RSS

Category Archives: ಕುವೆಂಪು

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ / gudi charchu masajeedigala bittu

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ

ಬಡತನವ ಬುಡಮಟ್ಟ ಕೀಳಬನ್ನಿ

ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ಓ ಬನ್ನಿ ಸೋದರರೆ ಬೇಗ ಬನ್ನಿ ।। ಗುಡಿ||

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ ।। ಗುಡಿ ।।

ಸಾಹಿತ್ಯ – ಕುವೆಂಪು
ಸಂಗೀತ – ಸಿ ಅಶ್ವಥ್
ಗಾಯನ – ವೈ ಕೆ ಮುದ್ದುಕೃಷ್ಣ

download gudi charchu masajeedigala bittu horabanni

 

ಟ್ಯಾಗ್ ಗಳು: , , , , , , ,

ಎಲ್ಲಾದರು ಇರು ಎಂತಾದರು ಇರು / ellaadaru iru entaadaru iru

click to play

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು ।। ಎಲ್ಲಾದರು ।।
ನೀ ಮೆಟ್ಟುವ ನೆಲ ಅದೇ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಪಂಪನನೋದುವ ನಿನ್ನ ನಾಲಗೆ ಕನ್ನಡವೇ ಸತ್ಯ
ಕುಮಾರವ್ಯಾಸನನಾಲಿಪ ಕಿವಿಯದು ಕನ್ನಡವೇ ನಿತ್ಯ
ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಮಲೆನಾಡಿಗೆ ಹೊಂಪುಳಿ ಹೋಗುವ ಮನ
ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರೋಮಾಂಚನಗೊಳುವಾತನಾ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್ ಕನ್ನಡವೇ ಸತ್ಯ
ಕನ್ನಡವೇ ನಿತ್ಯ ಅನ್ಯವೆನಲದೇ ಮಿಥ್ಯ

ಸಾಹಿತ್ಯ – ಕುವೆಂಪು
ಸಂಗೀತ – ಉಪೇಂದ್ರ ಕುಮಾರ್
ಗಾಯನ – ಶಿವಮೊಗ್ಗ ಸುಬ್ಬಣ್ಣ

download elaadaru iru entaadaru iru

 

ಟ್ಯಾಗ್ ಗಳು: , , , , , , ,

ಬಾರಿಸು ಕನ್ನಡ ಡಿಂಡಿಮವ / baarisu kannada dimdimava

click to play

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು ।। ಬಾರಿಸು ।।

ಕ್ಷಯಿಸೆಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ ।। ಬಾರಿಸು ।।

ಸಾಹಿತ್ಯ – ಕುವೆಂಪು
ಸಂಗೀತ –  ಸಿ ಅಶ್ವಥ್
ಗಾಯನ – ಶಿವಮೊಗ್ಗ ಸುಬ್ಬಣ್ಣ
 
download baarisu kannada dimdimava
 

ಟ್ಯಾಗ್ ಗಳು: , , , , , , , ,

ಮನು ನಿನಗೆ ನೀನು / manu ninage neenu

click to play

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು
ಎಂದೋ ಮನು ಬರೆದಿತ್ತುದಿಂದೆಮಗೆ ಕಟ್ಟೇನು
ನಿನ್ನೆದೆಯ ದನಿಯೇ ಋಷಿ
ಮನು ನಿನಗೆ ನೀನು, ಮನು ನಿನಗೆ ನೀನು, ಮನು ನಿನಗೆ ನೀನು ।।

ನೀರಡಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನದೊರೆಯಾ ಬೇಕೇನು
ನೊಂದವರ ಕಂಬನಿಯನೊರೆಸಿ ಸಂತ್ಯಸುವಳೇ
ಶಾಸ್ತ್ರಪ್ರಮಾಣ ಅದಕಿರಲೇ ಬೇಕೇನು ।। ಯಾವ ।।

ಹಿಂದಿನ ಋಷಿಗಳು ಮಾನವರೇ ನಮ್ಮಂತೆ
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ ।। ಯಾವ ।।

ಸಾಹಿತ್ಯ – ಕುವೆಂಪು
ಸಂಗೀತ – ಸಿ ಅಶ್ವಥ್
ಗಾಯನ – ರಾಜು ಅನಂತಸ್ವಾಮಿ
 
download yaava kaalada shaastravenu
 

ಟ್ಯಾಗ್ ಗಳು: , , , , , , , ,

ನೂರು ದೇವರನೆಲ್ಲ ನೂಕಾಚೆ ದೂರ / nooru devaranella nookaache doora

click to play

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ ||

ಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು ।। ಭಾರತಾಂಬೆಯೇ ।।

ಗುಡಿಯೊಳಗೆ ಕಣ್ ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಘಂಟೆ ಜಾಗಟೆಗಳಿನ್ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿನ್ ನುಡಿದು ।। ಭಾರತಾಂಬೆಯೇ ।।

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಒಯ್ದು
ಚಳಿಯು ಮಳೆಯಲಿ ನೆನೆವ ತಾಯ್ಗೆ ಹಾಕು ।। ಭಾರತಾಂಬೆಯೇ ।।

ಸಾಹಿತ್ಯ – ಕುವೆಂಪು
ಸಂಗೀತ / ಗಾಯನ – ಸಿ ಅಶ್ವಥ್

download nooru devaranella nookaache doora

 

ಟ್ಯಾಗ್ ಗಳು: , , , , , , , ,

ಕತ್ತಲೆಯ ಬಸಿರಿಂದೆ ಮೆಲ್ಲಮೆಲ್ಲನೆ / kattaleya basirinde mellamellane

click to play

ಕತ್ತಲೆಯ ಬಸಿರಿಂದೆ ಮೆಲ್ಲಮೆಲ್ಲನೆ
ಪೊರಗೆ ಪೊಣ್ಮುತಿದೆ ಶಿಖರಕಂದರಮಯಂ ಸಹ್ಯಾದ್ರಿ
ಸ್ಪಷ್ಟತರವಾಗುತಿರೆ ಭೂವ್ಯೋಮಗಳ ಸಂಧಿ
ದೃಶ್ಯಚಕ್ರದ ನೇಮಿಯಂದದಿ ದಿಗಂತಫಣಿ
ಸುತ್ತುವರಿದಿದೆ ದೃಷ್ಟಿವಲಯಮಂ
ನಾಣ್ಗೆಂಪು ಮೊಗದೊಳೇರುವ ಉಷಾ ಭೋಗಿನಿಯ ಫಣೆಯಲ್ಲಿ
ಬೆಳ್ಳಿ ಉಜ್ವಲ ತಾರೆ
ಕುಂಕುಮ ಹರಿದ್ರದಿಂ ರಂಜಿಸುವ ಪೊಂಬಣೆಗೆ
ರಜತ ತಿಲಕದ ಬಿಂದು ತಾನೆನೆ ವಿರಾಜಿಸಿದೆ

ಸಾಹಿತ್ಯ – ಕುವೆಂಪು
ಸಂಗೀತ – ಶ್ರೀನಿವಾಸ್
ಗಾಯನ – ಬಿ ಕೆ ಸುಮಿತ್ರ

download kattaleya basirinde

 

ಟ್ಯಾಗ್ ಗಳು: , , , , , , , ,

ದೀಕ್ಷೆಯ ತೊಡು ಇಂದೇ / deeksheya todu inde

click to play

ದೀಕ್ಷೆಯ ತೊಡು ಇಂದೇ
ಕಂಕಣ ಕಟ್ಟಿಂದೇ
ಕನ್ನಡ ನಾಡೊಂದೇ
ಇನ್ನೆಂದೂ ತಾನೊಂದೇ ।।

ನೃಪತುಂಗನ ದೊರೆಮುಡಿ ಸಾಕ್ಷಿ
ಪಂಪನ ಪದ ಧೂಳಿಯ ಸಾಕ್ಷಿ
ಕೂಡಲ ಸಂಗನ ಅಡಿ ಸಾಕ್ಷಿ
ಗದುಗಿನ ಕವಿದೇವನ ಸಾಕ್ಷಿ ।। ದೀಕ್ಷೆಯ ।।

ಇಡು ಸಹ್ಯಾದ್ರಿಯ ಮೇಲಾಣೆ
ಇಡು ಕಾವೇರಿಯ ಮೇಲಾಣೆ
ಇಡು ಚಾಮುಂಡಿಯ ಮೇಲಾಣೆ
ಇಡು ಗೊಮ್ಮಟ ಗುರುದೇವಾಣೆ ।। ದೀಕ್ಷೆಯ ।।

ಕಾಣಲಿ ಕನ್ನಡ ವ್ಯೋಮಾಕ್ಷಿ
ನಿಲ್ಲಲಿ ರವಿ ಚಂದ್ರರ ಸಾಕ್ಷಿ
ಕೇಳಲಿ ಕನ್ನಡ ಪಶು ಪಕ್ಷಿ
ಸರ್ವ ದೇವರೂ ಶ್ರೀ ಸಾಕ್ಷಿ ।। ದೀಕ್ಷೆಯ ।।

ಇಡು ನಿನ್ನಯ ಸತಿಯಾಣೆ
ಇಡು ನಿನ್ನಯ ಪತಿಯಾಣೆ
ಮಕ್ಕಳ ಮೇಲಾಣೆ
ಅಕ್ಕರೆ ಮೇಲಾಣೆ
ಗುರುದೇವರ ಆಣೆ
ನನ್ನಾಣೆ
ನಿನ್ನಾಣೆ
ತೊಡು ದೀಕ್ಷೆಯ
ಇಡು ರಕ್ಷೆಯ
ಕಂಕಣ ಕಟ್ಟಿಂದೇ
ಇನ್ನೆಂದೂ ತಾನೊಂದೇ
ಕನ್ನಡ ನಾಡೊಂದೇ

ಸಾಹಿತ್ಯ – ಕುವೆಂಪು

ಸಂಗೀತ – ಸಿ ಅಶ್ವಥ್

ಗಾಯನ – ರತ್ನಮಾಲ ಪ್ರಕಾಶ್ / ನರಸಿಂಹ ನಾಯಕ್

download deeksheya todu inde

 

ಟ್ಯಾಗ್ ಗಳು: , , , , , , ,

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ / baagilolu kai mugidu

click to play

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು… ಕಲೆಯ ಬಲೆಯು ||

ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ  ।। ಬಾಗಿಲೊಳು ।।

ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ ||
ಕರ್ಪೂರದಾರತಿಯ ಜ್ಯೋತಿ ಇಲ್ಲ

ಭಗವಂತನಾನಂದ ರೂಪುಗೊಂಡಿಹುದಿಲ್ಲಿ ।।
ರಸಿಕತೆಯ ಕಡಲುಕ್ಕಿ ಹರಿಹುದಿಲ್ಲಿ ।।

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಬೋಧಿಸಿದೆ ಭಾರತವನಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುತಿದೆ ಭೂಭಾರವಿಲ್ಲಿ

ಸಾಹಿತ್ಯ – ಕುವೆಂಪು

ಸಂಗೀತ – ಮೈಸೂರು ಅನಂತಸ್ವಾಮಿ

ಗಾಯನ – P ಕಾಳಿಂಗ ರಾವ್

download baagilolu kai mugidu

 

 

 

 

ಟ್ಯಾಗ್ ಗಳು: , , , , , , ,

ಬೇಸರಿನ ಸಂಜೆಯಿದು \ besarina sanjeyidu

click to play

ಬೇಸರಿನ ಸಂಜೆಯಿದು ಬೇಕೆನಗೆ ನಿನ್ನ ಜತೆ

ಎಲ್ಲಿ ಹೋದೆಯೋ ಇನಿಯ ಬಾ ಬೇಗನೇ (2) || ಬೇಸರಿನ||

ಮಬ್ಬು ಕವಿದಿದೆ ನಭಕೆ ಮಂಕು ಕವಿದಿದೆ ಮನಕೆ (2)

ವಿರಹವಿದೆ ಕರೆಯುತಿದೆ ಬಾ ಬೇಗನೇ ಬಾ ಬೇಗನೆ || ಬೇಸರಿನ ||

 

ಮುಳುಗಿದುದು ರವಿ ಓಕುಳಿಯ ಚೆಲ್ಲಿದುದು ಸಂಧ್ಯೆ

ಮತ್ತೆಯೊಯ್ಯನೆ ಬೂದಿಯಾಯ್ತು ಕಾಂತಿ (2)

ಕತ್ತಲೆಯ ಕರಿನೆಳಲೊಳನೆ ಮೂಡಿದುವು ತಾರೆ (2)

ಹಬ್ಬಿಹುದು ಮರುಭೂಮಿಯಂತೆ ಶಾಂತಿ (2) || ಬೇಸರಿನ ||

 

ಮನೆಯ ಬಾಗಿಲೊಳೊಬ್ಬಳೆಯೆ ಕುಳಿತು ಹೊಸ್ತಿಲಲಿ

ಹಾದಿ ನೋಡುತಲಿಹೆನು ಬಾ ಬೇಗನೆ (2)

ಹೃದಯ ಶೂನ್ಯತೆಯ ಪರಿಹರಿಸಿ ಪೂರ್ಣತೆಯಿತ್ತು (2)

ಮುದಗೊಳಿಸು ಹೃದಯೇಶ ಬಾ ಬೇಗನೆ (2) || ಬೇಸರಿನ ||

ಸಾಹಿತ್ಯ – ಕುವೆಂಪು
ಸಂಗೀತ – ಬಿ ವಿ ಶ್ರೀನಿವಾಸ್
ಗಾಯನ -ಕಸ್ತೂರಿ ಶಂಕರ್
 
download besarina sanjeyidu
 

ಟ್ಯಾಗ್ ಗಳು: , , , , ,

ಹಾಲು ಹಳ್ಳ ಹರಿಯಲಿ / haalu halla hariyali

click to play

ಹಾಲು ಹಳ್ಳ ಹರಿಯಲಿ
ಬೆಣ್ಣೆ ಬೆಟ್ಟವಾಗಲಿ
ಜೇನು ಮಳೆಯು ಸುರಿಯಲಿ
ತೊಟ್ಟಿಲೊಲಿದು ತೂಗಲಿ || ಹಾಲು ||

ಪೈರು ಪಚ್ಚೆ ಬೆಳೆಯಲಿ
ತೆನೆಯ ಚಿನ್ನ ಹೊಳೆಯಲಿ
ಹಕ್ಕಿ ಹೊಟ್ಟೆ ತಣಿಯಲಿ
ಮಿಗವು ಸೊಗಸಿ ನಲಿಯಲಿ || ಪೈರು ||

ಮುಗಿದು ಸಮರ ನರಗಲಿ
ನರರು ನರರ ನಂಬಲಿ
ಸ್ವಾಮಿ ಅಮೃತ ಕೃಪೆಯಲಿ
ಶಾಂತಿ ಜಗವ ತುಂಬಲಿ

ಸಾಹಿತ್ಯ – ಕುವೆಂಪು
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್
 
download haalu halla hariyali
 

ಟ್ಯಾಗ್ ಗಳು: , , , , , ,