RSS

Category Archives: P ಕಾಳಿಂಗ ರಾವ್

ಹೆಂಗಸ್ರವ್ರೆ ಹೂವಿದ್ದಂಗೆ / hengasravre hooviddange

click to play

[audio http://cl.ly/45041g2y430k/hengasravre_hooviddange.mp3]

ಹೆಂಗಸ್ರವ್ರೆ ಹೂವಿದ್ದಂಗೆ
ನಲ್ಗಿಸ್ಬಾರ್ದು ಅವ್ರ್ನ್ ।।
ಚೋಟುದ್ದ ಹೂವಂತದ್ನ
ಒದ್ದು ನಿಂದ್ರ ಉದ್ದಾರಾದ್ನ ।। ಹೆಂಗಸ್ರವ್ರೆ ।।

ಸಾಹಿತ್ಯ – ಜಿ.ಪಿ.ರಾಜರತ್ನಂ
ಸಂಗೀತ / ಗಾಯನ – P ಕಾಳಿಂಗ ರಾವ್

download hengasravre hooviddange

 

 

ಮಾಡು ಸಿಕ್ಕದಲ್ಲಾ / maadu sikkadalla

click to play

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ
ಜೋಡು ಹೆಂಡರಂಜಿ ಓಡಿ ಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲ ।। ಮಾಡು ।।

ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲ
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲ ।। ಮಾಡು ।।

ಮುಪ್ಪು ಬಂದಿತಲ್ಲ ಪಾಯಸ ತಪ್ಪದೆ ಉಣಲಿಲ್ಲ
ತುಪ್ಪದ ಬಿಂದಿಗೆ ತಿಪ್ಪೆ ಮೇಲೆ
ದೊಪ್ಪನೆ ಬಿತ್ತಲ್ಲ ।। ಮಾಡು ।।

ಯೋಗವು ಬಂದಲ್ಲ ಬದುಕು ವಿಭಾಗವಾಯಿತಲ್ಲ
ಭೋಗಿಶಯನ ಶ್ರೀ ಪುರಂದರ ವಿಠಲನ
ಆಗ ನೆನೆಯಲಿಲ್ಲ ।। ಮಾಡು ।।

ಸಾಹಿತ್ಯ – ಪುರಂದರದಾಸರು
ಸಂಗೀತ / ಗಾಯನ – P ಕಾಳಿಂಗ ರಾವ್

download maadu sikkadalla

 

ಟ್ಯಾಗ್ ಗಳು: , , , , , ,

ಯಾಕಳುವೆ ಎಲೆ ರಂಗ / yaakaluve ele ranga

click to play

ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೀವೆ

ನಾಕೆಮ್ಮೆ ಕರೆದ ನೊರೆಹಾಲು | ಸಕ್ಕರೆ

ನೀ ಕೇಳಿದಾಗ ಕೊಡುವೇನು  || ೧ ||

ಯಾತಕಳುತಾನೆಂದು ಎಲ್ಲಾರು ಕೇಳ್ಯಾರು

ಕಾಯದಾ ಹಾಲ ಕೆನೆ ಬೇಡಿ | ಕಂದಯ್ಯ

ಕಾಡಿ ಕೈಬಿಟ್ಟು ಇಳಿಯಾನು || ೨ ||

ಅಳುವ ಕಂದನ ತುಟಿಯು ಹವಳದಾ ಕುಡಿಹಂಗೆ

ಕುಡಿಹುಬ್ಬು ಬೇವಿನೆಸಳ್ಹಂಗೇ |ಕಣ್ಣೋಟ

ಶಿವನ ಕೈಯಲಗು ಹೊಳೆದಂಗೇ || ೩ ||

ಅತ್ತರೇ ಅಳಲವ್ವ ಈ ಕೂಸು ನನಗಿರಲಿ

ಕೆಟ್ಟರೇ ಕೆಡಲಿ ಮನೆಗೆಲಸ । ಕಂದನಂಥ

ಮಕ್ಕಳಿರಲವ್ವ ಮನೆತುಂಬಾ || ೪ ||

ಜೋಗುಳಾ ಹಾಡಿದರೆ ಆಗಲೇ ಕೇಳ್ಯಾನು

ಹಾಲ ಹಂಬಲವ ಮರೆತಾನು । ಕಂದಂಗೆ

ಜೋಗುಳದಾಗ ಅತಿ ಮುದ್ದಾ || ೫ ||

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ

ಎತ್ತಿ ಕೊಳ್ಳೆಂಬ ಹಠವಿಲ್ಲ । ನಿನ್ನಂಥ

ಹತ್ತು ಮಕ್ಕಳು ಇರಬಹುದು || ೬ ||

ಸಾಹಿತ್ಯ – ಜನಪದ
ಸಂಗೀತ – P ಕಾಳಿಂಗ ರಾವ್
ಗಾಯನ – ಮೋಹನ ಕುಮಾರಿ

download yaakaluve ele ranga

 

ಟ್ಯಾಗ್ ಗಳು: , , , , , , ,

ಅದು ಬೆಟ್ಟ ಇದು ಬೆಟ್ಟವೋ / adu betta idu bettavo

click to play

ಅದು ಬೆಟ್ಟ ಇದು ಬೆಟ್ಟವೋ ನಂಜುಂಡ
ನಂದ್ಯಾಲಗಿರಿ ಬೆಟ್ಟವೋ

ನಂದ್ಯಾಲಗಿರಿ ಬೆಟ್ಟಕೆ ನಂಜುಂಡ
ದಾಸ್ವಾಳದ ಗಿಡ ಹುಟ್ಟಿತು

ದಾಸ್ವಾಳದ ಹೂವ ತಂದು ನಂಜುಂಡ
ದಾರ್ಯಾಗ ಪೂಜೆ ಮಾಡಿ

ಹೂ ಬಾಡಿ ಹೋಯಿತಯ್ಯ ನಂಜುಂಡ
ಎದ್ದು ಬಾರಯ್ಯ ಮನೆಗೆ

ಕರನಾಟ ಸೀಮೆದವನೇ ನಂಜುಂಡ
ಕರಪೂರ ವೀಳ್ಯದವನೇ

ನಿನ ಕರುಣೆ ತಪ್ಪಿದ್ಮ್ಯಾಲೆ ನಂಜುಂಡ
ಪರದೇಸಿ ನಾನಾದೆನು

ಪರದೇಸಿ ನಾನಾದೆನು ನಂಜುಂಡ
ಪರಪಂಚ ನನಗ್ಯಾತಕೋ

ಪರಪಂಚ ನನಗ್ಯಾತಕೋ ನಂಜುಂಡ
ನನ ಚಿಂತೆ ನಿನಗ್ಯಾತಕೋ

ಸ್ವಾತಿಯ ಮಳೆ ಹುಯ್ಯಿತೋ ನಂಜುಂಡ
ಸಂಪಂಗಿ ಕೆರೆ ತುಂಬಿತೋ

ಸಂಪಂಗಿ ಕೆರೆಯ ಕೆಳಗೇ ನಂಜುಂಡ
ಕೆಂಬತ್ತಿನೆಲ್ಲ ಬಿತ್ತಿ

ಸಾಲ್ಹಿಡಿದು ಕಬ್ಬ ನೆಟ್ಟು ನಂಜುಂಡ
ಮುಂಭ್ಹಿಡಿದು ನೀರ ಕೊಟ್ಟು

ಜಲ ನೋಡಿ ಬಾವಿ ತೆಗೆಯೋ ನಂಜುಂಡ
ಕುಲ ನೋಡಿ ಹೆಣ್ಣ ತೆಗೆಯೋ

ಮೂಡಲ ಸೀಮೆದವನೇ ನಂಜುಂಡ
ಮುತ್ತಿನ ಹಾರದವನೆ

ಬಡಗಲ ಸೀಮೆದವನೇ ನಂಜುಂಡ
ಬಯಲಾದ ರೂಪದವನೇ

ಸಾಲು ತೆಂಗಿನಮರ ನಂಜುಂಡ
ಮೇಲೆ ನಂಜಾನ ಗುಡಿಯು

ಹದಿನಾಲ್ಕು ಪರದಕ್ಷಿಣಾ ನಂಜುಂಡ
ಹದಿನಾಲ್ಕು ಕಿರುದಕ್ಷಿಣಾ ।। ಅದು ಬೆಟ್ಟ ।।

ಸಾಹಿತ್ಯ – ಜನಪದ
ಸಂಗೀತ –  P ಕಾಳಿಂಗ ರಾವ್
ಗಾಯನ – P ಕಾಳಿಂಗ ರಾವ್ / ಮೋಹನ ಕುಮಾರಿ
 
download adu betta idu bettavo
 

ಟ್ಯಾಗ್ ಗಳು: , , , , , , ,

ನಗೆಯು ಬರುತಿದೆ ಎನಗೆ / nageyu barutide enage

click to play

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ
ಜಗದೊಳಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು ।। ನಗೆಯು ।।

ಪತಿಯ ಸೇವೆ ಬಿಟ್ಟು ಪರರ
ಪತಿಯ ಕೂಡ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಳ್ಪ ಸತಿಯ ಕಂಡು ।। ನಗೆಯು ।।

ಪರರ ವನಿತೆಯೊಲುಮೆಗೊಲಿದು
ಹರುಷದಿಂದ ಅವಳ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರಳ ಎಣಿಸುವವರ ಕಂಡು ।। ನಗೆಯು ।।

ಕಾಮ ಕ್ರೋಧ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಸ್ವಾಮಿ ಪುರಂದರವಿಠಲನಾಮ
ನೆನೆವ ಮನುಜರನ್ನು ಕಂಡು ।। ನಗೆಯು ।।

ಸಾಹಿತ್ಯ – ಪುರಂದರದಾಸರು
ಸಂಗೀತ / ಗಾಯನ – P ಕಾಳಿಂಗ ರಾವ್

download nageyu barutide enage

 

ಟ್ಯಾಗ್ ಗಳು: , , , , , , ,

ಬಾರಯ್ಯ ಬೆಳದಿಂಗಳೇ / baarayya beladingale

click to play

ಬಾರಯ್ಯ ಬೆಳದಿಂಗಳೇ ಬಾರಯ್ಯ ಬೆಳದಿಂಗಳೇ
ನಮ್ಮೂರ ಹಾಲಿನಂಥ ಬೆಳದಿಂಗಳೇ

ಒಂದೇ ಹಕ್ಕಿ ಬಂದಾವಕ್ಕಾ ಹರಗರನಾಡಿ ನಿಂದಾವಕ್ಕಾ || ಬಾರಯ್ಯ ||

ತಾಮಾಲೂರ ಹೋಳೇಯಿಂದ ಕುಂತೂನಿಂತೂ ಬರೂತಿದ್ದಾ || ಬಾರಯ್ಯ ||

ರಾಮಾನ್ಯಾರೆ ತಡಾದೋರೂ ಭೀಮಾನ್ಯಾರೇ ತಡಾದೋರೂ || ಬಾರಯ್ಯ ||

ತಿಂಗ್ಳು ತಿಂಗ್ಳೀಗೆ ತಿಂಗಳು ಮಾವನ ಪೂಜೆ ಗರುಡಾನ ಪೂಜೆ ಘನ ಪೂಜೆ
ಕೋಲುಮಲ್ಲಿಗೆ ಕೋಲೇ
ಗರುಡಾನ ಪೂಜೆ ಘನ ಪೂಜೆ ತಿಂಗಳು ಮಾವಾ ನಿನಪೂಜೆ ಗಂಗೇ ದಿನದಾಗೇ
ಕೋಲುಮಲ್ಲಿಗೆ ಕೋಲೇ
ತಿಂಗಳುಮಾವನ ತಂಗಿ ಸೂತಕವಾಗಿ ಬೆಂಗೆ ಹೂವಿನ ಗುಡ್ಲಾಗೀ
ಕೋಲುಮಲ್ಲಿಗೆ ಕೋಲೇ
ತುಂಬೇಹೂವೀನಾ ಗುಡ್ಲಾಗಿ ತಿಂಗಳು ಮಾವಾ ಮೀಯನೆಂದರೇ ತಾವಿಲ್ಲಾ
ಕೋಲುಮಲ್ಲಿಗೆ ಕೋಲೇ
ಮೀಯನೆಂದರೇ ತಾವಿಲ್ಲಾ ತಿಂಗಳು ಮಾವಾ ಹೋಗಯ್ಯ ಮುಗಿಲಾ ತೆರೆವೀಗೇ
ಕೋಲುಮಲ್ಲಿಗೆ ಕೋಲೇ ||

ಸಾಹಿತ್ಯ – ?

ಸಂಗೀತ – P ಕಾಳಿಂಗ ರಾವ್

ಗಾಯನ – P ಕಾಳಿಂಗ ರಾವ್ / ಮೋಹನ ಕುಮಾರಿ

download baarayya beladingale

 

 

ಟ್ಯಾಗ್ ಗಳು: , , , , , , ,

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ / baagilolu kai mugidu

click to play

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು… ಕಲೆಯ ಬಲೆಯು ||

ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ  ।। ಬಾಗಿಲೊಳು ।।

ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ ||
ಕರ್ಪೂರದಾರತಿಯ ಜ್ಯೋತಿ ಇಲ್ಲ

ಭಗವಂತನಾನಂದ ರೂಪುಗೊಂಡಿಹುದಿಲ್ಲಿ ।।
ರಸಿಕತೆಯ ಕಡಲುಕ್ಕಿ ಹರಿಹುದಿಲ್ಲಿ ।।

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಬೋಧಿಸಿದೆ ಭಾರತವನಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುತಿದೆ ಭೂಭಾರವಿಲ್ಲಿ

ಸಾಹಿತ್ಯ – ಕುವೆಂಪು

ಸಂಗೀತ – ಮೈಸೂರು ಅನಂತಸ್ವಾಮಿ

ಗಾಯನ – P ಕಾಳಿಂಗ ರಾವ್

download baagilolu kai mugidu

 

 

 

 

ಟ್ಯಾಗ್ ಗಳು: , , , , , , ,

ಇಳಿದು ಬಾ ತಾಯಿ ಇಳಿದು ಬಾ / ilidu baa taayi ilidu baa

click to play

ಇಳಿದು ಬಾ ತಾಯಿ
ಇಳಿದು ಬಾ ।।
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಬಾರೆ
ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.।।

ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.।।

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ।।

ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ ।।

ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ ।।
ಅವತಾರವೆಂದೆ ಎಂದಾರೆ ತಾಯಿ
ಈ ಅಧ:ಪಾತವನ್ನೇ ।।

ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್‌ದುಮ್ ಎಂದಂತೆ
ದುಡುಕಿ ಬಾ ।।

ನಿನ್ನ ಕಂದನ್ನ ಹುಡುಕಿ ಬಾ ।।
ಹುಡುಕಿ ಬಾ ತಾಯಿ
ದುಡುಕಿ ಬಾ.
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.
।।

ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.
।।

ಸಾಹಿತ್ಯ – ದ ರಾ ಬೇಂದ್ರೆ
ಸಂಗೀತ / ಗಾಯನ – ಪಿ.ಕಾಳಿಂಗ ರಾವ್

download ilidu baa taayi ilidu baa

 

ಟ್ಯಾಗ್ ಗಳು: , , , , , ,

ಬ್ರಹ್ಮ ನಿಂಗೆ ಜೋಡಿಸ್ತೀನಿ / brahma ninge jodistini

click to play

ಪಿ.ಕಾಳಿಂಗ ರಾವ್ ದನಿಯಲ್ಲಿ

ರಾಜು ಅನಂತಸ್ವಾಮಿ ದನಿಯಲ್ಲಿ

ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ
ಭೂಮಿಯುದ್ದಕ್ ಬೊಗ್ಗಿಸ್ತೀನಿ ಎಂಡ ತುಂಬ್ಕೊಂಡ್ ಮೈನ ||
ಬುರ್ ಬುರ್ ನೊರೆ ಬಸಿಯೊ ಅಂತ ವಳ್ಳೆ ವುಳಿ ಎಂಡ
ತರ್ತೀನ್ ನಂದು ಪ್ರಾರ್ಥನೆ ಕೇಳೋ ಸರ್ಸೊತ್ತಮ್ಮನ್ ಗಂಡಾ || ಬ್ರಹ್ಮ ||

ಸರ್ಸೊತ್ತಮ್ಮ ಮುನಿಸ್ಕೊಂಡವ್ಳೆ ನೀನಾದ್ರ್ ವಸಿ ಏಳು
ಕುಡುದ್ ಬುಟ್ಟಾಡ್ದ್ರೆ ತೊಲ್ತದಣ್ಣ ನಾಲ್ಗೆ ಬಾಳ ಗೋಳು  || ಬ್ರಹ್ಮ ||

ಅಕ್ಸರನೆಲ್ಲಾ ಸರ್ಸೊತ್ತಮ್ಮ ಪಟ್ಟಾಗಿಟ್ ಕೊಂಡುಬುಟ್ಟು
ಮುನಿಯಾ ಎಂಡಾ ಬಿಡುವಂಗೇನೆ ಬಿಡ್ತಾಳ್ ಅವಳ್ ಕೈ ಗಟ್ಟಿ
ಮುನಿಯಂಗಾನಾ ಕಾಸೋಗ್ತೈತೆ ಹೆಚ್ಗೆ ಎಂಡಾ ಬಿಟ್ಟ್ರೆ
ಸರ್ಸೊತಮ್ಮಂಗೇನೊಗ್ತೈತೆ ಮಾತ್ ಸಲೀಸಾಗ್ ಕೊಟ್ಟ್ರೆ || ಬ್ರಹ್ಮ ||

ನಂಗೆ ನೀನು ಲಾಯ್ರಿಯಾಗಿ ನನ್ ಕೇಸ್ ಗೆದ್ ಗಿದ್ ಕೊಟ್ರೆ
ಮಾಡ್ತೀನಪ್ಪನಿನ್ನೊಟ್ಟೇನ ಹುಳಿ ಎಂಡದ್ ಪೊಟ್ರೆ || ಬ್ರಹ್ಮ ||

ಕಮಲದ್ ಹೂವಿನ್ ಕುರ್ಚಿ ಮೇಲೆ ಜೊಕಾಗ್ ಕುಂತ್ಕೊ ನೀನು
ನಾಕು ಮೂತಿಗ್ ನಾಕು ಬುಂಡೆ ಎಂಡ ತರ್ತೀನ್ ನಾನು
ಸರ್ಸೊತಮ್ಮಂಗೇಳಾಕಿಲ್ಲಾ ನೀನೇನ್ ಹೆದರ್ಕೊಬೇಡಾ ||
ಕೇಳಿದ್ ವರಾನ್ ವಂದಿಸ್ ಕೊಟ್ರೆ ತಕ್ಕೊ ಎಂಡದ್ ಫೇಡಾ

ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ
ಭೂಮಿಯುದ್ದಕ್ ಬೊಗ್ಗಿಸ್ತೀನಿ ಎಂಡ ತುಂಬ್ಕೊಂಡ್ ಮೈನಾ

ಸಾಹಿತ್ಯ – ಜಿ.ಪಿ.ರಾಜರತ್ನಂ
ಸಂಗೀತ – ಪಿ.ಕಾಳಿಂಗ ರಾವ್

download brahma ninge jodistini — P Kalingarao

download brahma ninge jodistini – raju ananthaswamy

 

ಟ್ಯಾಗ್ ಗಳು: , , , , ,

ಯೇಳ್ಕೊಳ್ಳಾಕ್ ಒಂದ್ ಊರು / elkollak ond ooru

click to play

ರಾಜು ಅನಂತಸ್ವಾಮಿ ದನಿಯಲ್ಲಿ

ಪಿ ಕಾಳಿಂಗರಾವ್ ದನಿಯಲ್ಲಿ

ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಬೂಮ್ತಾಯಿ ಮಂಚ;
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!

ಅಗಲೆಲ್ಲ ಬೆವರ್ ಅರ್ಸಿ
ತಂದದ್ರಲ್ಲ್ ಒಸಿ ಮುರ್ಸಿ
ಸಂಜೇಲಿ ವುಳಿ ಯೆಂಡ ಕೊಂಚ
ಯೀರ್ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರೆ
ತುoಭೋಯ್ತು ರತ್ನನ್ ಪರ್ಪಂಚ!

ಏನೋ ಕುಸಿಯಾದಾಗ
ಮತ್ತ್ ಎಚ್ಚಿ ಓದಾಗ
ಅಂಗೇನೆ ಪರಪಂಚದ್ ಅಂಚ
ದಾಟ್ಕಂಡಿ ಆರಾಡ್ತ
ಕನ್ನಡದಲ್ ಪದವಾಡ್ತ
ಇಗ್ಗೋದು ರತ್ನನ್ ಪರ್ಪಂಚ!

ದುಕ್ಕಿಲ್ಲ ದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ
ನಾವ್ ಕಂಡಿಲ್ಲ್ ಆ ತಂಚ ವಂಚ;
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ಲ್ ಆಯಾಗಿ
ಬಾಳೋದು ರತ್ನನ್ ಪರ್ಪಂಚ!

‘ಬಡತನ ಗಿಡತನ
ಏನಿದ್ರೇನ್ ? ನಡೆತೇನ
ಚೆಂದಾಗ್ ಇಟ್ಕೊಳ್ಳಾದೆ ಅಚ್ಛ!’ –
ಅಂದ್ಕೊಂಡಿ ಸುಕವಾಗಿ
ಕಸ್ಟಕ್ ನೆಗಮೊಕವಾಗಿ
ನೆಗೆಯೋದೆ ರತ್ನನ್ ಪರ್ಪಂಚ!

ದೇವ್ರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಚ!
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಚೊಂಡ್ ಯೇಳ್ದಂಗೆ
ಕುಣಿಯಾದೆ ರತ್ನನ್ ಪರ್ಪಂಚ!

ಸಾಹಿತ್ಯ – ಜಿ.ಪಿ.ರಾಜರತ್ನಂ
ಸಂಗೀತ – P ಕಾಳಿಂಗ ರಾವ್

download elkollak ond ooru – raju ananthaswamy

download elkollak ond ooru – p kalingarao

 

ಟ್ಯಾಗ್ ಗಳು: , , , , ,