RSS

Category Archives: ಬಿ ಆರ್ ಛಾಯಾ

ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು / mungaarina abhishekake miduvaayitu nelavu

click to play

ಮುಂಗಾರಿನ ಅಭಿಷೇಕಕೆ
ಮಿದುವಾಯಿತು ನೆಲವು
ಧಗೆ ಆರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು ।। ಮುಂಗಾರಿನ ।।

ಬಾಯಾರಿದ ಬಯಕೆಗಳಲಿ
ಥಳಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ
ಪ್ರೀತಿಯಂತ ಹಸಿರು ।। ಮುಂಗಾರಿನ ।।

ಮೈ ಮನಗಳ ಕೊಂಬೆಯಲ್ಲಿ
ಹೊಮ್ಮುವ ದನಿ ಇಂಪು
ನಾಳೆಗೆ ನನಸಾಗುವ
ಕನಸಿನ ಹೂ ಅರಳುವ ಕಂಪು ।। ಮುಂಗಾರಿನ ।।

ಭರವೆಸಗಳ ಹೊಲಗಳಲ್ಲಿ
ನೇಗಿಲ ಗೆರೆ ಕವನ
ಶ್ರಾವಣದಲಿ ತೆನೆದೂಗುವ
ಜೀವೋತ್ಸವ ಗಾನ ।। ಮುಂಗಾರಿನ ।।

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ಸಿ ಅಶ್ವಥ್
ಗಾಯನ – ಬಿ ಆರ್ ಛಾಯಾ

download mungaarina abhishekake miduvaayitu nelavu

 

ಟ್ಯಾಗ್ ಗಳು: , , , , , , , ,

ರಾತ್ರಿಯ ತಣ್ಣನೆ ತೋಳಿನಲಿ / raatriya tannane tolinali

click to play

ರಾತ್ರಿಯ ತಣ್ಣನೆ ತೋಳಿನಲಿ ಮಲಗಿರೆ ಲೋಕವೆ ಮೌನದಲಿ
ಯಾರೋ ಬಂದು ಹೊಸಿಲಲಿ ನಿಂದು ಸಣ್ಣಗೆ ಕೊಳಲಿನ ದನಿಯಲ್ಲಿ
ಕರೆದರಂತಲ್ಲೆ ಹೆಸರನ್ನು
ಕರೆದವರಾರೇ ನನ್ನನ್ನು

ಬೇಗೆಗಳೆಲ್ಲಾ ಆರಿರಲು ಪ್ರೀತಿಯ ರಾಗ ಹಾಡಿರಲು
ಭೂಮಿಯ ತುಂಬಾ ಹುಣ್ಣಿಮೆ ಚಂದಿರ
ಬಣ್ಣದ ಮಾಯೆಯ ಹಾಸಿರಲು
ಕರೆದರಂತಲ್ಲೆ ಹೆಸರನ್ನು ಕರೆದವರಾರೇ ನನ್ನನ್ನು ।। ರಾತ್ರಿಯ ।।

ಹಸಿರು ಮರಗಳ ಕಾಡಿನಲಿ ಬಣ್ಣದ ಎಲೆಗಳ ಗೂಡಿನಲಿ
ಮರಿಗಳ ಕೂಡಿ ಹಾಡುವ ಹಕ್ಕಿಯ
ಸಂತಸ ಚಿಮ್ಮಲು ಹಾಡಿನಲಿ
ಕರೆದರಂತಲ್ಲೆ ಹೆಸರನ್ನು ಕರೆದವರಾರೇ ನನ್ನನ್ನು ।। ರಾತ್ರಿಯ ।।

ಹೇಗೆ ಇದ್ದರೆ ಎಲ್ಲಿ ಹೋಗಲಿ ಕಂಡರೆ ಹೇಳಿ ಗುರುತನ್ನು
ನಿದ್ದೆಯ ಕರೆದು ಕಾಯುತ್ತಿರುವೆ
ಎಂತಹ ಹೊತ್ತಿನಲು ಅವರನ್ನು
ಕರೆದವರಾರೇ ನನ್ನನ್ನು ಕರೆದರೆ ನಿಲ್ಲೇ ನಾನಿನ್ನು ।। ರಾತ್ರಿಯ ।।

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಸಂಗೀತ – ?

ಗಾಯನ – ಬಿ ಆರ್ ಛಾಯಾ

download raatriya tannane tolinali

 

ಟ್ಯಾಗ್ ಗಳು: , , , , , , , ,

ನಿನ್ನ ಕನಸುಗಳಲ್ಲಿ/ninna kanasugalalli

click to play

ನಿನ್ನ ಕನಸುಗಳಲ್ಲಿ ಮುಳುಗಿ ಹೋದೆನು ನಾನು

ಎತ್ತಿ ಕಾಪಾಡುವರು ಯಾರು?

ಸವಿನೆನಪಿನಾಳದಲಿ ಹುದುಗಿ ಹೋಗಿರುವೆನು

ಅಗೆದು ತೆಗೆಯುವರಿಲ್ಲವೇನು? ||ನಿನ್ನ ಕನಸು||

ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನನ್ನು

ಹಿಡಿದು ನಿಲ್ಲಿಸುವವರು ಯಾರು

ಕ್ರೂರ ವಿರಹಾಗ್ನಿಯಲಿ ಬೇಯುತಿರುವೆನು ನಾನು

ನೀರೆರೆದು ಉಳಿಸುವರು ಯಾರು ||ನಿನ್ನ ಕನಸು||

ಬಾ ಇನಿಯ ನೀ ನನ್ನ ಪ್ರೀತಿಯಾಳಗಳಲ್ಲಿ

ಇಳಿದು ತಳ ತೋರು ನೋಡೋಣ

ಮುಗಿಲ ಹಾಯುವ ನನ್ನ ಪ್ರೀತಿ ಗಿರಿ ಶಿಖರಗಳ

ತುದಿ ತನಕ ಏರು ನೋಡೋಣ ||ನಿನ್ನ ಕನಸು||

ಸಾಹಿತ್ಯ- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಸಂಗೀತ- ಎಚ್. ಕೆ. ನಾರಾಯಣ್

ಗಾಯನ-ಬಿ. ಆರ್. ಛಾಯಾ

download ninna kanasugalalli

 

ಟ್ಯಾಗ್ ಗಳು: , , , , , , , ,

ನನ್ನೊಳು ನಾ / nannolu naa

click to play

ನನ್ನೊಳು ನಾ…ನಿನ್ನೊಳು ನೀ…
ಒಲಿವ ಮುಂತಿಂತೆ ನಾ…ನೀ…
ನಿನ್ನೊಳು ನಾ…ನನ್ನೊಳು ನೀ…
ಒಲಿದ ಮೇಲಿಂತೆ ನಾ…ನೀ…
ಇದೆ ಒಲವಿನ ಸ.ರಿ.ಗ.ಮ.ಪ.ದ.ನೀ

ಛಲವು ಮುನ್ನ ಹೊಳಲಿಚ್ಚಿತು ನನ್ನ…
ಇಂದು ಛಲವು ಹೊಳಲಿಡುವುದು ನಿನ್ನ…
ಬಯಕೆ ನಾ…ಸಲಿಗೆ ನೀ…
ಒಲಿದ ಮೇಲಿಂತೆ ನಾ…ನೀ…
ಇದೆ ಒಲವಿನ ಸ.ರಿ.ಗ.ಮ.ಪ.ದ.ನೀ

ಒಲಿವ ಮುನ್ನ ಜಗಕೆಲ್ಲಕು ನಾ…
ಒಲಿದ ಮೇಲೆ ಜಗಕೆಲ್ಲಕು ನೀ…
ಹಿನ್ನೆಲೆ ನಾ…ಮುನ್ನೆಲೆ ನೀ…
ಒಲಿದ ಮೇಲಿಂತೆ ನಾ…ನೀ…
ಇದೆ ಒಲವಿನ ಸ.ರಿ.ಗ.ಮ.ಪ.ದ.ನೀ

ಸಾಹಿತ್ಯ – ಪು.ತಿ.ನ
ಸಂಗೀತ – ?
ಗಾಯನ – ಬಿ ಆರ್ ಛಾಯಾ / ?

download nannolu naa ninnolu nee

 

ಟ್ಯಾಗ್ ಗಳು: , , , , , ,

ಕರುಣಾಳು ಬಾ ಬೆಳಕೆ / karunaalu baa belake

click to play

B R ಛಾಯಾ ದನಿಯಲ್ಲಿ

ರತ್ನಮಾಲ ಪ್ರಕಾಶ್ ದನಿಯಲ್ಲಿ

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ
ಮುನ್ನೆ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ

ಸಾಹಿತ್ಯ – ಬಿ ಎಂ ಶ್ರೀಕಂಠಯ್ಯ
ಸಂಗೀತ – ಮೈಸೂರು ಅನಂತಸ್ವಾಮಿ

download karunaalu baa belake — B R Chaya

download karunaalu baa belake — Ratnamala Prakash

 

ಟ್ಯಾಗ್ ಗಳು: , , , , , ,

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು / Athitha nodadiru

click to play

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು, ಮಗುವೆ;
ಜೋ ಜೋಜೋ ಜೋ ಜೋ ಜೋಜೋ ಜೋ
ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು.
ನಿದ್ದೆ ಬರುವಳು ಕದ್ದು ಮಲಗು ಮಗುವೆ
ಜೋ ಜೋಜೋ ಜೋ ಜೋ ಜೋಜೋ ಜೋ.

ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ,
ಮಲಗು ತೊಟ್ಟಿಲ ಸಿರಿಯೆ, ದೇವರಂತೆ;
ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,
ಮಲಗು ಚಂದಿರನೂರ ಹೋಗುವೆಯಂತೆ .

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು;
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,
ವೀಣೆ ನುಡಿಸುವರಂತೆ ಸುತ್ತ ನೆರೆದು.

ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ;
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ
ಜೋ ಜೋಜೋ ಜೋ ಜೋ ಜೋಜೋ ಜೋ
ಜೋ ಜೋಜೋ ಜೋ ಜೋ ಜೋಜೋ ಜೋ

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಸುಲೋಚನ

download athitha nodadiru

 

ಟ್ಯಾಗ್ ಗಳು: , , , , , ,