RSS

ಮುಗಿಲ ಮಾರಿಗೆ ರಾಗರತಿಯ / mugila maarige raagaratiya

23 ಜೂನ್

click to play

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ

ಬಿದಿಗಿ ಚಂದ್ರನ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ

ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬನ್ನಿಲೆ ಬರತಿತ್ತ
ತನ್ನ ಮೈಮರ ಮರತಿತ್ತ

ಸಾಹಿತ್ಯ – ದ. ರಾ. ಬೇಂದ್ರೆ
ಸಂಗೀತ – ?
ಗಾಯನ – ಸಂಗೀತ ಕಟ್ಟಿ ಕುಲಕರ್ಣಿ

download mugila maarige raaga ratiya

 

ಟ್ಯಾಗ್ ಗಳು: , , , , , ,

5 responses to “ಮುಗಿಲ ಮಾರಿಗೆ ರಾಗರತಿಯ / mugila maarige raagaratiya

  1. Ashwini Ganeshmurthy

    ಜುಲೈ 31, 2012 at 10:49 ಫೂರ್ವಾಹ್ನ

    most wonderful song…

     
    • coffeewithkiran

      ಜುಲೈ 31, 2012 at 12:49 ಅಪರಾಹ್ನ

      Yes. wonderful song, no doubt…
      welcome to my blog – Ashwini

       
  2. Ashwini Ganeshmurthy

    ಆಗಷ್ಟ್ 1, 2012 at 10:31 ಫೂರ್ವಾಹ್ನ

    give some link, if someone else have song and lyrics they can upload or they can give u….

     
    • coffeewithkiran

      ಆಗಷ್ಟ್ 1, 2012 at 12:02 ಅಪರಾಹ್ನ

      nice to hear….thanks a lot
      let me try to do something about that

       
  3. Mamatha Biredhar

    ಅಕ್ಟೋಬರ್ 4, 2013 at 3:16 ಅಪರಾಹ್ನ

    very nice song… thanks a lot

     

ನಿಮ್ಮ ಟಿಪ್ಪಣಿ ಬರೆಯಿರಿ