RSS

Category Archives: ಹೆಚ್.ಎಸ್.ವೆಂಕಟೇಶ ಮೂರ್ತಿ

ಹೆಸರು ಕೂಡ ತಿಳಿಯಲಿಲ್ಲ/hesaru kooda tiliyalilla

click to play

[audio http://cl.ly/273R0x3Q2S3y/download/0c6OfoHL82Xg.128.mp3]

 

ಹೆಸರು ಕೂಡ ತಿಳಿಯಲಿಲ್ಲ

ಅವನ ಒಲಿದೆನೋ

ಯಾವ ನೆಲೆಯೋ ಯಾವ ಕುಲವೋ

ಒಂದು ತಿಳಿಯೆನು.. ಆ ಆ… || ಹೆಸರು ||

 

ಕಂಡೊಡನೆ ಸೋತೆ ನಾನು ಏನೂ ನೋಡದೆ

ಮಾಯದಿರುಳ ಮರುಳಿನಲ್ಲಿ ಮನವ ನೀಡಿದೆ (2)

ನಿನ್ನ ವಿನಾ ಬಾಳೆನು ನಾ ಎಂದು ನುಡಿವೆನು (2)

ಮೊರೆವ ತೊರೆವ ಸೆಳವಿನಲ್ಲಿ ಕೈಯ ಹಿಡಿದೆನು

ಕೈಯ ಹಿಡಿದೆನು || ಹೆಸರು ||

 

ತುಟಿಯ ಬಿಸಿ ಹಾಗೆ ಇದೆ ತುಸು ಆರದೇ

ಎದೆಯೊಳೆನೋ ಉರಿಯುತಿದೆ ಹೊರಗೆ ತೋರದೆ (2)

ಪ್ರೇಮ ಪತ್ರ ಬರೆದು ಬರೆದು ಕಳಿಸಿ ಪ್ರಿಯನಿಗೆ (2)

ಕಾಯುತಿರುವೆ ಉತ್ತರ ವಿಳಾಸ ಬರೆಯದೆ (2)

ವಿಳಾಸ ಬರೆಯದೆ ವಿಳಾಸ ಬರೆಯದೆ…

 

ಸಾಹಿತ್ಯ- ಹೆಚ್. ಎಸ್, ವೆಂಕಟೇಶಮೂರ್ತಿ

ಸಂಗೀತ- ಕೃಷ್ಣ ಉಡುಪ

ಗಾಯನ- ಸುನೀತ ಎಸ್. ಮುರಳಿ

 

download hesaru kooda tiliyalilla

 

 

ಟ್ಯಾಗ್ ಗಳು: , , , , , ,

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ / amma naanu devaraane benne kaddillamma

click to play

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ ||

ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ
ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ || ಅಮ್ಮಾ ||

ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿ೦ದೆ ಮರೆಸುತ್ತ || ಅಮ್ಮಾ ||

ಎತ್ತಿದ ಕೈಯ ಕಡುಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯ ಶ್ಯಾಮನ ಮುತ್ತಿಟ್ಟು ನಕ್ಕಳು ಗೋಪಿ || ಅಮ್ಮಾ ||

ಸಾಹಿತ್ಯ –  ಹೆಚ್.ಎಸ್.ವೆಂಕಟೇಶ ಮೂರ್ತಿ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ

download amma naanu devaraane benne kaddillamma

 

ಟ್ಯಾಗ್ ಗಳು: , , , ,

ಲೋಕದ ಕಣ್ಣಿಗೆ / lokada kannige

click to play

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ || ಲೋ ||

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ || ಲೋ ||

ಮಹಾಪ್ರವಾಹ ಮಹಾಪ್ರವಾಹ ಮಹಾಪ್ರವಾಹ ಮಹಾಪ್ರವಾಹ
ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆದರೂ ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ರೀತಿ ಇದು || ೨|| || ಲೋ ||

ಸಾಹಿತ್ಯ – ಎಚ್.ಎಸ್.ವೆಂಕಟೇಶ್ ಮೊರ್ತಿ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ

download lokada kannige raadheyu kooda

 

ಟ್ಯಾಗ್ ಗಳು: , , , , ,

ಪ್ರೇಯಸಿ ಪ್ರೀತಿಸಿ ಮರೆತೆಯಾ / preyasi preetisi mareteya

click to play

ಪ್ರೇಯಸಿ ಪ್ರೀತಿಸಿ ಮರೆತೆಯಾ?
ಒಣಗಿಸಿ ಒಲವಿನ ಒರತೆಯಾ?
ಹೊರಳಿ ಹೊರಳಿ ನೀ ಸಾಗಿದೆ
ಮನವೋ ಮಸಣ ತಾನಾಗಿದೆ

ಕಣ್ಣೀರ ಕೊಳದಲ್ಲಿ
ಹುಟ್ಟಿರದ ದೋಣಿಯಲಿ
ಏಕಾಂಗಿ ಕುಳಿತಿರಲು
ನಕ್ಷತ್ರ ಅಳುತಿರಲು
ಇರುಳಿನ ಗಾಳಿ ನರಳಿ
ಗಾನದ ಗಾಯಕೆ ಮಾಯದ ನೋವಿದೆ
ಪ್ರೀತಿಯ ಹೂವಿಗೆ ಆಳದ ಅಳಲಿದೆ

ಕಾರಿರುಳ ಕಾಡಿನಲಿ
ಗುರಿಯಿರದ ಜಾಡಿನಲಿ
ಏಕಾಂಗಿ ಅಲೆದಿರಲು
ಬಿರುಗಾಳಿ ಮೊರೆದಿರಲು
ಕರುಳಿನ ಕಾತರ ಕೆರಳಿ
ವಿರಹದ ದಳ್ಳುರಿ ದೇಹವ ದಹಿಸಿದೆ
ಕುದಿದಿದೆ ಎದೆಗೋಳ ಬೇಗೆಯ ಸಹಿಸದೆ

ಸಾಹಿತ್ಯ – ಹೆಚ್.ಎಸ್.ವೆಂಕಟೇಶ ಮೂರ್ತಿ
ಸಂಗೀತ / ಗಾಯನ – ಸಿ ಅಶ್ವಥ್

download preyasi preetisi mareteya

 

ಟ್ಯಾಗ್ ಗಳು: , , , , ,

ಹಾವು ಅಂದ್ರೆ ಮರಿ ಗುಬ್ಬಿಗೆ / haavu andre mari gubbige

click to play

ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ
ಅಮ್ಮ ಅಮ್ಮ ಬುಸ್ಸ್ ಬುಸ್ಸ್ ಹಾವು ಹ್ಯಾಗಿರತ್ತೆ ||

ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ
ಒಳ್ಳೆ ಪ್ರಶ್ನೆ ಹಾವು-ಹ್ಯಾಗಿರತ್ತೆ ಹಾವು ಹ್ಯಾಗಿರತ್ತೆ
ಹಾವಿರತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ
ಸಪೂರ ಥಳ ಥಳ ಕೆಂಡದ ಕಣ್ಣು ಕಡ್ಡಿ ದಪ್ಪಗೆ ||

ಸೂರಿಗೆ ಸುತ್ತಿ ಜೋತಾಡತ್ತೆ ಗೋಧಿ ಬೆನ್ನು
ದೀಪದ ಹಾಗೆ ಉರಿತಿರತ್ತೆ ಹಾವಿನ ಕಣ್ಣು
ಬುಸ್ಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ
ಇಡಿ ಇಡಿಯಾಗಿ ನುಂಗ್ ಬಿಡುತ್ತೆ ಹಕ್ಕಿ ಮೊಟ್ಟೆ

ಹಕ್ಕಿಯ ಮೊಟ್ಟೆ ನುಂಗಿದ್ ಮೇಲೆ ಇಡಿ ಇಡೀಲಿ
ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ
ಹಕ್ಕಿ ಮರಿ ಹುಟ್ಕೋಳ್ಳತ್ತೆ ಹಾವಿನ ಹೊಟ್ಟೆಲಿ
ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ

ನಿಟ್ಟುಸಿರಿತ್ತು ಅಮ್ಮ ಗುಬ್ಬಿ ಇಲ್ಲ ಬಂಗಾರ
ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ್ ಮೇಲೆ ಹೇಳೋದ್ ಇನ್ನೇನು
ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು

ಸಾಹಿತ್ಯ – ಹೆಚ್ ಎಸ್ ವೆಂಕಟೇಶ ಮೂರ್ತಿ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್ / ಬಿ ಆರ್ ಛಾಯಾ

download haavu andre mari gubbige

 

ಟ್ಯಾಗ್ ಗಳು: , ,

ಹುಚ್ಚು ಖೋಡಿ ಮನಸು / huchchu khodi manasu

click to play

ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು

ಮಾತು ಮಾತಿಗೇಕೋ ನಗು
ಮರುಘಳಿಗೆಯೇ ಮೌನ,
ಕನ್ನಡಿ ಮುಂದಷ್ಟು ಹೊತ್ತು
ಬರೆಯದಿರುವ ಕವನ ||

ಸೆರಗು ತೀಡಿದಷ್ಟು ಸುಕ್ಕು
ಹಠ ಮಾಡುವ ಕೂದಲು
ನಿರಿ ಏಕೋ ಸರಿಯಾಗದು
ಮತ್ತೆ ಒಳಗೆ ಹೋದಳು ||

ಕೆನ್ನೆ ಕೊಂಚ ಕೆಂಪಾಯಿತೆ
ತುಟಿಯ ರಂಗು ಹೆಚ್ಚೇ
ನಗುತ ಅವಳ ಛೇಡಿಸುತಿದೆ
ಗಲ್ಲದ ಕರಿ ಮಚ್ಚೆ ||

ಬರಿ ಹಸಿರು ಬರಿ ಹೂವು
ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ
ಸುಮ್ಮನೆ ನಿಟ್ಟುಸಿರು ||

ಸಾಹಿತ್ಯ – ಹೆಚ್.ಎಸ್. ವೆಂಕಟೇಶ ಮೂರ್ತಿ
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ

download huchchu khodi manasu

 

ಟ್ಯಾಗ್ ಗಳು: , , , , ,

ಹೂವು ಹೊರಳುವವು ಸೂರ್ಯನ ಕಡೆಗೆ / hoovu horaluvavu

click to play

ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ, ದೂರದ ಕಡಲಿಗೆ
ಮುಳುಗಿದಂತೆ, ದಿನ ಬೆಳಗಿದಂತೆ
ಹೊರಬರುವನು ಕೂಸಿನ ಹಾಗೆ.

ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು;
ಅದಕೆ ಅದರ ಗುಣದೋಷಗಳ೦ಟಿಸಿ
ಬಿಡಿಸಿ ಬಿಟ್ಟ ತೊಡಕು.

ಗಿಡದಿಂದುರುವ ಎಲೆಗಳಿಗೂ ಮುದ,
ಚಿಗುರುವಾಗಲೂ ಒಂದೇ ಹದ,
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನೋ ಕಲಾವಿದ !

ಬಿಸಿಲ ಧಗೆಯ ಬಸಿರಿನಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ;
ಸಹಿಸಿಕೊಂಡ ಸಂಕಟವನು ಸೋಸಲು
ಬಂದೆ ಬರುವುದಾ ಗಳಿಗೆ.

ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ;
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ

ಸಾಹಿತ್ಯ – ಚನ್ನವೀರ ಕಣವಿ
ಸಂಗೀತ – ಹೆಚ್.ಎಸ್.ವೆಂಕಟೇಶ ಮೂರ್ತಿ
ಗಾಯನ – ರತ್ನಮಾಲ ಪ್ರಕಾಶ್

download hoovu horaluvavu

 

ಟ್ಯಾಗ್ ಗಳು: , , , , ,