RSS

Category Archives: ಸುಲೋಚನ

ಬಾ ಬಾ ಓ ಬೆಳಕೇ / baa baa o belake

click to play

[audio http://cl.ly/1l0e2I1M3v41/Baa_Baa_O_Belake.mp3]

ಬಾ ಬಾ ಓ ಬೆಳಕೇ
ಕರುಣಿಸಿ ಇಳಿ ನೆಲಕೆ
ನೀನಿಲ್ಲದೆ ಬಾಳೆಲ್ಲಿದೆ
ಹೋಳಾಗಿದೆ ಬದುಕಿಲ್ಲಿ ।।

ಕಾಡು ಕಡಲು ಬಾನು
ಏನಿದ್ದೂ ಏನು
ಮೈಯೆಲ್ಲಿದೆ ಇಡಿ ಭುವಿಗೆ
ಕಾಣಿಸದಿರೆ ನೀನು ।। ಬಾ ।।

ನಿನ್ನ ಕೃಪಾಚರಣ
ಚಾಚಿ ತನ್ನ ಕಿರಣ
ಸೋಕಿದೊಡನೆ ಸಂಚರಿಸಿದೆ
ನೆಲದೆದೆಯಲಿ ಹರಣ ।। ಬಾ ।।

ಬಾಂದಳದಾ ತಿಲಕವೇ
ವಿಶ್ವದೆದೆಯ ಪದಕವೇ
ನಿನ್ನೊಳಗಿನ ಸತ್ಯ ತೋರು
ಬಂಗಾರದ ಫಲಕವೇ ।। ಬಾ ।।

ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಎಚ್ ಕೆ ನಾರಾಯಣ್
ಗಾಯನ –  ಸುಲೋಚನ

 

download baa baa o belake

 

ಟ್ಯಾಗ್ ಗಳು: , , , , , , ,

ಯಾವುದೀ ಹೊಸ ಸಂಚು/yaavudee hosa sanchu

click to play

ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ

ಮನಸು ಕನಸುಗಳನ್ನು ಕಲೆಸಿರುವುದು

ಗಿರಿಕಮರಿಯಾಳದಲಿ ತೆವಳಿತ್ತ ಭಾವಗಳ

ಮುಗಿಲ ಮಂಚದೊಳಿಟ್ಟು ತೂಗುತಿಹುದು || ಯಾವುದೀ ||

 

ಸತ್ತ ಬಾಳಿಗೆ ಮತ್ತೆ ಅಮೃತವೆರೆದು

ಕತ್ತಲಾಳಗಳಲ್ಲಿ ದೀಪ ಉರಿದು

ಬಾಳು ಕೊನೆಯೇರುತಿದೆ ಬೆಳಕಿನೋತ್ಸವದಲ್ಲಿ

ಮೈಯ ಕಣ ಕಣದಲ್ಲೂ ಹಿಗ್ಗು ಉರಿದು || ಯಾವುದೀ ||

 

ಹೇಗೆ ತಾಳಲಿ ಹೇಳೆ ಈ ಮಧುರ ಅನುಭವವ

ಕಲ್ಪವೃಕ್ಷದ ಹಣ್ಣು ತಿಳಿದ ರುಚಿಯ

ಹೇಗೆ ತಾಳಲಿ ಹೇಳೆ ಇಂಥ ಭಾವವೆ ನಾಳೆ

ಉಳಿಯದೆಯೆ ಸರಿದಿದ್ದು ಎಂಬ ವ್ಯಥೆಯ || ಯಾವುದೀ ||

 

ಸಾಹಿತ್ಯ- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಸಂಗೀತ- ಸಿ. ಅಶ್ವತ್

ಗಾಯನ- ಸುಲೋಚನ

download yaavudee hosa sanchu

 

ಟ್ಯಾಗ್ ಗಳು: , , , , , ,

ಎಂಥಾ ಮೋಜಿನ ಕುದುರಿ / Entha mojina kuduri

click to play

ಎಂಥಾ ಮೋಜಿನ ಕುದುರಿ
ಹತ್ತಿದ ಮ್ಯಾಲ ತಿರುಗುವುದು ಹನ್ನೊಂದು ಫೇರಿ ।।

ಹಚ್ಚನ್ನ ಕರಡ ಹಾಕಲಿಬೇಕೋ
ನಿಚ್ಚಳ ನೀರ ಕುಡಿಸಲಿಬೇಕೋ
ಸಂಸ್ಕಾರ ಕಮಚೀಲಿ ಹೊಡಿಯಲಿಬೇಕೋ
ಅಚ್ಯುತ ಮೆಚ್ಚುವಂತೆ ಮೈ ತಿಕ್ಕಬೇಕೋ ।। ಎಂಥಾ ।।

ತಪ್ಪುವುದಿಲ್ಲಪ್ಪ ಎರಡು ಹೊತ್ತು ದಾಣಿ
ತಿಂದ ಮೇಲ ತಿರಗತೈತಿ ಮೇಗಲ ಓಣಿ
ಖಾದರಲಿಂಗು ಪಾಡಿದ ವಾಣಿ
ಸೋಸಿ ನೋಡಿಕೋ ಹಾಕಿದ ಗೋಣಿ ।। ಎಂಥಾ ।।

ಪಾಂಡವರ ಮನಿಯೊಳಗ ಪಾಗದಾಗಿತ್ತು
ಪಾಗಾದ ಗೂಟವ ಝಾಡಿಸಿ ಕಿತ್ತು
ಹೋಗುವಾಗ ಶಿಶುನಾಳಕ್ಕೋಡ್ಯೋಡಿ ಬಂತು
ಗೋವಿಂದ ಗುರುವೇ ತಾನಾಗಿತ್ತು  ।। ಎಂಥಾ ।।

ಸಾಹಿತ್ಯ – ಶಿಶುನಾಳ ಶರೀಫ
ಸಂಗೀತ – ಸಿ ಅಶ್ವಥ್
ಗಾಯನ – ಸುಲೋಚನ

download entha mojina kuduri

 

ಟ್ಯಾಗ್ ಗಳು:

ಎಂಥಾ ಹದವಿತ್ತೇ ಹರೆಯಕೆ / enthaa hadavithe hareyake

click to play

ಎಂಥಾ ಹದವಿತ್ತೇ ಹರೆಯಕೆ
ಏನೋ ಮುದವಿತ್ತೇ
ಅಟ್ಟೀ ಹಿಡಿದು ಮುಟ್ಟೀ ತಡೆದು
ಗುಟ್ಟೂ ಸವಿಯಿತ್ತೇ ಗೆಳತಿ ।। ಎಂಥಾ ।।

ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ
ಹೂವನು ಚೆಲ್ಲಿತ್ತೇ
ಅಮ್ಮನು ಬಡಿಸಿದ ಊಟದ ಸವಿಯು
ಘಮ್ಮನೆ ಕಾಡಿತ್ತೇ
ಅಣ್ಣನ ಕೀಟಲೆ ತಮ್ಮನ ಕಾಟಕೆ
ಬಣ್ಣದ ಬೆಳಕಿತ್ತೇ ।। ಎಂಥಾ ।।

ನಲ್ಲನ ಕಣ್ಣಿನ ಸನ್ನೆಗೆ ಕವಿತೆಯ
ಸುಳ್ಳಿನ ಸೊಬಗಿತ್ತೇ
ಮೆಲ್ಲನೆ ಉಸುರಿದ ಸೊಲ್ಲಿನ ರುಚಿಯು
ಬೆಲ್ಲವ ಮೀರಿತ್ತೇ
ಸುಳ್ಳೇ ನಿರಿಗೆಯ
ಚಿಮ್ಮುವ ನಡಿಗೆಗೆ
ಬಳ್ಳಿಯ ಬೆಡಗಿತ್ತೇ

ಎಂಥಾ ಹದವಿತ್ತೇ ಗೆಳತಿ
ಎಂಥಾ ಮುದವಿತ್ತೇ
ಕಾಣದ ಕೈಯಿ ಎಲ್ಲಾ ಕದ್ದು
ಉಳಿಯಿತು ನೆನಪಷ್ಟೇ

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಸಿ ಅಶ್ವಥ್
ಗಾಯನ – ಸುಲೋಚನ

download enthaa hadavithe

 

ಟ್ಯಾಗ್ ಗಳು: , , , , , , , ,

ಬಾರೋ ವಸಂತ ಬಾರೋ / baaro vasanta baaro

click to play

ಬಾರೋ ವಸಂತ ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ || ಬಾರೋ ||

ಬಾರೋ ಸಂಕಲೆಗಳ ಕಳಚಿ
ಹೆಜ್ಜೆಗಳಿಗೆ ತ್ರಾಣವನುಣಿಸಿ ।।
ದಣಿದ ಮೈಗೆ ತಂಗಾಳಿಯ ಮನಸಿಗೆ
ನಾಳೆಯ ಸುಖದೃಶ್ಯವ ಸಲಿಸಿ || ಬಾರೋ ||

ಮಗುಚುತ ನಿನ್ನೆಯ ದು:ಖಗಳ
ತೆರೆಯುತ ಹೊಸ ಅಧ್ಯಾಯಗಳ ।।
ಹರಸುತ ಎಲ್ಲರ ಮೇಲು ಕೀಳಿರದೆ
ಸಲಿಸುತ ಭವಿಷ್ಯದಾಸೆಗಳ || ಬಾರೋ ||

ಎಳೆಕಂದನ ದನಿಗೆಜ್ಜೆಯಲಿ
ಇನಿಯಳ ಮಲ್ಲಿಗೆ ಲಜ್ಜೆಯಲಿ ।।
ಬೋಳು ಬಾಳಿನಲಿ ಹಸಿರ ಚಿಮ್ಮಿಸುವ
ಸೃಷ್ಟಿಶೀಲ ಹೊಸ ಹೆಜ್ಜೆಯಲಿ || ಬಾರೋ ||

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಸಂಗೀತ – ?

ಗಾಯನ – ಸುಲೋಚನ

download baaro vasanta baaro

 

ಟ್ಯಾಗ್ ಗಳು: , , , , , , , ,