆ ಕಾಲಿರದ ಗಾಳಿ
ಚೆಲ್ಲದೇ ಕಂಪನ್ನು ದಾರಿಯಲ್ಲಿ

ನಾರುವ ಗೊಬ್ಬರವು ಜೀವರಸವಾಗಿ
ಊರದೇ ಪರಿಮಳವ ಮಲ್ಲಿಗೆಯಲಿ
ತಿಂದೆಸೆದ ಓಟೆಯೂ ಮರವಾಗಿ ಹರವಾಗಿ
ವರವಾಗದೇ ಹೇಳು ಹಣ್ಣಿನಲ್ಲಿ || ಕಾಗದದ ||

ಉಪ್ಪಾದರೂ ಕಡಲು ನೀರ ಒಡಲಲ್ಲಿಟ್ಟು
ಸೀನೀರ ಮೋಡಗಳ ಸೃಜಿಸದೇನು
ಸಾಗರಕೆ ಬಿದ್ದ ಜಲ ಕೂಡಿಟ್ಟ ಅನ್ನ ಬಲ
ಕಾಯುವುದು ಸಮಯದಲಿ ಲೋಕವನ್ನು || ಕಾಗದದ ||

ಒಂದೊಂದು ವಸ್ತುವೂ ಒಂದೊಂದು ಮಾಯೆ
ಒಂದೊಂದಕೂ ಸ್ವಂತ ಧಾಟಿ ನಡಿಗೆ
ಹಗುರಾದ ಬಾಳಿಗೂ ಹಿರಿದಾದ ಧ್ಯೇಯವಿದೆ
ನಗೆಗೆ ಗುರಿ ಏನಿಲ್ಲ ಸೃಷ್ಟಿಯೊಳಗೆ || ಕಾಗದದ ||

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ / ಗಾಯನ – ಸಿ ಅಶ್ವಥ್

download kaagadada donigalu

Advertisements
 

Tags: , , , , ,

One response to “ಕಾಗದದ ದೋಣಿಗಳು / kaagadada donigalu

  1. Nanjunda Raju Raju

    March 18, 2013 at 6:46 pm

    ಮಾನ್ಯ ಕಿರಣ್ ರವರೇ ಕನ್ನಡ ಮತ್ತು ಕನ್ನಡ ಸಾಹಿತ್ಯವನ್ನು ಉಳಿಸುವ ಬಗ್ಗೆ ನಿಮ್ಮ ಪ್ರಯತ್ನ ತುಂಬಾ ಹಿರಿದಾದುದು. ಇದು ತುಂಬಾ ಶ್ಲಾಘನೀಯ. ನಿಮ್ಮ ತಾಣದಿಂದ ಪ್ರಖ್ಯಾತ ಸಾಹಿತಿಗಳ ಸುಮುಧುರ ಭಾವಗೀತೆಗಳನ್ನು ಖ್ಯಾತ ಗಾಯಕರಿಂದ ಸುಮಧುರವಾಗಿ ಕೇಳಲು ಅನುಕೂಲ ಮಾಡಿಕೊಟ್ಟಿದ್ದೀರಿ. ಎಲ್ಲಾ ಕನ್ನಡಿಗರಪರವಾಗಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು.

     

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: