RSS

ಇವಳೇ ಇವಳೇ ಇವಳೇ ನನ್ನ ಕಾವ್ಯದ ಸೆಲೆ / ivale ivale ivale nanna kaavyada sele

20 ಸೆಪ್ಟೆಂ

click to play

ಇವಳೇ ಇವಳೇ ಇವಳೇ ನನ್ನ ಕಾವ್ಯದ ಸೆಲೆ
ಇವಳೊಬ್ಬಳೆ ನನ್ನ ಜೀವದ ನೆಲೆ ||

ಇವಳೆ ಭಾವಗಳ ಹಾವಾಡಿಸುವ ಬಾಲೆ
ಇವಳೆ ಕಲ್ಪನೆಯ ಹರಿದಾಡಿಸುವ ನಾಲೆ
ಇವಳ ಹೆಗಲೆ ನನ್ನ ಕನಸುಗಳ ಜಗಲಿ
ಇವಳ ಕೆನ್ನೆಯ ಗುಳಿಯೇ ಕಾವ್ಯದ ಸುಳಿ || ಇವಳೇ ||

ಇವಳ ನಡೆಯೆ ನನ್ನ ಕವನಗಳ ಚಂದ
ಇವಳ ಆಲಿಂಗನ ಕವನಗಳ ಬಂಧ
ಧಮನಿ ಧಮನಿಗಳಲೀ ಇವಳ ಚೈತನ್ಯ
ಕಬ್ಬಿಣವು ಕಾಂತವಾಯ್ತು ಕಾವ್ಯ ಧನ್ಯ || ಇವಳೇ ||

ಇವಳ ಕಟಿಯೆ ಕಾವ್ಯಕ್ಕೆ ಗಂಗಾತಟಿ
ರಸಋಷಿಗೆ ಅಲ್ಲಿಹುದು ಕಿರುಪರ್ಣಕುಟಿ
ಇವಳ ಸಂಗವೆ ನನಗೆ ಸಂಗಯ್ಯನೊಲುಮೆ
ಅಮರಾವತಿಯು ಕೂಡ ಇದಕಿಂತ ಕಡಿಮೆ || ಇವಳೇ ||
ಸಾಹಿತ್ಯ – ?
ಸಂಗೀತ / ಗಾಯನ – ಸಿ ಅಶ್ವಥ್
Advertisements
 

ಟ್ಯಾಗ್ ಗಳು: , , , , , ,

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: