RSS

Category Archives: ಕೆ. ಎಸ್. ನಿಸಾರ್ ಅಹಮದ್

ಈ ದಿನಾಂತ ಸಮಯದಲಿ / ee dinaanta samayadali

click to play

ಈ ದಿನಾಂತ ಸಮಯದಲಿ
ಉಪವನ ಏಕಾಂತದಲಿ
ಗೋಧೂಳಿ ಹೊನ್ನಿನಲಿ

ಬರದೆ ಹೋದೆ ನೀನು
ಮರೆತು ಹೋದೆ ನೀನು || ಈ ದಿನಾಂತ ||

ನಾ ಬಿಸುಸುಯ್ಯುವ ಹಂಬಲವೋ
ಶುಭ ಸಮ್ಮಿಲನದ ಕಾತರವೋ
ಬಾ ಇನಿಯ ಕರೆವೆ ನೊಂದು

ಬರದೆ ಹೋದೆ ನೀನು
ಮರೆತು ಹೋದೆ ನೀನು || ಈ ದಿನಾಂತ ||

ತನುಮನದಲಿ ನೀನೇ ನೆಲೆಸಿ
ಕಣಕಣವೂ ನಿನ್ನ ಕನಸಿ
ಕಣ್ಣು ಹನಿದು ಕರೆವೆ ನಿನ್ನ

ಬರದೆ ಹೋದೆ ನೀನು
ಮರೆತು ಹೋದೆ ನೀನು || ಈ ದಿನಾಂತ ||

ಇಳೆಗಿಳಿದಿದೆ ಇರುಳ ನೆರಳು
ದನಿ ಕಳೆದಿದೆ ಹಕ್ಕಿಗೊರಳು
ಶಶಿ ಮೆರೆಸಿರೆ ತೋರು ಬೆರಳು

ಬರದೆ ಹೋದೆ ನೀನು
ಮರೆತು ಹೋದೆ ನೀನು || ಈ ದಿನಾಂತ ||

ಹಗಲಿರುಳಿನ ಈ ನಿರೀಕ್ಷೆ
ಈ ಯಾಚನೆ ಪ್ರಣಯ ಭಿಕ್ಷೆ
ಮೊರೆಯಾಲಿಸಿ ಕಳೆಯೆ ಶಿಕ್ಷೆ

ಬರದೆ ಹೋದೆ ನೀನು
ಮರೆತು ಹೋದೆ ನೀನು || ಈ ದಿನಾಂತ ||

ಸಾಹಿತ್ಯ – ಕೆ. ಎಸ್. ನಿಸಾರ್ ಅಹಮದ್
ಸಂಗೀತ – ಸಿ ಅಶ್ವಥ್
ಗಾಯನ – ನರಸಿಂಹ ನಾಯಕ್ / ಇಂದು ವಿಶ್ವನಾಥ್

download ee dinaanta samayadali

 

ಟ್ಯಾಗ್ ಗಳು: , , , , , , ,

ತಾಯಿ ಭೂಮಿ ತಾಯಿ / taayi bhoomi taayi

click to play

ತಾಯಿ ಭೂಮಿ ತಾಯಿ
ಸದಯಿ ಅಭಯದಾಯಿ
ಮತ್ತೆ ನಿನ್ನ ಸ್ಪರ್ಶದಿಂದ
ಅಮಿತ ಹರ್ಷ ಮನಸಿಗೆ || ತಾಯಿ ||

ಬೆಂದವರಿಗೆ ಕಂಬನಿ
ನೊಂದವರಿಗೆ ತಂಬನಿ
ನಂಬಿ ಬಂದ ಭಾಗ್ಯ ಹೀನ
ಜನರ ಊರುಗೋಲು ನೀ || ತಾಯಿ ||

ಬಾಳಿನಲ್ಲಿ ಸುಯ್ಯುವ
ಗೋಳಿನಲ್ಲಿ ತುಯ್ಯುವ
ಹಗಲು ಇರುಳು ದುಡಿಯುವ
ಹಳ್ಳಿ ಜನರ ಶಾಂತಿ ನೀ || ತಾಯಿ ||

ಪ್ರಗತಿ ಗೀತ ಗಾಯಕಿ
ಚಿರಾನಂದದಾಯಕಿ
ಭಾಗ್ಯ ಮಾರ್ಗದಲ್ಲಿ ನಡೆವ
ಭಾರತಕ್ಕೆ ನಾಯಕಿ || ತಾಯಿ ||

ಸಾಹಿತ್ಯ – ಕೆ. ಎಸ್. ನಿಸಾರ್ ಅಹಮದ್
ಸಂಗೀತ – ?
ಗಾಯನ – ಎಂ ಡಿ ಪಲ್ಲವಿ
 
download taayi bhoomi taayi
 
 

ಟ್ಯಾಗ್ ಗಳು: , , , , , ,

ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ / naadadeviye kande ninna

click to play

ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯಾ
ನೋವು ನಲಿವು ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ
ಒ೦ದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇಧ ತಾಯೀ
ಒ೦ದೆ ನೆಲದ ರಸ ಹೀರಲೇನು ಸಿಹಿ ಕಹಿಯ ರುಚಿಯ ಕಾಯೀ || ನಾಡದೇವಿಯೇ ||

ಕತ್ತಲಲ್ಲಿ ಕಂಗೆಟ್ಟು ಎಡವಿ ತಡವರಿಸುತಿರಲು ಮಂದೀ
ಕಡೆಗಣಿಸುತವರ ನಡೆದಿರುವನೊಬ್ಬ ಸ್ವಹಿತಕ್ಕೆ ಹಿರಿದು ದೊಂದಿ
ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬಾ || ನಾಡದೇವಿಯೇ ||

ಅನ್ನವಿರದ ಹಸುಳೆಗಳ ತಬ್ಬಿ ಅಳುತಿರುವ ತಾಯ ಕಂಡೆ
ದುಃಖ ಪೂರ ಉಕ್ಕುಕ್ಕಿ ಮೊರೆಯೇ ಕೊಚ್ಚಿತ್ತು ಬಾಳ ದಂಡೆ
ನರನನ್ನೆ ಗಾಳವಾಗಿಸಿಯೇ ಬಾಳ ನೀರಲ್ಲಿ ನರಿಗಳೆಷ್ಟೋ
ನಾವೆಲ್ಲಾ ಒಂದೆನುವ ಸತ್ಯ ಮೆಟ್ಟಿದ ನಾಡಿ ಹರಿಗಳೆಷ್ಟೋ || ನಾಡದೇವಿಯೇ ||

ಸಾಹಿತ್ಯ – ಕೆ.ಎಸ್.ನಿಸಾರ್ ಅಹಮದ್
ಸಂಗೀತ/ಗಾಯನ – ಸಿ ಅಶ್ವಥ್

download naadadeviye kande ninna madilalli

 

ಟ್ಯಾಗ್ ಗಳು: ,

ನಿತ್ಯೋತ್ಸವ / nityotsava

click to play

ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದಲಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ
ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ
ತಾಯೆ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ
ಸಿಂಹಾಸನ ಮಾಲೆಯಲ್ಲಿ
ಗತ ಸಾಹಸ ಸಾರುತಿರುವ
ಶಾಸನಗಳ ಸಾಲಿನಲಿ
ಓಲೆಗರಿಯ ಸಿರಿಗಳಲ್ಲಿ
ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ
ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ
ತಾಯೆ ನಿತ್ಯೋತ್ಸವ

ಹಲವೆನ್ನದ ಸಿರಿಮೆಯೇ
ಕುಲವೆನ್ನದ ಗರಿಮೆಯೇ
ಸದ್ವಿಕಾಸ ಶೀಲ ನುಡಿಯ
ಲೋಕಾಮೃತ ಸೀಮೆಯೆ
ಈ ವತ್ಸರ ನಿರ್ಮತ್ಸರ
ಮನದುದಾರ ಮಹಿಮೆಯೆ
ನಿತ್ಯೋತ್ಸವ
ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ
ತಾಯೆ ನಿತೋತ್ಸವ

ಸಾಹಿತ್ಯ – ಕೆ. ಎಸ್. ನಿಸಾರ್ ಅಹಮದ್
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಸಮೂಹ ಗಾಯನ

download nityotsava

 

ಟ್ಯಾಗ್ ಗಳು: , , , , ,