RSS

ಎಂಥಾ ಹದವಿತ್ತೇ ಹರೆಯಕೆ / enthaa hadavithe hareyake

25 ಡಿಸೆ

click to play

ಎಂಥಾ ಹದವಿತ್ತೇ ಹರೆಯಕೆ
ಏನೋ ಮುದವಿತ್ತೇ
ಅಟ್ಟೀ ಹಿಡಿದು ಮುಟ್ಟೀ ತಡೆದು
ಗುಟ್ಟೂ ಸವಿಯಿತ್ತೇ ಗೆಳತಿ ।। ಎಂಥಾ ।।

ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ
ಹೂವನು ಚೆಲ್ಲಿತ್ತೇ
ಅಮ್ಮನು ಬಡಿಸಿದ ಊಟದ ಸವಿಯು
ಘಮ್ಮನೆ ಕಾಡಿತ್ತೇ
ಅಣ್ಣನ ಕೀಟಲೆ ತಮ್ಮನ ಕಾಟಕೆ
ಬಣ್ಣದ ಬೆಳಕಿತ್ತೇ ।। ಎಂಥಾ ।।

ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ
ಸುಳ್ಳಿನ ಸೊಬಗಿತ್ತೇ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು
ಬೆಲ್ಲವ ಮೀರಿತ್ತೇ
ಸುಳ್ಳೇ ನಿರಿಗೆಯ
ಚಿಮ್ಮುವ ನಡಿಗೆಗೆ
ಬಳ್ಳಿಯ ಬೆಡಗಿತ್ತೇ

ಎಂಥಾ ಹದವಿತ್ತೇ ಗೆಳತಿ
ಎಂಥಾ ಮುದವಿತ್ತೇ
ಕಾಣದ ಕೈಯಿ ಎಲ್ಲಾ ಕದ್ದು
ಉಳಿಯಿತು ನೆನಪಷ್ಟೇ

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಸಿ ಅಶ್ವಥ್
ಗಾಯನ – ಸುಲೋಚನ

download enthaa hadavithe

Advertisements
 

ಟ್ಯಾಗ್ ಗಳು: , , , , , , , ,

One response to “ಎಂಥಾ ಹದವಿತ್ತೇ ಹರೆಯಕೆ / enthaa hadavithe hareyake

  1. Shiela Nayak

    ಡಿಸೆಂಬರ್ 25, 2013 at 10:37 ಅಪರಾಹ್ನ

    ಮತ್ತೆ ಹಳೆಯ ದಿನಗಳೆಲ್ಲ ನೆನಪಿಗೆ ತಂದಿತು ಈ ಕವನ! ಥಾಂಕ್ಸ್ ಕಣ್ರೀ!

     

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: