RSS

ಮುನಿಸು ತರವೇ ಮುಗುದೆ / munisu tarave mugude

23 ಜೂನ್

click to play

ಮುನಿಸು ತರವೇ ಮುಗುದೆ
ಹಿತವಾಗಿ ನಗಲೂ ಬಾರದೆ ||

ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಜುಮ್ಮೆನ್ನಲು |
ನವ ಭಾವ ತುಂಬಿ ತುಂಬಿ ಮನ ಹಾಡಲು
ತೆರದಂತಿದೆ ಭಾಗ್ಯದ ಬಾಗಿಲು ||ಮುನಿಸು||

ಎಷ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ |
ಜೀವನದ ನೂರು ಕನಸು ನನಸಾಗಿದೆ
ಮುನಿಸೇತಕೆ ಈ ಬಗೆ ಮೂಡಿದೆ ||ಮುನಿಸು||

ಹೊಸ ಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀ ಮನ |
ವಾಗರ್ಥದಂತೆ ನಮ್ಮ ಈ ಮೈಮನ
ಜತೆ ಸೇರಲು ಜೀವನ ಪಾವನ ||ಮುನಿಸು||

ಸಾಹಿತ್ಯ – ಸುಬ್ರಾಯ ಚೊಕ್ಕಾಡಿ
ಸಂಗೀತ – ?
ಗಾಯನ – ಪುತ್ತೂರು ನರಸಿಂಹ ನಾಯಕ್

download munisu tarave mugude

 

ಟ್ಯಾಗ್ ಗಳು: , , , ,

4 responses to “ಮುನಿಸು ತರವೇ ಮುಗುದೆ / munisu tarave mugude

  1. Juroofie

    ಮೇ 27, 2013 at 2:57 ಅಪರಾಹ್ನ

    ಹೌದು ಎಲೆ ಮಕ್ಕಳು ನಲ್ಲಿ ಮುನಿಸು ಒಂದು ತರ ಮುಗುದೆ. “ಎಳೆಯ ಮನಸಿನ ಎಲೆಗಳು”

     
  2. Raghav Nayak

    ಮೇ 9, 2014 at 12:51 ಅಪರಾಹ್ನ

    Sangeetha – C Ashwath.

     
  3. Prakash Siddaramu

    ಮಾರ್ಚ್ 10, 2015 at 9:55 ಫೂರ್ವಾಹ್ನ

    Chokkadi yavara kavithege ee raga jeeva tumbide. Sada kala keluvanthaha geethe idu.

     
  4. girija7692 puttu

    ಏಪ್ರಿಲ್ 22, 2016 at 3:39 ಅಪರಾಹ್ನ

    super song. pls download “baalu nannadu bhavavillada kavyavahithu” bhavageethe

     

ನಿಮ್ಮ ಟಿಪ್ಪಣಿ ಬರೆಯಿರಿ