RSS

Category Archives: ಸುಪ್ರಿಯಾ ಆಚಾರ್ಯ

ನಿನ್ನ ಕಂಗಳ ಕೊಳದಿ / ninna kangala koladi

click to play

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರೆ ಕನಸುಗಳು ಕಾಡುತಿಹುದು ।। ನಿನ್ನ ಕಂಗಳ ।।

ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು ।। ನಿನ್ನ ಕಂಗಳ ।।

ನಾನೊಂದು ದಡದಲ್ಲಿ ನೀನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಡವು
ಯಾವ ದೋಣಿಯು ತೇಲಿ ಎಂದು ಬರುವುದೊ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು ।। ನಿನ್ನ ಕಂಗಳ ।।

ಸಾಹಿತ್ಯ – ಎಂ ಎನ್ ವ್ಯಾಸರಾವ್
ಸಂಗೀತ – ಸಿ ಅಶ್ವಥ್
ಗಾಯನ – ಸುಪ್ರಿಯಾ ಆಚಾರ್ಯ
 
download ninna kangala koladi
 

ಟ್ಯಾಗ್ ಗಳು: , , , , , , ,