RSS

ತೌರ ಸುಖದೊಳಗೆನ್ನ / toura sukhadolagenna

26 ಆಗಸ್ಟ್

click to play

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು

ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ
ನೀಲಾಂಬರದ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ || ತೌರ ||

ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ
ಐದು ತಿಂಗಳ ಕಂದ ನಗುತಲಿಹುದು || ತೌರ ||

ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೇನೆ ನಾನು ಇಲ್ಲೇ || ತೌರ ||

ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ
ಅಚ್ಚಮಲ್ಲಿಗೆಯರಳು ಬಿರಿಯುತಿಹುದು
ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ
ಚುಚ್ಚದಿರಿ ಮೊನೆಯಾದ ಮಾತನೆಸೆದು || ತೌರ ||

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್

download toura sukhadolagenna

Advertisements
 

ಟ್ಯಾಗ್ ಗಳು: , , , , ,

9 responses to “ತೌರ ಸುಖದೊಳಗೆನ್ನ / toura sukhadolagenna

  1. Sandhya Bhat

    ಸೆಪ್ಟೆಂಬರ್ 3, 2012 at 11:23 ಫೂರ್ವಾಹ್ನ

    One of my fav song… Thank you Kiran…:)

     
  2. Balasubrahmanya Nimmolagobba Balu

    ಅಕ್ಟೋಬರ್ 2, 2012 at 6:02 ಫೂರ್ವಾಹ್ನ

    nanna ishtada haadu idu , bhaavageete chennaagide.

     
    • coffeewithkiran

      ಅಕ್ಟೋಬರ್ 2, 2012 at 7:42 ಅಪರಾಹ್ನ

      thanks for your comment sir, yes very meaningful song

       
  3. Pramod

    ನವೆಂಬರ್ 15, 2012 at 12:27 ಅಪರಾಹ್ನ

    One of my fav 🙂

     
  4. coffeewithkiran

    ನವೆಂಬರ್ 15, 2012 at 2:25 ಅಪರಾಹ್ನ

    welcome to my blog pramod

     
  5. Deepika Appajigowda

    ಫೆಬ್ರವರಿ 5, 2013 at 11:31 ಅಪರಾಹ್ನ

    aww…. nanage bahala istavaada haadu idu… share maadidakke tumba thanks..:)

     
  6. Badrinath Sharma

    ನವೆಂಬರ್ 1, 2014 at 11:19 ಫೂರ್ವಾಹ್ನ

    Ratnamalaji you are chranjivi,this song itself is enough to remember you for ever.

     

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: