RSS

Category Archives: ಕೆ.ಎಸ್. ನರಸಿಂಹಸ್ವಾಮಿ

ಮಾಯಾಮೃಗ / maayamruga

click to play

ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ ||

ಬಲು ದೂರದಿ ಹೊಳೆಯುತ್ತಿದೆ ಬಾನೀಲಿಯ ಕೆಳಗೆ ||

ಹೊಳೆಯುತ್ತಿವೆ ಕಣ್ಣಂತು ಬಿಡಿವಜ್ರದ ಹಾಗೆ ||

ಶರವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ ||

ಸಾಹಿತ್ಯ –  ಕೆ.ಎಸ್. ನರಸಿಂಹಸ್ವಾಮಿ
ಸಂಗೀತ –  ಸಿ ಅಶ್ವಥ್
ಗಾಯನ – ಮಂಜುಳಾ ಗುರುರಾಜ್, ಎಂ ಡಿ ಪಲ್ಲವಿ,, ಅರ್ಚನಾ ಉಡುಪ
 
download maayamruga
Advertisements
 

ಟ್ಯಾಗ್ ಗಳು: , ,

ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ / hattu varushada hinde muttoora terinali

click to play

ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಅಲೆದವರು ನೀವಲ್ಲವೆ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈಹಿಡಿದವರು ನೀವಲ್ಲವೆ

ಬೆಟ್ಟಗಳ ಬೆನ್ನಿನಲಿ ಬೆಟ್ಟಗಲ ದಾರಿಯಲಿ
ಕಟ್ಟಿಕೊಂಡಲೆದವರು ನೀವಲ್ಲವೆ
ತಿಟ್ಟಿನಲಿ ಮುಂದಾಗಿ, ಕಣಿವೆಯಲಿ ಹಿಂದಾಗಿ
ನಗುನಗುತ ನಡೆದವರು ನೀವಲ್ಲವೆ

ಬಾಗಿಲಿಗೆ ಬಂದವರು, ಬೇಗ ಬಾ ಎಂದವರು
ಬಂದುದೇಕೆಂದವರು ನೀವಲ್ಲವೆ
ನೋಡು ಬಾ ಎಂದವರು, ಬೇಡ ಹೋಗೆಂದವರು
ಎಂದಿಗೂ ಬಿಡದವರು ನೀವಲ್ಲವೆ

ಸೆರೆಗೆಳೆದು ನಿಲ್ಲಿಸಿದ, ಜಡೆಯೆಳೆದು ನೋಯಿಸಿದ
ಬಯಲು ಸೀಮೆಯ ಜಾಣ ನೀವಲ್ಲವೆ
ಮೊದಲಿರುಳ ಹೊಂಗನಸ ಮುನ್ನೀರ ದಾಟಿಸಿದ
ಬೆಳಕು ಬೆಡಗಿನ ಹಡಗ ನೀವಲ್ಲವೆ

ಮುತ್ತೆಂದು ಕರೆದವರು, ತೊತ್ತೆಂದು ಜರೆದವರು
ಎತ್ತರದ ಮನೆಯವರು ನೀವಲ್ಲವೆ
ನೀನೆ ಸಾಕೆಂದವರು ನೀನೆ ಬೇಕೆಂದವರು
ಚಿತ್ತದಲಿ ನಿಂತವರು ನೀವಲ್ಲವೆ

ಸಾಹಿತ್ಯ –  ಕೆ.ಎಸ್. ನರಸಿಂಹಸ್ವಾಮಿ

ಸಂಗೀತ – ?

ಗಾಯನ – ಜಯವಂತಿ ದೇವಿ ಹಿರೇಬೆಟ್‌

ಅಭಿಜ್ಞಾ ಕಡೆಯಿಂದ ಜಯವಂತಿ ದೇವಿ ಹಿರೇಬೆಟ್‌ ಅಜ್ಜಿಗೆ ಒಂದು ಸಲಾಮ್ 🙂

download hattu varushada hinde muttoora terinali

 

 

 

ಟ್ಯಾಗ್ ಗಳು: , , , , , , ,

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ / hendatiyobbalu maneyolagiddare

click to play

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರೂಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರ‍ಡುವೆನೆಂದರೆ ನನಗಿಲ್ಲದ ಕೋಪ

ಕೈ ಹಿಡಿದವಳು ಕೈ ಬಿಡದವಳು ಮಾಡಿದ ಅಡುಗೆಯ ಚಂದ
ನಾಗರಕುಚ್ಚಿನ ನಿಡುಜಡೆಯವಳು ಈಕೆ ಬಂದುದು ಎಲ್ಲಿಂದ?

ಕಬ್ಬಿಗನೂರಿಗೆ ದಾರಿಗಳಿದ್ದರೆ ಕನಸೆ ಇರಬೇಕು
ಅಲ್ಲಿಯ ದೊರೆತನ ಸಿಗುವಂತಿದ್ದರೆ ನನಗೆ ಸಿಗಬೇಕು

ತಾರೆಯ ಬೆಳಕಿನ ತುಂಬಿದ ಸಭೆಯಲಿ ಸುಂದರಿ ಮೆರೆದಾಳು
ನನ್ನೊಡನವಳು ಸಿಂಹಾಸನದಲಿ ಮೆಲ್ಲನೆ ನಕ್ಕಾಳು

ಚಂದಿರನೂರಿನ ಅರಮನೆಯಿಂದ ಬಂದವರೀಗೆಲ್ಲಿ
ಬೆಳ್ಳಿಯಕೋಟೆಯ ಬಾಗಿಲಿನಿಂದ ಬಂದವರೀಗೆಲ್ಲಿ?

ಹೆಂಡತಿಯೊಂದಿಗೆ ಬಡತನ ದೊರೆತನ ಏನೂ ಭಯವಿಲ್ಲ
ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ

ಸಾಹಿತ್ಯ – ಕೆ ಎಸ್ ನರಸಿಂಹಸ್ವಾಮಿ
ಸಂಗೀತ /ಗಾಯನ  – ಮೈಸೂರು ಅನಂತಸ್ವಾಮಿ
 
download hendatiyobbalu maneyolagiddare
 
 

ಟ್ಯಾಗ್ ಗಳು: , , , , , ,

ಇವಳು ಯಾರು ಬಲ್ಲೆಯೇನು / ivalu yaaru balleyenu

click to play

ಇವಳು ಯಾರು ಬಲ್ಲೆಯೇನು

ಇವಳ ಹೆಸರ ಹೇಳಲೇನು

ಇವಳ ದನಿಗೆ ತಿರುಗಲೇನು

ಇವಳು ಏತಕೋ ಬಂದು

ನನ್ನ ಸೆಳೆದಳು

 

ಅಡಿಯ ಮುಟ್ಟ ನೀಳ ಜಡೆ

ಮುಡಿಯ ತುಂಬ ಹೂವು ಹೆಡೆ

ಇವಳು ಅಡಿಯನಿಟ್ಟ ಕಡೆ

ಹೆಜ್ಜೆಹೆಜ್ಜೆಗೆ ಒಂದು

ದೊಡ್ಡ ಮಲ್ಲಿಗೆ

 

ಅಂಗಾಲಿನ ಸಂಜೆಗೆಂಪು

ಕಾಲಂದುಗೆ ಗೆಜ್ಜೆಯಿಂಪು

ಮೋಹದ ಮಲ್ಲಿಗೆಯ ಕಂಪು

ಕರೆದುವೆನ್ನನು ನಾನು

ಹಿಡಿಯ ಹೋದೆನು

 

ಬಂಗಾರದ ಬೆಳಕಿನೊಳಗೆ

ಮುಂಗಾರಿನ ಮಿಂಚು ಬೆಳಗೆ

ಇಳೆಗಿಳಿದಿಹ ಮೋಡದೊಳಗೆ

ಮೆರೆಯುತಿದ್ದಳು ನನ್ನ

ಕರೆಯುತಿದ್ದಳು

 

ತಾರೆಯಿಂದ ತಾರೆಗವಳು

ಅಡಿಯಿಡುವುದ ಕಂಡೆನು

ಹೂವನೆಸದು ನಡೆದಳವಳು

ಒಂದೆರಡನು ತಂದೆನು

 

ತಂದ ಹೂವೆ ಇನಿತು ಚಂದ

ಮುಡಿದವಳನು ನೆನೆಯಿರಿ

ಕಾಣಿಸದಾ ವೀಣೆಯಿಂದ

ಹಾಡಿಳಿವುದು ಕೇಳಿರಿ

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ / ಗಾಯನ – ಸಿ ಅಶ್ವಥ್

download ivalu yaaru balleyenu

 

ಟ್ಯಾಗ್ ಗಳು: , , , , , ,

ತೌರ ಸುಖದೊಳಗೆನ್ನ / toura sukhadolagenna

click to play

ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು

ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ
ನೀಲಾಂಬರದ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ || ತೌರ ||

ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ
ಐದು ತಿಂಗಳ ಕಂದ ನಗುತಲಿಹುದು || ತೌರ ||

ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೇನೆ ನಾನು ಇಲ್ಲೇ || ತೌರ ||

ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ
ಅಚ್ಚಮಲ್ಲಿಗೆಯರಳು ಬಿರಿಯುತಿಹುದು
ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ
ಚುಚ್ಚದಿರಿ ಮೊನೆಯಾದ ಮಾತನೆಸೆದು || ತೌರ ||

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್

download toura sukhadolagenna

 

ಟ್ಯಾಗ್ ಗಳು: , , , , ,

ನನ್ನವಳು ನನ್ನೆದೆಯ ಹೊನ್ನಾಡನಾಳುವಳು / nannavalu nannedeya

click to play

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ||ಪ||

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ…
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ||ನನ್ನವಳು||

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ||ನನ್ನವಳು||

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ ||ನನ್ನವಳು||

ರಚನೆ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ / ಗಾಯನ – ಸಿ ಅಶ್ವಥ್

download nannavalu nannedeya

 

ಟ್ಯಾಗ್ ಗಳು: , , , , , ,

ರಾಯರು ಬಂದರು ಮಾವನ ಮನೆಗೆ / raayaru bandaru maavana manege

click to play

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು
ತುಂಬಿದ ಚಂದಿರ ಬಂದಿತ್ತು

ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು

ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು
ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೆ ಇಳಿದಿತ್ತು

ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನ ಹಾಸಿತ್ತು
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು ಪದುಮಳು ಹಾಕಿದ ಹೂವಿತ್ತು

ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ
ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ ಮಡದಿಯ ಸದ್ದೇ ಇರಲಿಲ್ಲ

ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ
ಮೆಲುದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ, ನಕ್ಕರು ರಾಯರು ನಗಲಿಲ್ಲ ||ರಾಯರು||

ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ
ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ, ಪದುಮಳ ಬಳೆಗಳ ದನಿಯಿಲ್ಲ

ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ
ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ ಯಾರಿಗೆ ಎನ್ನಲು ಹರುಷದಲಿ

ಪದುಮಳು ಬಂದಳು..ಪದುಮಳು ಬಂದಳು..
ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ…..
ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ……ರಾಯರ ಕೋಣೆಯಲಿ……

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ – ಸಿ. ಅಶ್ವಥ್
ಗಾಯನ – ರತ್ನಮಾಲಾ ಪ್ರಕಾಶ್

download raayaru bandaru maavana manege

 

ಟ್ಯಾಗ್ ಗಳು: , , , , , ,

ಬಳೆಗಾರ ಚೆನ್ನಯ್ಯ / balegaara chennayya

click to play

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ ||

ಮುಡಿದ ಮಲ್ಲಿಗೆ ಅರಳು ಬಾಡಿಲ್ಲ ರಾಯರೆ
ತೌರಿನಲಿ ತಾಯಿ ನಗುತಿಹಳು
ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೆ
ಅಮ್ಮನಿಗೆ ಬಳೆಯಾ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ
ಅಂಗಳದ ತುಂಬಾ ಜನವಿತ್ತು ||

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರೆಸಿ
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ
ದೀಪದಲಿ ಬಿರುಗಣ್ಣನಿರಿಸಿ
ಬೇಕಾದ ಹಣ್ಣಿಹುದು, ಹೂವಿಹುದು ತೌರಿನಲಿ
ಹೊಸ ಸೀರೆ ರತ್ನದಾಭಾರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ಹನಿ ಕರುಣ ||

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರಿಟ್ಟು
ಕುದಿಯ ಬಾರದು ನನ್ನ ದೊರೆಯೆ
ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಲ ಚಿಲುಮೆ
ಮುನಿಸು ಮಾವನ ಮೇಲೆ ಮಗಳೇನ ಮಾಡಿದಳು
ನಿಮಗೇತಕೀ ಕಲ್ಲು ಮನಸು
ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು
ಅಮ್ಮನಿಗೆ ನಿಮ್ಮದೇ ಕನಸು…
ಅಮ್ಮನಿಗೆ ನಿಮ್ಮದೇ ಕನಸು….

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ / ಗಾಯನ – ಸಿ.ಎಸ್. ಅಶ್ವಥ್

download balegaarachennayya

 

ಟ್ಯಾಗ್ ಗಳು: , , , , ,

ಕಿಟಕಿಯ ಬಾಗಿಲು ತೆರೆದಿತ್ತಂದು / kitakiya baagilu teredittandu

click to play

ಕಿಟಕಿಯ ಬಾಗಿಲು ತೆರೆದಿತ್ತಂದು
ಸುತ್ತಲು ಕತ್ತಲೆ ಸುರಿದಿತ್ತಂದು
ಚಂದಿರನಡಿಯಲಿ ಮೆರೆದಿತ್ತೊಂದು
ತಾರೆಗೆ ಬಾನಿನೊಳು

ಮಂಚದ ಮೇಗಡೆ ಅವಳಿಗೆ ನಿದ್ದೆ
ನನಗೋ ಎಚ್ಚರ ಓದುತಿದ್ದೆ
ಬೇಸರವಾಯಿತು ಮಲಗಲು ಎದ್ದೆ
ಎಲ್ಲವು ಸುಮ್ಮನಿರೆ

ಬಂದಿತು ಮುತ್ತನು ಕದಿಯುವ ಬಯಕೆ
ಮೋಸವು ತಿಳಿದರೆ ಮುನಿಯಳೆ ಈಕೆ
ಎನ್ನುವ ಅಂಜಿಕೆ
ಚಂದಿರ, ಜೋಕೆ…ಎಂದೆಚ್ಚರಿಸುತಿರೆ

ತಾರೆಗಳೆಲ್ಲ ನೋಡುವವೆಂದು
ಕಿಟಕಿಯ ಬಾಗಿಲ ಬಂಧಿಸಿ ಬಂದು
ಉರಿಯುವ ದೀಪವು ಅರಿಯುವುದೆಂದು
ಆರಿಸಲೆಣಿಸಿದೆನು

ಕಂಡರೆ ದೀಪವು ಹೇಳುವುದೇನು
ಎಂದೆನ್ನಲು ಮೈ ದಡವಿದುದೆಲರು
ದೀಪವು ಇನ್ನು ಹೊಸತಿದು ಎಂದು
ಮೌನದಿ ಬೆಳಗಿದುದು

ಮೂಡಣ ಬೆಳಕಿನ ಬಾಗಿಲ ತೆರೆದು
ಬಂದಳು ಉಷೆ ಪನ್ನೀರ್ಮಳೆಗರೆದು
ನಕ್ಕಳು ಇಂದಿರೆ ಏತಕೆ ಎನಲು
ದೀಪವ ನೋಡಿದಳು

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ / ಗಾಯನ – ಸಿ ಅಶ್ವಥ್

download kitakiya baagilu teredittandu

 

ಟ್ಯಾಗ್ ಗಳು: , , , ,

ಬಾರೆ ನನ್ನ ಶಾರದೆ / baare nanna shaarade

click to play

ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲಾ ಬರುವಳೆನ್ನ ಶಾರದೆ
ಹಿಂದೆ ಮುಂದೆ ನೋಡದೆ ಎದುರು ಮಾತನಾಡದೆ

ಕೋಣೆಯೊಳಗೆ ಬಳೆಯಾ ಸದ್ದು ನಗುವರತ್ತೆ ಬಿದ್ದು ಬಿದ್ದು
ಸುಮ್ಮನಿರಲು ಮಾವನವರು ಒಳಗೆ ಅಕ್ಕ-ಭಾವನವರು
ಎಂದು ತುಂಟ ಹುಡುಗನು ಗುಟ್ಟ ಬಯಲಿಗೆಳೆವನು

ಒಂದು ಹೆಣ್ಣಿಗೊಂದು ಗಂಡು ಹೇಗೊ ಸೇರಿ ಹೊಂದಿಕೊಂಡು
ಕಾಣದೊಂದ ಕನಸ ಕಂಡು ಮಾತಿಗೊಲಿಯದಮೃತ ಉಂಡು
ದು:ಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ

ಯಾರು ಕದ್ದು ನುಡಿದರೇನು ಊರೇ ಎದ್ದು ಕುಣಿದರೇನು
ಜನರಬಾಯಿಗಿಲ್ಲ ಬೀಗ ಹೃದಯದೊಳಗೆ ಪ್ರೇಮರಾಗ
ಇಂತ ಕೂಗನಳಿಸಿದೆ ಬೆಳಗಿ ಬದುಕ ಹರಸಿದೆ

ಇಂದೇ ಅದಕೆ ಕರೆವುದು ನನ್ನ ಹುಡುಗಿ ಎನುವುದು
ಹೂವ ಮುಡಿಸಿ ನಗುವುದು ಅಪ್ಪಿ ಮುತ್ತನಿಡುವುದು

ಬಾರೆ ನನ್ನ ಶಾರದೆ ಅತ್ತ ನೋಡದೆ
ಬಾರೆ ನನ್ನ ಶಾರದೆ ಅತ್ತ ನೋಡದೆ
ಬಾರೆ ನನ್ನ ಶಾರದೆ ಅತ್ತ ನೋಡದೆ

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ / ಗಾಯನ – ಸಿ ಅಶ್ವಥ್

download baare nanna shaarade

 

ಟ್ಯಾಗ್ ಗಳು: , , , , ,