RSS

Category Archives: ಪ್ರೊ. ಸಿದ್ದಲಿಂಗಯ್ಯ

ಒಲವರಳಿದ ಆ ದಿನಗಳೇ / olavaralida aa dinagale

click to play

ಒಲವರಳಿದ ಆ ದಿನಗಳೇ ಹೂಗಳೇ
ಕಡಲ ತೀರಗಳೇ ಕಾಡದಿರಿ|
ಬೆಳದಿಂಗಳು ತುಳುಕಾಡುವಾ ಹೊಳೆಗಳೇ
ಹಲವು ಬಣ್ಣಗಳೇ ಕಾಡದಿರಿ ||

ಜಲವಿಲ್ಲದ ಈ ಭೂಮಿಯ ಮೇಲೆ
ಸಾವು ಹಸಿವುಗಳೇ ಅಲೆಯದಿರಿ|
ಬಲವಿಲ್ಲದ ಈ ಬಳ್ಳಿಯ ಮೇಲೆ
ಘೋರ ವ್ರುಕ್ಷಗಳೇ ಎರಗದಿರಿ||

ಬಾಳ ರಮ್ಯತೆಯ ಚಿಮ್ಮಿಸಿ ಹಾರುವ
ಹಳದಿ ಚಿಟ್ಟೆಗಳೇ ಕಾಡದಿರಿ|
ಯಾವ ಬನದಲ್ಲೂ ಉತ್ತರವಿಲ್ಲದ
ಒಡೆಯದ ಒಗಟೇ ಕಾಡದಿರಿ||

ಪ್ರಾಣದ ಹರಣದ ಘಳಿಗೆಯ ಒಳಗೆ
ನೀಲಿ ತಾವರೆ ಅರಳದಿರಿ|
ಎಲ್ಲೆಲ್ಲು ತುಂಬಿದ ನೋವಿನ ಒಳಗೆ
ಗುಲಾಬಿ ವನಗಳೇ ಸುಳಿಯದಿರಿ||

ಸಾಹಿತ್ಯ – ಪ್ರೊ ಸಿದ್ದಲಿಂಗಯ್ಯ
ಸಂಗೀತ / ಗಾಯನ – ಸಿ ಅಶ್ವಥ್

download olavaralida aa dinagale

 

ಟ್ಯಾಗ್ ಗಳು: