RSS

Category Archives: ಎಂ ಎನ್ ವ್ಯಾಸರಾವ್

ನಿನ್ನ ಕಂಗಳ ಕೊಳದಿ / ninna kangala koladi

click to play

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರೆ ಕನಸುಗಳು ಕಾಡುತಿಹುದು ।। ನಿನ್ನ ಕಂಗಳ ।।

ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು ।। ನಿನ್ನ ಕಂಗಳ ।।

ನಾನೊಂದು ದಡದಲ್ಲಿ ನೀನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಡವು
ಯಾವ ದೋಣಿಯು ತೇಲಿ ಎಂದು ಬರುವುದೊ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು ।। ನಿನ್ನ ಕಂಗಳ ।।

ಸಾಹಿತ್ಯ – ಎಂ ಎನ್ ವ್ಯಾಸರಾವ್
ಸಂಗೀತ – ಸಿ ಅಶ್ವಥ್
ಗಾಯನ – ಸುಪ್ರಿಯಾ ಆಚಾರ್ಯ
 
download ninna kangala koladi
Advertisements
 

ಟ್ಯಾಗ್ ಗಳು: , , , , , , ,

ನಲ್ಲೆ ನಿನ್ನ ಕೆನ್ನೆ ಸುತ್ತ ಜೇನಿಗೇನು ಕೆಲಸ / nalle ninna kenne sutta

click to play

ನಲ್ಲೆ ನಿನ್ನ ಕೆನ್ನೆ ಸುತ್ತ ಜೇನಿಗೇನು ಕೆಲಸ
ನನ್ನ ನೋಡದಂಥ ಸಿಟ್ಟೇ ಏಕೆ ಇಂಥ ವಿರಸ || ನಲ್ಲೆ ||

ನನ್ನ ಒಲವು ಪುಟ್ಟ ಹಣತೆ ಹಚ್ಚಿದವಳು ನೀನೆ
ಆರದಂತೆ ಕಾವು ಕೊಟ್ಟು ಉರಿಸಿದವರು ಯಾರೇ || ನಲ್ಲೆ ||

ಚಂದ್ರಬಿಂಬ ತುಳುಕದಂತೆ ಕೊಳದ ತುಂಬ ಹೂ
ನನ್ನ ಎದೆಯ ಆಳದೊಳಗೆ ನೂರು ಬಗೆಯ ನೋವು || ನಲ್ಲೆ ||

ಚದುರಬೇಕೆ ಮುಗಿಲ ಚಿತ್ರ ಬಾನ ಕಣ್ಣಿನಿಂದ
ಹೊರಳಬೇಕೆ ನಿನ್ನ ಚಿತ್ತ ನನ್ನ ಸನಿಹದಿಂದ || ನಲ್ಲೆ ||

ಸಾಹಿತ್ಯ – ಎಂ ಎನ್ ವ್ಯಾಸರಾವ್
ಸಂಗೀತ / ಗಾಯನ – ಸಿ ಅಶ್ವಥ್

download nalle ninna kenne

 

ಟ್ಯಾಗ್ ಗಳು: , , , , ,

ನೀನಿಲ್ಲದೇ ನನಗೇನಿದೇ / Neenillade nanagenide

ನೀನಿಲ್ಲದೇ ನನಗೇನಿದೇ
ಮನಸ್ಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ
ಕನಸ್ಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೇ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವೂ ಹಗಲಿರುಳು ತಂದೇ ನೀನು
ಎದೆಯಾಸೆ ಏನೋ ಎಂದೂ ನೀ ಕಾಣದಾದೇ
ನಿಶೆಯೊಂದೆ ನನ್ನಲ್ಲೀ ನೀ ತುಂಬಿದೇ
ಬೆಳಕೊಂದೆ ನಿನ್ನಿಂದಾ ನಾ ಬಯಸಿದೇ

ನೀನಿಲ್ಲದೇ ನನಗೇನಿದೇ…

ಒಲವೆಂಬ ಕಿರಣಾ ಬೀರೀ ಒಳಗಿರುವ ಕಣ್ಣಾ ತೆರೆಸೀ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದಾ ನಾ ತಾಳುವೇ
ಹೊಸ ಲೋಕ ನಿನ್ನಿಂದಾ ನಾ ಕಾಣುವೇ

ನೀನಿಲ್ಲದೇ ನನಗೇನಿದೇ …

ಸಾಹಿತ್ಯ – ಎಂ ಎನ್ ವ್ಯಾಸರಾವ್
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ

download neenillade nanagenide

 

ಟ್ಯಾಗ್ ಗಳು: , , , , , ,