RSS

Category Archives: ರಾಜು ಅನಂತಸ್ವಾಮಿ

ಮನು ನಿನಗೆ ನೀನು / manu ninage neenu

click to play

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು
ಎಂದೋ ಮನು ಬರೆದಿತ್ತುದಿಂದೆಮಗೆ ಕಟ್ಟೇನು
ನಿನ್ನೆದೆಯ ದನಿಯೇ ಋಷಿ
ಮನು ನಿನಗೆ ನೀನು, ಮನು ನಿನಗೆ ನೀನು, ಮನು ನಿನಗೆ ನೀನು ।।

ನೀರಡಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನದೊರೆಯಾ ಬೇಕೇನು
ನೊಂದವರ ಕಂಬನಿಯನೊರೆಸಿ ಸಂತ್ಯಸುವಳೇ
ಶಾಸ್ತ್ರಪ್ರಮಾಣ ಅದಕಿರಲೇ ಬೇಕೇನು ।। ಯಾವ ।।

ಹಿಂದಿನ ಋಷಿಗಳು ಮಾನವರೇ ನಮ್ಮಂತೆ
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ ।। ಯಾವ ।।

ಸಾಹಿತ್ಯ – ಕುವೆಂಪು
ಸಂಗೀತ – ಸಿ ಅಶ್ವಥ್
ಗಾಯನ – ರಾಜು ಅನಂತಸ್ವಾಮಿ
 
download yaava kaalada shaastravenu
 

ಟ್ಯಾಗ್ ಗಳು: , , , , , , , ,

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು / nee nan atteeg belkang idde nanju

click to play

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು
ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು
ಮಾಗಿ ಕುಗ್ತು ಬೇಸ್ಗೆ ನುಗ್ತು
ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು
ನಂಗೂ ನಿಂಗೂ ಯೆಂಗ್ ಅಗಲೋಯ್ತು ನಂಜು ।। ನೀ ನನ್ ।।

ಸೀರಂಗ್ಪಟ್ನ ತಾವ್ ಕಾವೇರಿ ಒಡದಿ
ಯೆಳ್ಡೊಳಾಗಿ ಪಟ್ನದ್ ಸುತ್ತ ನಡದಿ
ಸಂಗಂದಲ್ಲಿ ಸೇರ್ಕೊಂಡ್ ಮಳ್ಳಿ
ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು
ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು ।। ನೀ ನನ್ ।।

ಆಗಲೋಡೋಗ್ತೆ ರಾತ್ರಿ ಬಂತಂತ್ ಅಂಜಿ
ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ
ರಾತ್ರಿ ಬಿತ್ತು ಆಗಲೇ ಬತ್ತು
ಓಗೋದ್ ಮಳ್ಳಿ ಬರೋದ್ಕಲ್ವ ನಂಜಿ
ಆ ನೆಮ್ಕೆ ನನ್ ಜೀವಾನ್ ಉಳಸೋ ಗಂಜಿ ।। ನೀ ನನ್ ।।

ಸಾಹಿತ್ಯ – ಜಿ.ಪಿ.ರಾಜರತ್ನಂ

ಸಂಗೀತ – ಮೈಸೂರು ಅನಂತಸ್ವಾಮಿ

ಗಾಯನ – ರಾಜು ಅನಂತಸ್ವಾಮಿ

download nee nan atteeg belkang idde nanju

 

 

 

ಟ್ಯಾಗ್ ಗಳು: , , , , , , ,

ಮುಂಗಾರು ಎನ್ನದೆ ಹಿಂಗಾರು ಎನ್ನದೆ / mungaaru ennade hingaaru ennade

click to play

ಮುಂಗಾರು ಎನ್ನದೆ ಹಿಂಗಾರು ಎನ್ನದೆ
ಬಂಗಾರ ಬೆಳೆಯುವನು ರೈತ ||

ಮಳೆಯೆನ್ನದೆ ಹೊಲ ಉಳುವ
ಛಳಿಯೆನ್ನದೆ ಕಳೆ ಕೀಳುವ
ಹೊಳಪನ್ನು ಮರೆತು ಥಳುಕನ್ನು ತಳ್ಳಿ
ಮಳೆರಾಯನಿಗೆ ಕೈ ಮುಗಿವನು || ಮುಂಗಾರು ||

ಭೂಮಿತಾಯಿಗೆ ಬೆವರನ್ನು ಸುರಿಸಿ
ಮುಗಿಲತ್ತ ಕಣ್ ಕಣ್ ಬಿಡುತಿಹನು
ವರ್ಷವಿಡಿ ಹರ್ಷದಲಿ ದುಡಿಯುವನು, ಮೈ ಮರೆಯುವನು
ಮರ್ಮವನರಿಯದೆ ಕರ್ಮವನ್ನು ಮಾಡುವ ಧರ್ಮಜನು ಇವನು || ಮುಂಗಾರು ||

ಯೋಜನೆ ಇಲ್ಲದ ಯಾತನಾ ಜೀವ
ಯೋಚನೆ ಇಲ್ಲದೆ ಮೆರೆಯುವನು
ಯಾಚಿಸುವನು ಕಂಡ ಕಂಡವರನ್ನು
ಬೀಜವನು ಬಿತ್ತುವ ಸಮಯದೀ ಬಾಯ್ ಬಾಯ್ ಬಿಡುವುದ ನೋಡಿದರೆ ಬಡವನೋ ಬಲ್ಲಿದನೋ *ಥಂಡನೋ ಅರಿಯದು || ಮುಂಗಾರು ||

ಸಾಹಿತ್ಯ – ?
ಸಂಗೀತ – ?
ಗಾಯನ – ರಾಜು ಅನಂತಸ್ವಾಮಿ

download mungaaru ennade hingaaru ennade

 

ಟ್ಯಾಗ್ ಗಳು: , , , , , ,

ಬಾಳು ಒಂದು ಬೆಳಕಿನಾಟ / baalu ondu belakinaata

click to play

ಬಾಳು ಒಂದು ಬೆಳಕಿನಾಟ, ಆಸೆಯೊಂದು ಕತ್ತಲಾಟ
ಸಾಗಿದೆ ಇದರೊಡನೆ, ಬೆಳಕು ಕತ್ತಲೋಟ || ಬಾಳು ಒಂದು ||

ಹಕ್ಕಿ ರೆಕ್ಕೆ ಬಿಚ್ಚಿ ತಾನು, ಹರುಷದಲ್ಲಿ ಹಾರುವಂತೆ
ಮನಸು ತನ್ನ ಆಸೆ ಹೊತ್ತು , ಸಾಗುತಿಹುದು ಎತ್ತರಕೆ
ಎಲ್ಲೆ ಇಲ್ಲ ಬಾನಿಗಲ್ಲಿ, ಹಕ್ಕಿಗಿಲ್ಲ ನೆಲೆಯು ಅಲ್ಲಿ
ಕೊನೆಯೇ ಇಲ್ಲ ಆಸೆಗೆಂದು, ತಿಳಿಯದೇಕೆ ಮನಸಿಗಿಂದು || ಬಾಳು ಒಂದು ||

ನದಿಯು ಕಡಲ ಸೇರಲೆಂದು, ತವಕದಲ್ಲಿ ಓಡುವಂತೆ
ಓಡುತಿಹುದು ಮನಸು ಏಕೆ, ಆಸೆ ಎಂಬ ಕಡಲಿಗಿಂದು
ಯಾವ ನದಿಯು ಆದರೇನು, ಕಡಲಿನೊಳಗೆ ಸಿಗುವುದೇನು
ಆಸೆ ತನ್ನ ಮಿತಿಯು ಮೀರಿ, ನೂಕುತಿಹುದು ಆಳದಲ್ಲಿ || ಬಾಳು ಒಂದು ||

ಬಾನಿಗಿಲ್ಲ ಎಲ್ಲೆ ಅಲ್ಲಿ, ಆಸೆಗಿಲ್ಲ ಕೊನೆಯು ಇಲ್ಲಿ
ಏಕೆ ಕನಸು ಕಾಣುತಿಹುದು, ಮನಸು ತಾನು ನೋವಲಿಂದು
ನಿಜವನರಿತು ಸಾಗುತಿರಲು, ಹರುಷವಿಂದು ಬಾಳಿನಲ್ಲಿ
ತಾಪವಿಲ್ಲ ಸೆಳೆಸವಿಲ್ಲ, ಆಸೆತೊರೆದ ಮನಸಲೆಂದು || ಬಾಳು ಒಂದು ||

ಸಾಹಿತ್ಯ – ?
ಸಂಗೀತ / ಗಾಯನ – ರಾಜು ಅನಂತಸ್ವಾಮಿ

downld baalu ondu belakinaata

 

ಟ್ಯಾಗ್ ಗಳು: , , , , ,

ತುಂಗೆ ದಡದಲ್ಲಿ ಹೊಂಗೆ ನೆರಳಲ್ಲಿ / tunge dadadalli honge neralalli

click to play

ತುಂಗೆ ದಡದಲ್ಲಿ ಹೊಂಗೆ ನೆರಳಲ್ಲಿ ಹರಟೆ ಹೊಡೆಯಬೇಕು ಹರಟೆ ಹೊಡೆಯಬೇಕು
ಮಾತು ಸಾಕಾಗಿ ಮೌನ ಬೇಕಾಗಿ ನದಿಯ ನೋಡಬೇಕು ನದಿಯ ನೋಡಬೇಕು

ಆ ಮೌನದಲ್ಲಿ ನಿನ್ನ ಇಡಿಯಾಗಿ ಆ ಮೌನದಲ್ಲಿ ನಿನ್ನ ಇಡಿಯಾಗಿ
ನಾನು ಕಾಣಬೇಕು ನಾನು ಕಾಣಬೇಕು
ಮೌನ ಹೂವಾಗಿ ಪ್ರೀತಿ ಕಾಯಾಗಿ ಮೌನ ಹೂವಾಗಿ ಪ್ರೀತಿ ಕಾಯಾಗಿ
ಪಕ್ವವಾಗಬೇಕು ಪಕ್ವವಾಗಬೇಕು || ತುಂಗೆ ದಡದಲ್ಲಿ ||

ಆ ಹಣ್ಣ ಪಡೆದು ರೋಮಾಂಚಗೊಂಡು ಆ ಹಣ್ಣ ಪಡೆದು ರೋಮಾಂಚಗೊಂಡು
ಒಟ್ಟಾಗಿ ಕೈಯ ಚಾಚಿ ಒಟ್ಟಾಗಿ ಕೈಯ ಚಾಚಿ
ತನ್ಮಯತೆ ಪಡೆವ ಆ ಕ್ಷಣದಲ್ಲಿರುವ ತನ್ಮಯತೆ ಪಡೆವ ಆ ಕ್ಷಣದಲ್ಲಿರುವ
ಆನಂದವನ್ನೇ ಬಾಚಿ ಆನಂದವನ್ನೇ ಬಾಚಿ || ತುಂಗೆ ದಡದಲ್ಲಿ ||

ಸಾಹಿತ್ಯ – ಸುಮತೀಂದ್ರ ನಾಡಿಗ್
ಸಂಗೀತ / ಗಾಯನ – ರಾಜು ಅನಂತಸ್ವಾಮಿ

download tunge dadadalli honge neralalli

 

ಟ್ಯಾಗ್ ಗಳು: , , , , , ,

ಯೇಳ್ಕೊಳ್ಳಾಕ್ ಒಂದ್ ಊರು / elkollak ond ooru

click to play

ರಾಜು ಅನಂತಸ್ವಾಮಿ ದನಿಯಲ್ಲಿ

ಪಿ ಕಾಳಿಂಗರಾವ್ ದನಿಯಲ್ಲಿ

ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಬೂಮ್ತಾಯಿ ಮಂಚ;
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!

ಅಗಲೆಲ್ಲ ಬೆವರ್ ಅರ್ಸಿ
ತಂದದ್ರಲ್ಲ್ ಒಸಿ ಮುರ್ಸಿ
ಸಂಜೇಲಿ ವುಳಿ ಯೆಂಡ ಕೊಂಚ
ಯೀರ್ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರೆ
ತುoಭೋಯ್ತು ರತ್ನನ್ ಪರ್ಪಂಚ!

ಏನೋ ಕುಸಿಯಾದಾಗ
ಮತ್ತ್ ಎಚ್ಚಿ ಓದಾಗ
ಅಂಗೇನೆ ಪರಪಂಚದ್ ಅಂಚ
ದಾಟ್ಕಂಡಿ ಆರಾಡ್ತ
ಕನ್ನಡದಲ್ ಪದವಾಡ್ತ
ಇಗ್ಗೋದು ರತ್ನನ್ ಪರ್ಪಂಚ!

ದುಕ್ಕಿಲ್ಲ ದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ
ನಾವ್ ಕಂಡಿಲ್ಲ್ ಆ ತಂಚ ವಂಚ;
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ಲ್ ಆಯಾಗಿ
ಬಾಳೋದು ರತ್ನನ್ ಪರ್ಪಂಚ!

‘ಬಡತನ ಗಿಡತನ
ಏನಿದ್ರೇನ್ ? ನಡೆತೇನ
ಚೆಂದಾಗ್ ಇಟ್ಕೊಳ್ಳಾದೆ ಅಚ್ಛ!’ –
ಅಂದ್ಕೊಂಡಿ ಸುಕವಾಗಿ
ಕಸ್ಟಕ್ ನೆಗಮೊಕವಾಗಿ
ನೆಗೆಯೋದೆ ರತ್ನನ್ ಪರ್ಪಂಚ!

ದೇವ್ರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಚ!
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಚೊಂಡ್ ಯೇಳ್ದಂಗೆ
ಕುಣಿಯಾದೆ ರತ್ನನ್ ಪರ್ಪಂಚ!

ಸಾಹಿತ್ಯ – ಜಿ.ಪಿ.ರಾಜರತ್ನಂ
ಸಂಗೀತ – P ಕಾಳಿಂಗ ರಾವ್

download elkollak ond ooru – raju ananthaswamy

download elkollak ond ooru – p kalingarao

 

ಟ್ಯಾಗ್ ಗಳು: , , , , ,

ಕಾಲದ ಕಡಲಲಿ ಉಸಿರಿನ ಹಡಗು / kaalada kadalali usirina hadagu

click to play

ಕಾಲದ ಕಡಲಲಿ ಉಸಿರಿನ ಹಡಗು
ತೇಲುತ ನಡೆದಿದೆ ಹಗಲು ಇರುಳು
ನೀರಲಿ ತೆರೆದಿದೆ ನಿಲ್ಲದ ದಾರಿ
ಎಲ್ಲಿಂದೆಲ್ಲಿಗೆ ಇದರ ಸವಾರಿ |

ಕಾಮನ ಕೋರುವ ಕಣ್ಣು ಇದಕೆ
ಬಯಕೆಯ ಬೀರುವ ಬಾವುಟ ರೆಕ್ಕೆ
ಶುದಾಗ್ನಿ ಹೊರಳುವ ತುಂಬದ ಹೊಟ್ಟೆ
ಹಾಹಾಕಾರದ ಹೆಬ್ಬುಲಿ ರಟ್ಟೆ | ಕಾಲದ |

ಮುಡಿಯಲಿ ಗರ್ವದ ಹೊಗೆಯ ಕಿರೀಟ
ಮುಖದಲಿ ತಂಗಿದೆ ಮಕ್ಕಳ ನೋಟ
ಹೇ ಸುತ್ತಾ ಉತ್ತಿಸಿದ ಅಲೆಗಳ ಕಾಟ
ಮರುಭೂಮಿಯಲಿದು ತೆಂಗಿನ ತೋಟ | ಕಾಲದ |

ಮಗುವಿದೆ ತಳ್ಳಿದ ಕಾಲಿಗೆ ಬಿದ್ದು
ತಂದೆಯ ಉತ್ತರ ಮತ್ತು ಗುದ್ದು
ಈ ಗತಿಯೇ ಹೆತ್ತವಳೇ ಇದ್ದು
ಕರುಣೆಯ ಕರುಳಲಿ ಹುಟ್ಟದ ಸದ್ದು | ಕಾಲದ |

ಸಾಹಿತ್ಯ – ?
ಸಂಗೀತ – ?
ಗಾಯನ – ರಾಜು ಅನಂತಸ್ವಾಮಿ

download kaalada kadalali usirina hadagu

 

ಟ್ಯಾಗ್ ಗಳು:

ನಗುವಾಗ ನಕ್ಕು / naguvaaga nakku

click to play

ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿತ್ತು ಅರ್ಧ ದಾರಿ
ಹೂಬಳ್ಳಿಯಿಂದ ಹೆಮ್ಮರನ ಎದೆಗೆ ಬಿಳಿ ಬಿಳಿಯ ಹಕ್ಕಿ ಹಾರಿ||ಪ||

ನಸು ನಕ್ಕು ನಾಚಿ ನೀ ಬಳಿಗೆ ಬಂದೆ ಕೆಂಪಾದ ಹೂಗಳಲ್ಲಿ
ಆ ಮೊದಲ ದಿನದ ಅದೆ ನಲಿವ ಕಂಡೆ ಹೂವೆದೆಯ ಹನಿಗಳಲ್ಲಿ
ನಕ್ಷತ್ರ ಲೋಕ ತೆರೆದಿತ್ತು ಮೇಲೆ ಹೊಸ ಭಾವಗೀತೆಯಂತೆ
ಎದೆಯಾಳದಿಂದ ತುಳುಕಿತ್ತು ಜ್ವಾಲೆ ಬಾಂದಳದ ಮಿಂಚಿನಂತೆ||ನಗುವಾಗ||

ಮೈ ಮೈಗೆ ಸೋಂಕಿ ಆಗಿತ್ತು ಸಂಜೆ ಹುಣ್ಣಿಮೆಯ ತಂಪಿನಲ್ಲಿ
ನಾ ನಿನ್ನ ಕಂಡೆ ನಿನ್ನೊಲವ ಕಂಡೆ ಮಲ್ಲಿಗೆಯ ಕಂಪಿನಲ್ಲಿ
ಓ ನನ್ನ ನಲ್ಲೆ ನಗುತಿರುವೆಯಲ್ಲೆ ನನ್ನೆದೆಯ ತುಂಬ ನೀನೆ
ಈ ಕತ್ತಲೊಳಗೆ ಹುಡುಕುವುದು ಬೇಡ ಇಲ್ಲಿಹುದು ನಿನ್ನ ವೀಣೆ||ನಗುವಾಗ||

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ – ?
ಗಾಯನ – ರಾಜು ಅನಂತಸ್ವಾಮಿ

download naguvaaga nakku

 

ಟ್ಯಾಗ್ ಗಳು: , , , , ,

ಬದುಕು ಜಟಕಾ ಬಂಡಿ / baduku jataka bandi

click to play

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗನು
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
ಪದಕುಸಿಯೇ ನೆಲವಿಹುದು ಮಂಕುತಿಮ್ಮ

ಅಕ್ಕಿಯೊಳಗನ್ನವನು ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನದಾರು
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ
ದಕ್ಕುವುದೇ ಜಸ ನಿನಗೆ ಮಂಕುತಿಮ್ಮ

ಇಳೆಯಿಂದ ಮೊಳಕೆವೊಗೆ ಒಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಕಲ್ಲು ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ ||

ಸಾಹಿತ್ಯ – ಡಿ.ವಿ.ಗುಂಡಪ್ಪ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ರಾಜು ಅನಂತಸ್ವಾಮಿ

download baduku jataka bandi

 

ಟ್ಯಾಗ್ ಗಳು: , , , ,

ಎಂಡ ಮುಟ್ದಾಗ್ಲೆಲ್ಲ ನಂಗೆ / enda mutdaaglella nange

click to play

ಎಂಡ ಮುಟ್ದಾಗ್ಲೆಲ್ಲ ನಂಗೆ ಎನೋsssss ಕುಸಿ ಆಗ್ತೈತೆ
ಕುಡ್ಕುನ್ ಮಾತ್ ಅಂದ್ರಂಗೆ ಅಲ್ಲ ನೆಗ ಉಕ್ಕ್ಬರ್ತೈತೆ ||

ಈಚಲ್ ಮರದಲ್ ಮಲಗಿದ್ ಎಂಡ ಕಟ್ಟಿದ್ ಮಡಕೆಗರ್ದು
ಭಾರಿ ಪೀಪಾಯಿನಾಗಿಳ್ಕೊಂಡಿದ್ ತುಮ್ಬ್ಕೊಂತೈತೆ ಸುರ್ದು ಸುರ್ದು ಸುರ್ದು ಸುರ್ದು ಸುರ್ದು ಸುರ್ದು
ಅಲ್ಲಿನ್ದಿಲ್ಗೆ ಇಲ್ಲಿನ್ದಲ್ಗೆ
ಅಲ್ಲಿನ್ದಿಲ್ಗೆ ಇಲ್ಲಿನ್ದಲ್ಗೆ ಪೀಪಾಯ್ನಲ್ ಉಲ್ಲಾಡಿ
ಕುಡ್ಕುನ್ ಬುಂಡೇಲ್ ಉಟ್ಕೊಂತೈತೆ ಎಂತ ಜನ್ಮ ನೋಡು ನೋಡು ನೋಡು ನೋಡು ನೋಡು ನೋಡು

ಎಂಡ ಮುಟ್ದಾಗ್ಲೆಲ್ಲ ನಂಗೆ ಎನೋsssss ಕುಸಿ ಆಗ್ತೈತೆ
ಕುಡ್ಕುನ್ ಮಾತ್ ಅಂದ್ರಂಗೆ ಅಲ್ಲ ನೆಗ ಉಕ್ಕ್ಬರ್ತೈತೆ

ರಬ್ಬರ್ ಚಂಡ್ನಂಗ್ ಅಲ್ಲಿನ್ದಿಲ್ಗೆ ಎಂಡ ಉಲ್ಲ್ಲಾಡ್ತಿದ್ದು
ಕೊನೆಯಾಗ್ ಸಾಂತಿ ಕಂಡ್ಕೊಂತೈತೆ ಕುಡ್ಕುನ್ ವಟ್ಯಾಗ್ ಬಿದ್ದು ಬಿದ್ದು ಬಿದ್ದು ಬಿದ್ದು ಬಿದ್ದು ಬಿದ್ದು

ಸಿಕ್ಕಿದ್ ದೇಹ ತಬ್ಬಿಡ್ಕೊಂಡಿ ಆತ್ಮ ಅಲ್ಯೋ ಅಂಗೆ
ಎಂಡ ಅಲ್ದಿದ್ ನೆಪ್ ಮಾಡ್ಕೊಂಡ್ರೆ ಮೈ ಜುಮ್ ಅನ್ತೈತಂಗೆ

ಎಂಡ ಮುಟ್ದಾಗ್ಲೆಲ್ಲ ನಂಗೆ ಎನೋsssss ಕುಸಿ ಆಗ್ತೈತೆ
ಕುಡ್ಕುನ್ ಮಾತ್ ಅಂದ್ರಂಗೆ ಅಲ್ಲ ನೆಗ ಉಕ್ಕ್ಬರ್ತೈತೆ

ಬ್ರಹ್ಮ ಅನ್ನೋ ಅದ್ರಲ್ ಆತ್ಮ ಬೆರ್ಕೊಂಡ್ ಹೋಗೊವಂಗೆ
ಬೆಸ್ಕೊಂತೈತೆ ಮೈನಾಗ್ ಎಂಡ ಗುರ್ತೆ ಗೊತ್ಹಾಗ್ದಂಗೆ ಅಂಗೆ ಅಂಗೆ ಅಂಗೆ ಅಂಗೆ ಅಂಗೆ ಅಂಗೆ
ಎಂಡ ಮುಟ್ದಾಗ್ಲೆಲ್ಲ ನಂಗೆ ಎನೋsssss ಕುಸಿ ಆಗ್ತೈತೆ ||
ಕುಸೀಗ್ ಕಾರಣ ಗೊತ್ತಾಯಿತೀಗ ಕುಣಿಯೋವಂಗಾಯಿತೈತೆ

ಸಾಹಿತ್ಯ ಜಿ.ಪಿ.ರಾಜರತ್ನಂ
ಸಂಗೀತ – ?
ಗಾಯನ – ರಾಜು ಅನಂತಸ್ವಾಮಿ

download enda mutdaaglella nange eno kusi aagtaite

 

ಟ್ಯಾಗ್ ಗಳು: , , , ,