RSS

ಬಾರೆ ನನ್ನ ದೀಪಿಕಾ / baare nanna deepika

05 ಆಗಸ್ಟ್

click to play

ಬಾರೆ ನನ್ನ ದೀಪಿಕಾ
ಮಧುರ ಕಾವ್ಯ ರೂಪಕ

ಕಣ್ಣ ಮುಂದೆ ಸುಳಿಯೆ ನೀನು
ಕಾಲದ ತೆರೆ ಸರಿದು ತಾನು
ಜನುಮ ಜನುಮ ಜ್ಞಾವಕ

ನಿನ್ನ ಬೊಗಸೆ ಕಣ್ಣಿಗೆ ಕೆನ್ನೆ ಜೇನು ದೊನ್ನೆಗೆ
ಸಮಯಾವುದೆ ಚೆನ್ನೆ ನಿನ್ನ ಜಡೆ ಹರಡಿದ ಬೆನ್ನಿಗೆ || ಬಾರೆ ||

ನಿನ್ನ ಕನಸು ಬಾಳಿಗೆ ಧೂಪದಂತೆ ಗಾಳಿಗೆ
ಬೀಸಿಬರಲು ಜೀವ ಹಿಗ್ಗಿ ವಶವಾಯಿತೆ ದಾಳಿಗೆ || ಬಾರೆ ||

ಮುಗಿಲ ಮಾಲೆ ನಭದಲಿ ಹಾಲು ಪೈರು ಹೊಲದಲಿ
ರೂಪಿಸುತಿದೆ ನಿನ್ನ ಪ್ರೀತಿ ಕವಿತೆಯೊಂದ ಎದೆಯಲಿ || ಬಾರೆ ||

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ /ಗಾಯನ – ಸಿ ಅಶ್ವಥ್
 

download baare nanna deepika

 

ಟ್ಯಾಗ್ ಗಳು: , , , , , ,

ನಿಮ್ಮ ಟಿಪ್ಪಣಿ ಬರೆಯಿರಿ