RSS

Category Archives: ಶಿಶುನಾಳ ಶರೀಫ / Shishunala sharifa

ಎಂಥಾ ಮೋಜಿನ ಕುದುರಿ / Entha mojina kuduri

click to play

ಎಂಥಾ ಮೋಜಿನ ಕುದುರಿ
ಹತ್ತಿದ ಮ್ಯಾಲ ತಿರುಗುವುದು ಹನ್ನೊಂದು ಫೇರಿ ।।

ಹಚ್ಚನ್ನ ಕರಡ ಹಾಕಲಿಬೇಕೋ
ನಿಚ್ಚಳ ನೀರ ಕುಡಿಸಲಿಬೇಕೋ
ಸಂಸ್ಕಾರ ಕಮಚೀಲಿ ಹೊಡಿಯಲಿಬೇಕೋ
ಅಚ್ಯುತ ಮೆಚ್ಚುವಂತೆ ಮೈ ತಿಕ್ಕಬೇಕೋ ।। ಎಂಥಾ ।।

ತಪ್ಪುವುದಿಲ್ಲಪ್ಪ ಎರಡು ಹೊತ್ತು ದಾಣಿ
ತಿಂದ ಮೇಲ ತಿರಗತೈತಿ ಮೇಗಲ ಓಣಿ
ಖಾದರಲಿಂಗು ಪಾಡಿದ ವಾಣಿ
ಸೋಸಿ ನೋಡಿಕೋ ಹಾಕಿದ ಗೋಣಿ ।। ಎಂಥಾ ।।

ಪಾಂಡವರ ಮನಿಯೊಳಗ ಪಾಗದಾಗಿತ್ತು
ಪಾಗಾದ ಗೂಟವ ಝಾಡಿಸಿ ಕಿತ್ತು
ಹೋಗುವಾಗ ಶಿಶುನಾಳಕ್ಕೋಡ್ಯೋಡಿ ಬಂತು
ಗೋವಿಂದ ಗುರುವೇ ತಾನಾಗಿತ್ತು  ।। ಎಂಥಾ ।।

ಸಾಹಿತ್ಯ – ಶಿಶುನಾಳ ಶರೀಫ
ಸಂಗೀತ – ಸಿ ಅಶ್ವಥ್
ಗಾಯನ – ಸುಲೋಚನ

download entha mojina kuduri

 

ಟ್ಯಾಗ್ ಗಳು:

ದುಡ್ಡು ಕೆಟ್ಟದ್ದು ನೋಡಣ್ಣ / duddu kettaddu nodanna

click to play

ದುಡ್ಡು ಕೆಟ್ಟದ್ದು ನೋಡಣ್ಣ – ದುಗ್ಗಾಣಿಗೆ
ಹೆಡ್ಡನಾಗಬೇಡೋ, ತಿಂದೀ ನೀ ಮಣ್ಣ !

ದುಡ್ಡು ಕೆಟ್ಟದ್ದೊ ಹೆಡ್ಡ ಮೂಢಾತ್ಮ
ದೊಡ್ಡ ದೊಡ್ಡವರನ್ನೆ ಹೆಗ್ಗಾಲು ಇಡಿಸಿತು.
ದುಡ್ಡು ಕೆಟ್ಟದ್ದು ನೋಡಣ್ಣ

ಹೆಣ್ಣಿನ ಪೂಜೆಗೆ ಇಳಿಸಿ – ಮಣ್ಣಿನ
ಸಂತೇಲಿ ಇಲ್ಲದ ಮರ್ಯಾದೆ ಕೊಡಿಸಿ
ಮಿಣ್ಣನೆ ತಿಂದೀತು ಒಳಗ – ಮೆಲ್ಲನೆ
ತಣ್ಣಗ ಮಾಡೀತು ಬೆಂಕಿಯ ಕಿಡಿ.

ಮುಕ್ಕಿಸೀತು ಮಣ್ಣು ರೊಕ್ಕ- ಅದ
ತಕ್ಕಂತೆ ಬಳಸಲು ತೆರೆಸೀತು ಕಣ್ಣು
ಮುಕ್ಕುವ ಚಪಲ ಏಕಿನ್ನು – ಮುಕ್ಕಿ
ಬಿಕ್ಕಲು ಕುಡಿಸೀತು ನೀರನ್ನು.

ಆಸೆ ಬಿದ್ದು ಮನದ ಮಾರಿ
ಹೊಂಟ್ಯಾಳೊ ಹುಡುಕುತ್ತ ನೂರೆಂಟು ಕೇರಿ
ಕಾಸು ಕಾಸನ್ನೂ ಹೆಕ್ಕಿ – ಮೂಳಿ
ಶಿಶುನಾಳಾಧಿಶನ ಮರೆತಾಳು ಸೊಕ್ಕಿ

ಸಾಹಿತ್ಯ – ಶಿಶುನಾಳ ಶರೀಫ
ಸಂಗೀತ / ಗಾಯನ – ಸಿ ಅಶ್ವಥ್

download duddu kettaddu nodanna

 

ಟ್ಯಾಗ್ ಗಳು: , , , , ,

ಕುರುಬರೋ ನಾವು ಕುರುಬರು / kurubaro naavu kurubaru

click to play

ಕುರುಬರೋ ನಾವು ಕುರುಬರು
ಏನು ಬಲ್ಲೇವರಿ ಒಳ ಕಾರುಬಾರು

ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು
ಸೆಳೆದಂತೆ ಬಂದೇವು ನಮ್ಮ ಕುರಿ ಹಿಂಡು || ಕುರುಬರೋ ||

ಏಳುಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ
ಇಟ್ಟವ್ರೆ ಕುರಿಗಳ ಚೆನ್ನಾಗಿ ಬಚ್ಚಿ
ಹೊಟ್ಟೆ೦ಬ ಬಾಗಿಲ ಬಲವಾಗಿ ಮುಚ್ಚಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ || ಕುರುಬರೋ ||

ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ
ತುಂಬಿ ಚಲ್ಲೇವರಿ ಹಿಕ್ಕಿಯ ಹೆಡಗಿ
ಗುರು ಹೇಳಿದ ಬಾಳು ಹಾಲಿನ ಗಡಗಿ
ನಮ್ಮ ಕೈಲೇ ಇದ್ಯೋ ಅರಿವಿನ ಬಡಗಿ || ಕುರುಬರೋ ||
ಮೇವು ಹುಲ್ಸಾದಂತ ಮಸಣಿದು ಖರೆಯೇ
ಕುರಿ ಇಲ್ಲಿ ಮೆಯ್ಸಾಕ ಬಂದದ್ದು ಸರಿಯೆ
ತೊಳ ಹಾರಿ ಕುರಿಗಳ ಗೋಣು ಮುರಿಯೆ
ನಾಗಲಿಂಗ ಅಜ್ಜ ಹೇಳಿದ ಪರಿಯೇ || ಕುರುಬರೋ ||

ಸಾಹಿತ್ಯ – ಶಿಶುನಾಳ ಶರೀಫ
ಸಂಗೀತ / ಗಾಯನ – ಸಿ ಅಶ್ವಥ್

download kurubaro naavu kurubaru

 

ಟ್ಯಾಗ್ ಗಳು: , , , , , ,

ಬಾಯಿಲೆ ಬ್ರಹ್ಮವ ಬೊಗಳಿದರೇನೂ / baayile brahmava bogalidarenoo

click to play

ಬಾಯಿಲೆ ಬ್ರಹ್ಮವ ಬೊಗಳಿದರೇನೂ
ನಾಯಿಯಂತೆ ಕೊಳೆ ಮೇಯುವಿ ಮನಸೇ
ಕಾಯ ಜೀವದೊಳು ನ್ಯಾಯವ ಹಿಡಿಯದೇ
ಮಾಯದೊಳಗೆ ಮುಳುಗೇಳುವಿ ಮನಸೇ

ಪರಸತಿ ಪರಧನ ಪರನಿಂದೆಗೆ ಮನ
ಹರಿಸುವಿ ಪಿರಿ ಪಿರಿ ಸಾಗಲೊ ಮನಸೇ
ಭಾರಿ ಶಾಸ್ತ್ರಗಳ ಪಟಿಸಿ ಗಿಳಿಯ ಥರ
ಸೇರಿ ಪಂಜರವ ತೊಳಲುವಿ ಮನಸೇ || ಬಾಯಿಲೆ ||

ಹೊಲಸಿನ ಸಿಂಬಳ ಸೇರಿಪ ನೊಣದಂತೆ
ತಿಳಿಯದೆ ವಿಷಯಕೆ ಬೀಳುವಿ ಮನಸೇ
ಶಿಸುನಾಳಧೀಶನ ಕಾಲಿಗೆ ಬಿದ್ದರೆ
ವ್ಯಸನ ಹರಿಸಿ ಕಾಯ್ವ ಅರಿಯಲೊ ಮನಸೇ || ಬಾಯಿಲೆ ||

ಸಾಹಿತ್ಯ – ಶಿಶುನಾಳ ಶರೀಫ
ಸಂಗೀತ / ಗಾಯನ – ಸಿ ಅಶ್ವಥ್

download baayile brahmava bogalidarenu

 

ಟ್ಯಾಗ್ ಗಳು: , , , , , ,

ಹಾವು ತುಳಿದೇನೆ / Haavu tulidene

click to play

ಹಾವು ತುಳಿದೇನೆ ಮಾನಿನಿ
ಹಾವು ತುಳಿದೇನೆ

ಹಾವು ತುಳಿದು ಹಾರಿ ನಿಂತೆ
ಜೀವ ಕಳವಳಿಸಿತೇ ಗೆಳತಿ!
ದೇಹ ತ್ರಯದ ಸ್ಮೃತಿಯು ತಪ್ಪಿ
ದೇವಾ ನೀನೆ ಗತಿಯು ಎನ್ನುತ
ಹಾವು ತುಳಿದೇನೆ ಮಾನಿನಿ
ಹಾವು ತುಳಿದೇನೆ

ಹರಿಗೆ ಹಾಸಿಗೆಯಾದ ಹಾವು
ಹರನ ತೋಳಿನೊಳಿರುವ ಹಾವು
ಹರಿಗೆ ಹಾಸಿಗೆಯಾದ ಹಾವು
ಹರನ ತೋಳಿನೊಳಿರುವ ಹಾವು
ಧರೆಯ ಹೊತ್ತು ಮೆರೆವ ಹಾವಿನ
ಶಿರವ ಮೆಟ್ಟಿ ಶಿವನ ದಯದಿ
ಹಾವು ತುಳಿದೇನೆ ಮಾನಿನಿ
ಹಾವು ತುಳಿದೇನೆ

ಬೋದಾನಂದವಾಗಿ ಬರಲು
ದಾರಿಯೊಳಗೆ ಮಲಗಿ ಇರಲು
ಪಾದದಿಂದ ಪೊಡವಿಗೊತ್ತಿ
ನಾದಗೊಳಿಸಿತು ನಿಜದಿ ನೋಡೆ

ಸತ್ಯ ಶಿಶುವಿನಾಳಧೀಶನ
ನಿತ್ಯಸೇವಿಸುವಂಥ ಮಾನಿಗೆ
ಕತ್ತಲಲ್ಲಿ ಬಂದು ಕಾಲಿಗೆ
ಸುತ್ತಿಕೊಂಡಿತು ಸಣ್ಣ ನಾಗರ

click me to download haavu tulidene

 

ಮೋಹದ ಹೆಂಡತಿ / Mohada hendati

click to play

ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ || ಪ ||

ಸಾವು ನೋವಿಗೆ ಸಾರುವ ಬೀಗನ
ಮಾತಿನ ಹಂಗು ಎನಗ್ಯಾಕೋ ||ಅ.ಪ.||

ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾದುವುದ್ಯಾಕೋ || ೧ ||

ತಂದೆ ಗೋವಿಂದ ಗುರುವಿನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ

ಸಾಹಿತ್ಯ – ಶಿಶುನಾಳ ಶರೀಫ
ಸಂಗೀತ / ಗಾಯನ – ಸಿ ಅಶ್ವಥ್

click me to download mohada hendati

 

ಟ್ಯಾಗ್ ಗಳು: , , , , , ,

ಸೋರುತಿಹುದು ಮನೆಯ ಮಾಳಿಗೀ../ Sorutihudu maneya maligi

click to play

ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದ
ಅಜ್ಞಾನದಿಂದ
ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗೀ..

ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲಾ
ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲಾ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದ
ಸೋರುತಿಹುದು ಮನೆಯ ಮಾಳಿಗೀ..

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೀರು ಗುಂಡೆ
ಮೇಲಕ್ಕೇ..ರಿ ಹೋಗಲಾರೆ

ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಎಂತ ಶಿಶುವಿನಾಳಧೀಶಾ…ಆ ಆ ಆ ಆ
ಎಂತ ಶಿಶುವಿನಾಳಧೀಶ
ನಿಂತು ಪೊರೆವನು ಎಂದು ನಂಬಿದೆ

ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗೀ..

ಸಾಹಿತ್ಯ – ಶಿಶುನಾಳ ಶರೀಫ
ಸಂಗೀತ / ಗಾಯನ – ಸಿ ಅಶ್ವಥ್

click me to download sorutihudu maneya maligi

 

ಟ್ಯಾಗ್ ಗಳು: , , , , , ,

ಆಳಬೇಡ ತಂಗಿ ಅಳಬೇಡ / Alabeda tangi alabeda

click to play

ಆಳಬೇಡ ತಂಗಿ ಅಳಬೇಡ
ಆಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬವರಿಲ್ಲ
ಆಳಬೇಡ ತಂಗಿ ಅಳಬೇಡ
ಆಳಬೇಡ ತಂಗಿ ಅಳಬೇಡ

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ
ಒಳ್ಳೆ ದುಡಕೀಲೆ ಮುಂದಕ್ಕೆ ನೂಕಿದರವ್ವಾ
ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ
ದುಡಕೀಲೆ ಮುಂದಕ್ಕೆ ನೂಕಿದರವ್ವಾ
ಮಿಡಕ್ಯಾಡಿ ಮದುವ್ಯಾದಿ ಮೋಜು ಕಾಣವ್ವ
ಮಿಡಕ್ಯಾಡಿ ಮದುವ್ಯಾದಿ ಮೋಜು ಕಾಣವ್ವ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ

ಆಳಬೇಡ ತಂಗಿ ಅಳಬೇಡ
ಆಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬವರಿಲ್ಲ
ಆಳಬೇಡ ತಂಗಿ ಅಳಬೇಡ
ಆಳಬೇಡ ತಂಗಿ ಅಳಬೇಡ

ರಂಗೀಲಿ ಉಟ್ಟೀದಿ ರೇಶ್ಮಿ ಧಡಿ ಸೀರಿ ಮತ್ತ
ಹಂಗನೂಲಿನ ಪರವಿ ಮರತವ್ವ ನಾರಿ
ರಂಗೀಲಿ ಉಟ್ಟೀದಿ ರೇಶ್ಮಿ ಧಡಿ ಸೀರಿ
ಹಂಗನೂಲಿನ ಪರವಿ ಮರತವ್ವ ನಾರಿ
ಮಂಗಳ ಮೂರುತಿ ಶಿಶುವಾಳಧೀಶನ
ಮಂಗಳ ಮೂರುತಿ ಶಿಶುವಾಳಧೀಶನ
ಆಂಗಳಕ ನೀ ಹೊರತು ಆದೆವ್ವ ಗೌರಿ

ಆಳಬೇಡ ತಂಗಿ ಅಳಬೇಡ
ಆಳಬೇಡ ತಂಗಿ ಅಳಬೇಡ
ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬವರಿಲ್ಲ
ಆಳಬೇಡ ತಂಗಿ ಅಳಬೇಡ
ಆಳಬೇಡ ತಂಗಿ ಅಳಬೇಡ

click me to download alabeda tangi alabeda

 

ಬಿದ್ದಿಯಬ್ಬೇ ಮುದುಕಿ / Biddiyabbe muduki

click to play

ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ನೀ ದಿನ ಹೋದಾಕಿ
ಇರು ಭಾಳ ಜೋಕಿ
ನೀ ದಿನ ಹೋದಾಕಿ
ಇರು ಭಾಳ ಜೋಕಿ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ

ಸದ್ಯಕಿದು ಹುಲುಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ?
ಸದ್ಯಕಿದು ಹುಲುಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ?
ಬಿದ್ದು ಇಲ್ಲಿ ಒದ್ದಾಡಿದರ
ಎದ್ದು ಹ್ಯಾಂಗ ಹಿಂದಕ ಬರತಿ?
ಬಿದ್ದು ಇಲ್ಲಿ ಒದ್ದಾಡಿದರ
ಎದ್ದು ಹ್ಯಾಂಗ ಹಿಂದಕ ಬರತಿ?
ಬುದ್ದಿಗೇಡಿ ಮುದುಕಿ ನೀನು ಬಿದ್ದಿಯಬ್ಬೇ

ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.

ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ
ಕೆಟ್ಟಗಂಟಿ ಚೌಡೇರು ಬಂದು
ಉಟ್ಟದ್ದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬ್ಬೇ

ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.

ಶಿಶುನಾಳಾಧೀಶನ ಮುಂದೆ
ಕೊಸರಿ ಕೊಸರಿ ಹೋಗಬ್ಯಾಡ,
ಶಿಶುನಾಳಾಧೀಶನ ಮುಂದೆ
ಕೊಸರಿ ಕೊಸರಿ ಹೋಗಬ್ಯಾಡ
ಹಸನವಿಲ್ಲ ಹರಯ ಸಂದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಹಸನವಿಲ್ಲ ಹರಯ ಸಂದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬ್ಬೇ

ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.
ನೀ ದಿನ ಹೋದಾಕಿ
ಇರು ಭಾಳ ಜೋಕಿ
ನೀ ದಿನ ಹೋದಾಕಿ
ಇರು ಭಾಳ ಜೋಕಿ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ

click me to download biddiyabbe muduki

 

ಎಲ್ಲರಂಥವನಲ್ಲ ನನ್ನ ಗಂಡ / Ellaranthavanalla nanna ganda

click to play

ಎಲ್ಲರಂಥವನಲ್ಲ ನನ್ನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ
ಎಲ್ಲರಂಥವನಲ್ಲ ಕೇಳೆ
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲೂ ಹೋಗದ ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ
ಎಲ್ಲರಂಥವನಲ್ಲ ನನ್ನ ಗಂಡ

ತುಂಟ ಸವತಿಯ ಸೊಂಟಮುರಿ ಹೊಡೆದಾ
ಒಣ ಪಂಟಮಾತಿನ
ಗಂಟುಗಳ್ಳರ ಮನೆಗೆ ಬರಗೊಡದಾ
ಕುಂಟಕುರುಡಾರೆಂಟು ಮಂದಿ
ಗಂಟುಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೇ ಸಿಕ್ಕಾ
ಎಲ್ಲರಂಥವನಲ್ಲ ನನ್ನ ಗಂಡ

ಎಲ್ಲರಂಥವನಲ್ಲ ನನ್ನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತಲ್ಲಿ ಮೂವರ
ಮಕ್ಕಳೈವರ ಮಮತೆ ಕೆಡಿಸಿದನೇ
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲ್ಲಿ ಇಟ್ಟು ನನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೆ
ಎಲ್ಲರಂಥವನಲ್ಲ ನನ್ನ ಗಂಡ

ಎಲ್ಲರಂಥವನಲ್ಲ ನನ್ನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಕೆ ಒಯ್ದು
ಭ್ರಾಂತಿ ಭವ ದುರಿತವನು ಹರಿಸಿದನೇ
ಶಿಶುನಾಳ ಧೀಶ

ಎಲ್ಲರಂಥವನಲ್ಲ ನನ್ನ ಗಂಡ
ಎಲ್ಲರಂಥವನಲ್ಲ ನನ್ನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ್ನ ಗಂಡ
ಎಲ್ಲರಂಥವನಲ್ಲ ನನ್ನ ಗಂಡ

click me to download ellaranthavanalla nana ganda