RSS

Category Archives: ಮಾಸ್ತಿ ವೆಂಕಟೇಶ ಅಯ್ಯಂಗಾರ್

ಬಾ ಸವಿತಾ / baa savitha

click to play

ಬಾ ಸವಿತಾ ಬಾ ಸವಿತಾ ಬಾ ಸವಿತಾ..

ಒಳಗಿನ ಕಣ್ಣನು ಮುಚ್ಚಿಸಿವೊಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿವೊಮ್ಮೆ
ಒಳಿತಲ್ಲದುದೆ ಒಳಿತೆಂಬುದರ
ಚಳಕವೆಲ್ಲಕೆ ವಿನಾಶವತಾ || ಬಾ ||

ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ
ಛಲ ತೊಟ್ಟ ಮಲ್ಲ, ವಾಹಿನಿ ಬಾ
ನಿಲವಿಲ್ಲಾ ಜಗದಿ ಕತ್ತಲೆಗೆಂದು
ಗೆಲವನು ಸಾರುವ ಭಾಸವ ತಾ || ಬಾ ||

ಓಂ ತತ್ಸವಿತುರ್ವರೇಣ್ಯವೆಂಬೆವು
ಅಂತಲ್ಲದೆ ಬೇರೆಯದನು ನಂಬೆವು
ಪಂಥವ ಬೆಳೆಗಿಸಿ ನಿರೂಪಿಸಿ ಕೋಂಬೆವು
ಶಾಂತಸುಂದರ ಶಿವದಾ ಸವಿತಾ || ಬಾ ||

ಸಾಹಿತ್ಯ – ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ?

download baa savitha

 

ಟ್ಯಾಗ್ ಗಳು: , , , , , ,

ಬೆಟ್ಟದಾ ತುದಿಯಲ್ಲಿ / bettadaa tudiyalli

click to play

ಬೆಟ್ಟದಾ ತುದಿಯಲ್ಲಿ
ಕಾಡುಗಳಾ ಎದೆಯಲ್ಲಿ
ಕಬಿನಿಯ ನದಿಯಲ್ಲಿ
ಕೂಗುತಿರುವುದಲ್ಲಿ
ಎಲ್ಲಿ ಕೊಂಬಿನ ಸಲಗಾ
ಹೆಣ್ಣಾನೆ ಮರಿ ಬಳಗ
ಬೆಳುತಿಂಗಳಿನ ತಳಗ
ನಡೆಯುವುದು ಅಲ್ಲಿ

ದಿನ ದಿನ ಸಂಪಂಗಿ
ಇರುವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗೀ
ಅರಳುವುದು ಎಲ್ಲಿ
ಎಲ್ಲಿ ಕರಿ ಸಿರಿಗಂಧಾ
ಮರ ಬೆಳೆದು ತಾ ಮುಂದಾ
ಮಾದೇಶ್ವರಗೆ ಚಂದಾ
ಮೆಚ್ಚುವುದು ಅಲ್ಲಿ
ಮಾದೇಶ್ವರಗೆ ಚಂದಾ
ಮೆಚ್ಚುವುದು ಅಲ್ಲಿ

ಸಾಹಿತ್ಯ – ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಂಗೀತ / ಗಾಯನ – ಸಿ ಅಶ್ವಥ್

download bettadaa tudiyalli

 

ಟ್ಯಾಗ್ ಗಳು: , , , , ,