RSS

Category Archives: ಮಾಲತಿ ಶರ್ಮ

ಹೊಸ ಬಗೆಯಲಿ ಬರಲಿ / hosa bageyali barali

ಹೊಸ ಬಗೆಯಲಿ ಬರಲಿ
ಸುಖ ಸಾವಿರ ತರಲಿ ।।

ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ
ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ ।। ಹೊಸ ।।

ತುಳಿದು ಆಳಲಾಗದಂಥ ಬಾಳಿಗೆ
ಹೊನ್ನಿನ ತೋರಣವ ಬಿಗಿದ ನಾಳೆಗೆ
ಹೊಂಬಿಸಿಲಿನ ಹಾದಿಗೆ
ಕೇದಗೆ ಹೂ ಬೀದಿಗೆ
ಮಾತೆಲ್ಲವು ಕೃತಿಯಾಗುವ ಜಾಡಿಗೆ ।। ಹೊಸ ।।

ಕಣ್ಣೆರಡೂ ಉರಿವ ದೀಪಸ್ಥಂಭ
ಮೇಲೆತ್ತಿದ ತೋಳುಗಳೇ ಕಂಬ
ದೇಹವೆ ಗುಡಿಯಾಗಿ
ನಾಡೇ ಇಡಿಯಾಗಿ
ಸ್ವಾಗತಿಸಲಿ ಸಂಕ್ರಾಂತಿಯ ಕೂಗಿ ।। ಹೊಸ ।।

ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಎಚ್ ಕೆ ನಾರಾಯಣ್
ಗಾಯನ – ರತ್ನಮಾಲ ಪ್ರಕಾಶ್ / ಮಾಲತಿ ಶರ್ಮ

download hosa bageyali barali

 

ಟ್ಯಾಗ್ ಗಳು: , , , , , , ,

ಒಂದೇ ವೃಕ್ಷದ ಕೊಂಬೆಗಳು / onde vrukshada kombegalu

click to play

ಒಂದೇ ವೃಕ್ಷದ ಕೊಂಬೆಗಳು
ನಾವೊಂದೇ ಬಳ್ಳಿಯ ಹೂವುಗಳು
ಒಂದೇ ನೆಲದೊಳು ಬೇರೂರುತ
ನಾವೊಂದೇ ಮುಗಿಲಿಗೆ ನೆಗೆವವರು

ಒಂದೆ ವಸಂತದ ಸ್ಪರ್ಶಕೆ ಝಗ್ಗನೆ
ಚಿಗುರುತ ಎದೆಯನು ತೆರೆದವರು
ಹಳೆಯ ನೆನಪುಗಳನೊಂದೇ ಗಾಳಿಗೆ
ತೂರುತ ಭರವಸೆಗೊಲಿದವರು

ಹಣ್ಣು-ಕಾಯ್ಗಳಲಿ ನಾಳಿನ ಕನಸಿನ
ಬೀಜವ ಹುದುಗಿಸಿ ಇಟ್ಟವರು
ಕೊಂಬೆ ಕೊಂಬೆಯಲಿ ಹಾಡುವ ಹಕ್ಕಿಯ
ರಾಗಕೆ ಮನಸನು ಕೊಟ್ಟವರು

ಹಗಲಿರುಳಿನ ಋತುಮಾನದ ಗತಿಯೊಳು
ಮರಳಿ ಮರಳಿ ಹೊಸತಾಗುವರು
ಹಿಂದು-ಮುಂದುಗಳನೊಂದೇ ಕೇಂದ್ರಕೆ
ತಂದುಕೊಂಡು ನೆಲೆ ನಿಂತವರು

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲಾ ಪ್ರಕಾಶ್ / ಮಾಲತಿ ಶರ್ಮ

download onde vrukshada kombegalu

 

ಟ್ಯಾಗ್ ಗಳು: , , , , , , ,

ಯಾಕೆ ಕಾಡುತಿದೆ ಸುಮ್ಮನೆ ನನ್ನನು / yaake kaadutide summane nannanu

click to play

ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಯಾವುದು ಈ ರಾಗ ।।
ಒಂದೇ ಸಮನೆ ಹಾಯುತಲಿದೆ ಅರಿವಿಗೆ
ಗುರುತೇ ತಪ್ಪಿದಾಗ ।। ಯಾಕೆ ।।

ಯಾವುದೋ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ ।।
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ ।। ಯಾಕೆ ।।

ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ ।।
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ ।। ಯಾಕೆ ।।

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಸಂಗೀತ – ಶಿವಮೊಗ್ಗ ಸುಬ್ಬಣ್ಣ

ಗಾಯನ – ಮಾಲತಿ ಶರ್ಮ

download yaake kaadutide summane nannanu

 

 

ಟ್ಯಾಗ್ ಗಳು: , , , , , , , ,