RSS

Category Archives: ನಾಡಗೀತೆ / ದೇಶಭಕ್ತಿಗೀತೆ

ಹಚ್ಚೇವು ಕನ್ನಡದ ದೀಪ / hachevu kannadada deepa

ನೂರನೆಯ ಭಾವಗೀತೆ

click to play

ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ || ಹಚ್ಚೇವು ||

ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ || ಹಚ್ಚೇವು ||

ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ || ಹಚ್ಚೇವು ||

ಸಾಹಿತ್ಯ – ಡಿ.ಎಸ್. ಕರ್ಕಿ
ಸಂಗೀತ – ?
ಗಾಯನ – ಸಮೂಹ ಗಾಯನ

download hachevu kannadada deepa

 

ಟ್ಯಾಗ್ ಗಳು: , , , , ,

ಕರವ ಜೋಡಿಸ ಬನ್ನಿ / karava jodisa banni

click to play

ಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿ
ಸ್ವರವ ಕೂಡಿಸ ಬನ್ನಿ ಒಕ್ಕೊರಲ ಘೋಷದಲಿ
ನವಯುಗದ ನಿರ್ಮಾಣ ಗೈವ ಶುಭ ಆಶಯಕೆ
ಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು ||

ಉತ್ತುಂಗ ಸಂಸ್ಕೃತಿಯ ವಾರಸಿಕೆ ಎಮಗಿಹುದು
ತಾಯ್ನೆಲೆದ ಉನ್ನತಿಯ ಆದರ್ಶ ಗುರಿಯಿಹುದು
ಕಷ್ಟಗಳನೆದುರಿಸುವ ಕೆಚ್ಚೆದೆಯ ಬಲವಿಹುದು
ವೈರಿಗಳ ವ್ಯೂಹಗಳ ಭೇದಿಸುವ ಛಲವಿಹುದು ||

ನಮನ ನಿರ್ಬಂಧಗಳ ಅಂಜಿಕೆಯು ನಮಗಿಲ್ಲ
ಆಳುವರ ಸರಕೃಪೆಯ ಆಸರೆಯ ಹಂಗಿಲ್ಲ
ಕಠಿಣ ಅಗ್ನಿಪರೀಕ್ಷೆಗಳಾ ಗೆದ್ದು ಬಂದಿಹೆವು
ಮರಣಕೂಪದಿ ಧುಮುಕಿ ಮೇಲೆದ್ದು ಬಂದಿಹೆವು ||

ಕಾಶ್ಮೀರದಾ ಕೂಗು ನಿಮಗೆ ಕೇಳಿಸದೇನು
ತಾಯೊಡಲ ತಳಮಳವು ಮನವ ಬಾಧಿಸದೇನು
ಮೆರೆಯುತಿರೆ ಎಲ್ಲೆಲ್ಲೂ ದ್ರೋಹಾವಿಚಿತ್ರತೆಯು
ಮೈಮರೆತು ಮಲಗಿದರೆ ಎಲ್ಲಿಹುದು ಭದ್ರತೆಯು ||

ನೀವು ಕಿವಿಗೊಡಬೇಡಿ ಸ್ವಾರ್ಥಿಗಳ ನುಡಿಗಳಿಗೆ
ಆಜ್ಯವನು ಎರೆಯದಿರಿ ಕುಟಿಲತೆಯ ಕಿಡಿಗಳಿಗೆ
ಸಹಕರಿಸಿ ಬೋಧನೆಗೆ ಬಲವೀವ ಸಾಧನೆಗೆ
ಹಿಂದು ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದನೆಗೆ ||

download karava jodisa banni

 

ಟ್ಯಾಗ್ ಗಳು:

ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ / naadadeviye kande ninna

click to play

ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯಾ
ನೋವು ನಲಿವು ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ
ಒ೦ದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇಧ ತಾಯೀ
ಒ೦ದೆ ನೆಲದ ರಸ ಹೀರಲೇನು ಸಿಹಿ ಕಹಿಯ ರುಚಿಯ ಕಾಯೀ || ನಾಡದೇವಿಯೇ ||

ಕತ್ತಲಲ್ಲಿ ಕಂಗೆಟ್ಟು ಎಡವಿ ತಡವರಿಸುತಿರಲು ಮಂದೀ
ಕಡೆಗಣಿಸುತವರ ನಡೆದಿರುವನೊಬ್ಬ ಸ್ವಹಿತಕ್ಕೆ ಹಿರಿದು ದೊಂದಿ
ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬಾ || ನಾಡದೇವಿಯೇ ||

ಅನ್ನವಿರದ ಹಸುಳೆಗಳ ತಬ್ಬಿ ಅಳುತಿರುವ ತಾಯ ಕಂಡೆ
ದುಃಖ ಪೂರ ಉಕ್ಕುಕ್ಕಿ ಮೊರೆಯೇ ಕೊಚ್ಚಿತ್ತು ಬಾಳ ದಂಡೆ
ನರನನ್ನೆ ಗಾಳವಾಗಿಸಿಯೇ ಬಾಳ ನೀರಲ್ಲಿ ನರಿಗಳೆಷ್ಟೋ
ನಾವೆಲ್ಲಾ ಒಂದೆನುವ ಸತ್ಯ ಮೆಟ್ಟಿದ ನಾಡಿ ಹರಿಗಳೆಷ್ಟೋ || ನಾಡದೇವಿಯೇ ||

ಸಾಹಿತ್ಯ – ಕೆ.ಎಸ್.ನಿಸಾರ್ ಅಹಮದ್
ಸಂಗೀತ/ಗಾಯನ – ಸಿ ಅಶ್ವಥ್

download naadadeviye kande ninna madilalli

 

ಟ್ಯಾಗ್ ಗಳು: ,

ಕಳೆದಿಹುದು ಕಾರಿರುಳು / kaledihudu kaarirulu

click to play

ಕಳೆದಿಹುದು ಕಾರಿರುಳು ಕರಗಿಹುದು ಕಾರ್ಮುಗಿಲು
ಇoದು ಹಿಂದು ಭಾಸ್ಕರನ ಉದಯಕಾಲ
ನಾಡ ಪರಿವರ್ತನೆಯ ಪರ್ವಕಾಲ ||ಪ||

ಉಷೆಯುದಿಸಿ ಬಂದಿಹುಳು ನಿಶೆಯುಸಿರ ನೀಗಿಹಳು
ಅರುಣ ಕಿರಣದ ಪ್ರಭೆಗೆ ಸ್ವಾಗತವ ಕೋರಿಹಳು
ಮೈಮರೆತು ಮಲಗಿದ್ದ ನಾಡು ಮೇಲೆದ್ದಿಹುದು
ದಾಸ್ಯದವಶೇಷವದು ಧರೆಗುರುಳಿ ಬಿದ್ದಿಹುದು ||೧||

ಪುಟಪುಟದ ಇತಿಹಾಸ ಸಟೆಯ ಧಿಕ್ಕರಿಸಿಹುದು
ದಿಟದ ಧೀಮಂತಿಕೆಯ ದಿಟ್ಟತನ ಧರಿಸಿಹುದು
ದ್ರೋಹಿಗಳು ಒಡ್ಡಿರುವ ಭೀಕರ ಸವಾಲುಗಳು
ಕಟಿಬದ್ಧ ಯುವಜನತೆ ಛಲದಿ ಸ್ವೀಕರಿಸಿಹುದು ||೨||

ಎಚ್ಚೆತ್ತ ಕೇಸರಿಗೆ ವನದೊಳೆದುರಾರಿಹರು?
ತುಂಬಿ ಮೊರೆವಂಬುಧಿಯ ತಡೆವ ಜನರಾರಿಹರು?
ಬೆಂಬಲಕೆ ಇಹರೆಮಗೆ ಭಾರತದ ಜನಕೋಟಿ
ಮುನ್ನುಗ್ಗಿ ಸಾಗುವೆವು ವಿಘ್ನವೆಲ್ಲವ ದಾಟಿ ||೩||

ಮುರಿದಿರಲು ಸಂಧಾನ ಕರೆದಿರಲು ಸಂಗ್ರಾಮ
ಎದ್ದು ನಿಂತಿಹವಿಂದು ಗಿರಿನಗರ ವನ ಗ್ರಾಮ
ರಾಮರಾಜ್ಯದ ರಚನೆ ಗೈದ ಶುಭ ಹಾರೈಕೆ
ಖೂಳ ರಾವಣಪಡೆಗೆ ಕೊಟ್ಟ ಕೊನೆಯೆಚ್ಚರಿಕೆ ||೪||

ಸಾಹಿತ್ಯ – ?
ಸಂಗೀತ – ?
ಗಾಯನ – ?

download kaledihudu kaarirulu

 

ಟ್ಯಾಗ್ ಗಳು: , , , , ,

ಹೂ ಹರೆಯದ ಹೊಂಗನಸುಗಳೆ / Hoo hareyada honganasugale

click to play

ಹೂ ಹರೆಯದ ಹೊಂಗನಸುಗಳೆ .. . . .ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ
ಕತ್ತಲೆಗಿದು ಸಾವು ಸುತ್ತಲು ಮುಂಜಾವು, ಕತ್ತಲೆಗಿದು ಸಾವು ಸುತ್ತಲು ಮುಂಜಾವು
ಕರೆವಳುಷಾದೇವಿ ಮಂಗಳೆ ಸುಮಂಗಳೆ,
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ

ನೋವಿನಿರುಳು ನರಳಿ ನರಳಿ ಸರಿದಿದೆ, ನಗುವು ನಲಿವಿಗಾಗಿ ಕದವ ತೆರೆದಿದೆ
ನೋವಿನಿರುಳು ನರಳಿ ನರಳಿ ಸರಿದಿದೆ, ನಗುವು ನಲಿವಿಗಾಗಿ ಕದವ ತೆರೆದಿದೆ
ಸೂತ್ರಬದ್ಧ್ರ ಕಾರ್ಯ ನಮ್ಮ ಎದುರಿದೆ, ಲೋಕ ನಮ್ಮ ನಿಲುವಿಗಾಗಿ ಕಾದಿದೆ
ಅಬಲಶಕ್ತರಲ್ಲ ಸಬಲರು ನಾವೆಲ್ಲಾ, ಅಬಲಶಕ್ತರಲ್ಲ ಸಬಲರು ನಾವೆಲ್ಲಾ
ಹಗಲಿಗರಳಬೇಕು ನೈದಿಲೆ, ನೈದಿಲೆ | ಹಗಲಿಗರಳಬೇಕು ನೈದಿಲೆ

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ
ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ

ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ, ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲ
ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ, ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲ
ಹುಲಿಯ ಹೊಡೆದ ವೀರ ಹುಡುಗ ಹೊಯ್ಸಳಾ, ವೀರ ವಾರಸಿಕೆಯೆ ಹಿಂದು ಸಂಕುಲ
ಪುತ್ರಭಾವದೊಳಗೆ, ಕ್ಷಾತ್ರಭಾವ ಬೆಳಗೆ | ಪುತ್ರಭಾವದೊಳಗೆ, ಕ್ಷಾತ್ರಭಾವ ಬೆಳಗೆ
ರಾಷ್ಟ್ರಶಕ್ತಿಗದುವೆ ಹಿನ್ನೆಲೆ, ಹಿನ್ನೆಲೆ | ರಾಷ್ಟ್ರಶಕ್ತಿಗದುವೆ ಹಿನ್ನೆಲೆ

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ
ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ

ಸೋಲಿನಸುರ ಹೊಂದಬೇಕು ಅವನತಿ, ಗೆಲುವಿನ ಸ್ವರ ಪಡೆಯಬೇಕು ಉನ್ನತಿ
ಸೋಲಿನಸುರ ಹೊಂದಬೇಕು ಅವನತಿ, ಗೆಲುವಿನ ಸ್ವರ ಪಡೆಯಬೇಕು ಉನ್ನತಿ
ಕಾರ್ಯಕಾಲ ಕಾಯುತಿಹಳು ಭಾರತಿ, ರಾಷ್ಟ್ರರಥಕೆ ನಮ್ಮ ಶಕ್ತಿ ಸಾರಥಿ
ಛಲದಲಿ ಓಂದಾಗಿ ಜಗದಲಿ ಮುಂದಾಗಿ, ಛಲದಲಿ ಓಂದಾಗಿ ಜಗದಲಿ ಮುಂದಾಗಿ
ನಿಲುವುದೊಂದೆ ನಮ್ಮ ಮುನ್ನೆಲೆ, ಮುನ್ನೆಲೆ | ನಿಲುವುದೊಂದೆ ನಮ್ಮ ಮುನ್ನೆಲೆ

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ
ಹೂ ಹರೆಯದ ಹೊಂಗನಸುಗಳೆ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ
ಕತ್ತಲೆಗಿದು ಸಾವು ಸುತ್ತಲು ಮುಂಜಾವು, ಕತ್ತಲೆಗಿದು ಸಾವು ಸುತ್ತಲು ಮುಂಜಾವು
ಕರೆವಳುಷಾ ದೇವಿ ಮಂಗಳೆ ಸುಮಂಗಳೆ,
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ

ಸಾಹಿತ್ಯ – ಸೋಂದಾ ನಾರಾಯಣ ಭಟ್ಟ
ಸಂಗೀತ – ?
ಗಾಯನ – ?

download hoo hareyada honganasugale

 

ಟ್ಯಾಗ್ ಗಳು: , , , , ,

ಹೊತ್ತಿತೋ ಹೊತ್ತಿತು ಕನ್ನಡದ ದೀಪ / hottito hottitu kannadada deepa

click to play

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ ಕನ್ನಡದ ಮಾನ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ

ಸಾಹಿತ್ಯ – ಡಾ.ಸಿದ್ದಯ್ಯ ಪುರಾಣಿಕ
ಸಂಗೀತ – ?
ಗಾಯನ – ?

download hottito hottitu

 

ಟ್ಯಾಗ್ ಗಳು: , , , , ,

ಜಯ ಭಾರತ ಜನನಿಯ ತನುಜಾತೆ / jaya bharata jananiya tanujate

click to play
ಒಂಚೂರ್ remix — version

ಸಮೂಹ ಗಾಯನ

ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ; ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ !
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ, ಜನನಿಗೆ ಜೀವವು ನಿನ್ನಾವೇಶ, ಜನನಿಯ ಜೋಗುಳ ವೇದದ ಘೋಷ, ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ, ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ, ಭಾರತ ಜನನಿಯ ತನುಜಾತೆ ! ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರರಿಹ ದಿವ್ಯಾರಣ್ಯ ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರರಿಹ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳ ಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ ನಾನಕ ರಾಮಾ ನಂದ ಕಬೀರರ ಭಾರತ ಜನನಿಯ ತನುಜಾತೆ ! ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನೆಚ್ಚಿನ ಬೀಡೆ ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ, ಕಾವೇರಿಯ ವರ ರಂಗಾ ಕೃಷ್ಣ ಶರಾವತಿ ತುಂಗಾ, ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ, ಭಾರತ ಜನನಿಯ ತನುಜಾತೆ ! ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ ಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!

ಸಾಹಿತ್ಯ – ಕುವೆಂಪು
ಸಂಗೀತ – ?
ಗಾಯನ – ಸಮೂಹ ಗಾಯನ

download jaya bharata jananiya tanujate

download jai bharatha jananiya tanujaate – group song version

 

ಟ್ಯಾಗ್ ಗಳು: , , , , ,