RSS

ಹೊಸ ಬಗೆಯಲಿ ಬರಲಿ / hosa bageyali barali

01 ಫೆಬ್ರ

ಹೊಸ ಬಗೆಯಲಿ ಬರಲಿ
ಸುಖ ಸಾವಿರ ತರಲಿ ।।

ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ
ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ ।। ಹೊಸ ।।

ತುಳಿದು ಆಳಲಾಗದಂಥ ಬಾಳಿಗೆ
ಹೊನ್ನಿನ ತೋರಣವ ಬಿಗಿದ ನಾಳೆಗೆ
ಹೊಂಬಿಸಿಲಿನ ಹಾದಿಗೆ
ಕೇದಗೆ ಹೂ ಬೀದಿಗೆ
ಮಾತೆಲ್ಲವು ಕೃತಿಯಾಗುವ ಜಾಡಿಗೆ ।। ಹೊಸ ।।

ಕಣ್ಣೆರಡೂ ಉರಿವ ದೀಪಸ್ಥಂಭ
ಮೇಲೆತ್ತಿದ ತೋಳುಗಳೇ ಕಂಬ
ದೇಹವೆ ಗುಡಿಯಾಗಿ
ನಾಡೇ ಇಡಿಯಾಗಿ
ಸ್ವಾಗತಿಸಲಿ ಸಂಕ್ರಾಂತಿಯ ಕೂಗಿ ।। ಹೊಸ ।।

ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಎಚ್ ಕೆ ನಾರಾಯಣ್
ಗಾಯನ – ರತ್ನಮಾಲ ಪ್ರಕಾಶ್ / ಮಾಲತಿ ಶರ್ಮ

download hosa bageyali barali

 

ಟ್ಯಾಗ್ ಗಳು: , , , , , , ,

4 responses to “ಹೊಸ ಬಗೆಯಲಿ ಬರಲಿ / hosa bageyali barali

  1. korisharan

    ಫೆಬ್ರವರಿ 8, 2016 at 1:09 ಫೂರ್ವಾಹ್ನ

    Nijavaglu manage kannada habbada rasadoutana badisdri kiran….nimage Kori Kori dhanyavadagalu kiran..
    Jai Bhuvaneswari…

     
  2. Pooja Nagraj

    ಆಗಷ್ಟ್ 8, 2020 at 6:45 ಅಪರಾಹ್ನ

    ತುಂಬಾ ಧನ್ಯವಾದಗಳು ಕಿರಣ್ ಅವರೆ..
    ನೀವೂ ಪೋಸ್ಟ್ ಮಾಡೋದನು ನಿಲ್ಲಿಸಿದಿರಿ..
    ಮತ್ತೆ ಶುರು ಮಾಡುವಿರೆಂದು ನೀರಿಕ್ಷಿಸುತೆನೆ..
    – ಪೂಜ

     
    • coffeewithkiran

      ಆಗಷ್ಟ್ 20, 2020 at 8:21 ಅಪರಾಹ್ನ

      ಧನ್ಯವಾದಗಳು.
      ಮತ್ತೆ post ಮಾಡಲು ಪ್ರಯತ್ನಿಸುವೆ.

       

ನಿಮ್ಮ ಟಿಪ್ಪಣಿ ಬರೆಯಿರಿ