RSS

ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ / hattu varushada hinde muttoora terinali

11 Dec

click to play

ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಅಲೆದವರು ನೀವಲ್ಲವೆ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈಹಿಡಿದವರು ನೀವಲ್ಲವೆ

ಬೆಟ್ಟಗಳ ಬೆನ್ನಿನಲಿ ಬೆಟ್ಟಗಲ ದಾರಿಯಲಿ
ಕಟ್ಟಿಕೊಂಡಲೆದವರು ನೀವಲ್ಲವೆ
ತಿಟ್ಟಿನಲಿ ಮುಂದಾಗಿ, ಕಣಿವೆಯಲಿ ಹಿಂದಾಗಿ
ನಗುನಗುತ ನಡೆದವರು ನೀವಲ್ಲವೆ

ಬಾಗಿಲಿಗೆ ಬಂದವರು, ಬೇಗ ಬಾ ಎಂದವರು
ಬಂದುದೇಕೆಂದವರು ನೀವಲ್ಲವೆ
ನೋಡು ಬಾ ಎಂದವರು, ಬೇಡ ಹೋಗೆಂದವರು
ಎಂದಿಗೂ ಬಿಡದವರು ನೀವಲ್ಲವೆ

ಸೆರೆಗೆಳೆದು ನಿಲ್ಲಿಸಿದ, ಜಡೆಯೆಳೆದು ನೋಯಿಸಿದ
ಬಯಲು ಸೀಮೆಯ ಜಾಣ ನೀವಲ್ಲವೆ
ಮೊದಲಿರುಳ ಹೊಂಗನಸ ಮುನ್ನೀರ ದಾಟಿಸಿದ
ಬೆಳಕು ಬೆಡಗಿನ ಹಡಗ ನೀವಲ್ಲವೆ

ಮುತ್ತೆಂದು ಕರೆದವರು, ತೊತ್ತೆಂದು ಜರೆದವರು
ಎತ್ತರದ ಮನೆಯವರು ನೀವಲ್ಲವೆ
ನೀನೆ ಸಾಕೆಂದವರು ನೀನೆ ಬೇಕೆಂದವರು
ಚಿತ್ತದಲಿ ನಿಂತವರು ನೀವಲ್ಲವೆ

ಸಾಹಿತ್ಯ –  ಕೆ.ಎಸ್. ನರಸಿಂಹಸ್ವಾಮಿ

ಸಂಗೀತ – ?

ಗಾಯನ – ಜಯವಂತಿ ದೇವಿ ಹಿರೇಬೆಟ್‌

ಅಭಿಜ್ಞಾ ಕಡೆಯಿಂದ ಜಯವಂತಿ ದೇವಿ ಹಿರೇಬೆಟ್‌ ಅಜ್ಜಿಗೆ ಒಂದು ಸಲಾಮ್🙂

download hattu varushada hinde muttoora terinali

 

 

 

Tags: , , , , , , ,

One response to “ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ / hattu varushada hinde muttoora terinali

  1. ಪ್ರಕಾಶ ಶಾರದಾಶ್ಯಾಮಭಟ್ಟ

    December 12, 2013 at 12:52 pm

    ತುಂಬಾ ಅಪರೂಪದ ಪದ್ಯಗಳನ್ನು ಕೇಳಿಸುತ್ತಿದ್ದೀರಾ…ಧನ್ಯವಾದಗಳು..” ವಸಂತ ಬಂದಾ ಋತುಗಳ ರಾಜ ತಾ ಬಂದ ” ಕೇಳಬೇಕೆನಿಸುತ್ತಿದೆ.

     

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: