RSS

Category Archives: ಎಂ ಡಿ ಪಲ್ಲವಿ

ಅಮ್ಮ ಹಚ್ಚಿದೊಂದು ಹಣತೆ / amma hachidondu hanate

click to play

[audio http://cl.ly/1g1I0n2M3B2N/amma_hachidondu_hanate.mp3]

ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ ।।

ಕಪ್ಪು ಕಡಲಿನಲ್ಲಿ ದೋಣಿ
ದಿಕ್ಕು ತಪ್ಪಲು
ದೂರದಲ್ಲಿ ತೀರವಿದೆ
ಎಂದು ತೋರಲು ।। ಅಮ್ಮ ।।

ಕೃತಕ ದೀಪ ಕತ್ತಲಲ್ಲಿ
ಕಳೆದು ಹೋಗದಂತೆ
ಸೂರ್ಯ ಚಂದ್ರ ತಾರೆಯಾಗಿ
ಹೊಳೆದು ಬಾಳುವಂತೆ ।। ಅಮ್ಮ ।।

ಅಂತರಂಗದಲ್ಲಿ ನೂರು
ಕಗ್ಗತ್ತಲ ಕೋಣೆ
ನಾದ ಬೆಳಕ ತುಂಬಲು
ಮಿಡಿದ ಹಾಗೆ ವೀಣೆ ।। ಅಮ್ಮ ।।

ಸಾಹಿತ್ಯ – M R ಕಮಲ
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ
 
download amma hachidondu hanate
 

 

 

ಟ್ಯಾಗ್ ಗಳು: , , , , , ,

ಮಾಯಾಮೃಗ / maayamruga

click to play

ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ ||

ಬಲು ದೂರದಿ ಹೊಳೆಯುತ್ತಿದೆ ಬಾನೀಲಿಯ ಕೆಳಗೆ ||

ಹೊಳೆಯುತ್ತಿವೆ ಕಣ್ಣಂತು ಬಿಡಿವಜ್ರದ ಹಾಗೆ ||

ಶರವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ ||

ಸಾಹಿತ್ಯ –  ಕೆ.ಎಸ್. ನರಸಿಂಹಸ್ವಾಮಿ
ಸಂಗೀತ –  ಸಿ ಅಶ್ವಥ್
ಗಾಯನ – ಮಂಜುಳಾ ಗುರುರಾಜ್, ಎಂ ಡಿ ಪಲ್ಲವಿ,, ಅರ್ಚನಾ ಉಡುಪ
 
download maayamruga
 

ಟ್ಯಾಗ್ ಗಳು: , ,

ತಾಯಿ ಭೂಮಿ ತಾಯಿ / taayi bhoomi taayi

click to play

ತಾಯಿ ಭೂಮಿ ತಾಯಿ
ಸದಯಿ ಅಭಯದಾಯಿ
ಮತ್ತೆ ನಿನ್ನ ಸ್ಪರ್ಶದಿಂದ
ಅಮಿತ ಹರ್ಷ ಮನಸಿಗೆ || ತಾಯಿ ||

ಬೆಂದವರಿಗೆ ಕಂಬನಿ
ನೊಂದವರಿಗೆ ತಂಬನಿ
ನಂಬಿ ಬಂದ ಭಾಗ್ಯ ಹೀನ
ಜನರ ಊರುಗೋಲು ನೀ || ತಾಯಿ ||

ಬಾಳಿನಲ್ಲಿ ಸುಯ್ಯುವ
ಗೋಳಿನಲ್ಲಿ ತುಯ್ಯುವ
ಹಗಲು ಇರುಳು ದುಡಿಯುವ
ಹಳ್ಳಿ ಜನರ ಶಾಂತಿ ನೀ || ತಾಯಿ ||

ಪ್ರಗತಿ ಗೀತ ಗಾಯಕಿ
ಚಿರಾನಂದದಾಯಕಿ
ಭಾಗ್ಯ ಮಾರ್ಗದಲ್ಲಿ ನಡೆವ
ಭಾರತಕ್ಕೆ ನಾಯಕಿ || ತಾಯಿ ||

ಸಾಹಿತ್ಯ – ಕೆ. ಎಸ್. ನಿಸಾರ್ ಅಹಮದ್
ಸಂಗೀತ – ?
ಗಾಯನ – ಎಂ ಡಿ ಪಲ್ಲವಿ
 
download taayi bhoomi taayi
 
 

ಟ್ಯಾಗ್ ಗಳು: , , , , , ,

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ / amma naanu devaraane benne kaddillamma

click to play

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ ||

ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ
ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ || ಅಮ್ಮಾ ||

ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿ೦ದೆ ಮರೆಸುತ್ತ || ಅಮ್ಮಾ ||

ಎತ್ತಿದ ಕೈಯ ಕಡುಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯ ಶ್ಯಾಮನ ಮುತ್ತಿಟ್ಟು ನಕ್ಕಳು ಗೋಪಿ || ಅಮ್ಮಾ ||

ಸಾಹಿತ್ಯ –  ಹೆಚ್.ಎಸ್.ವೆಂಕಟೇಶ ಮೂರ್ತಿ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ

download amma naanu devaraane benne kaddillamma

 

ಟ್ಯಾಗ್ ಗಳು: , , , ,

ಲೋಕದ ಕಣ್ಣಿಗೆ / lokada kannige

click to play

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ || ಲೋ ||

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ || ಲೋ ||

ಮಹಾಪ್ರವಾಹ ಮಹಾಪ್ರವಾಹ ಮಹಾಪ್ರವಾಹ ಮಹಾಪ್ರವಾಹ
ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆದರೂ ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ರೀತಿ ಇದು || ೨|| || ಲೋ ||

ಸಾಹಿತ್ಯ – ಎಚ್.ಎಸ್.ವೆಂಕಟೇಶ್ ಮೊರ್ತಿ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ

download lokada kannige raadheyu kooda

 

ಟ್ಯಾಗ್ ಗಳು: , , , , ,

ನದಿಯ ತಿಳಿನೀರ ಕನ್ನಡಿಯೊಳಗೆ / nadiya tilineera kannadiyolage

click to play

ನದಿಯ ತಿಳಿನೀರ ಕನ್ನಡಿಯೊಳಗೆ
ಚಲುವ ಪ್ರೇಮಿಯ ಪ್ರತಿಬಿಂಬ ಪ್ರತಿಬಿಂಬ
ಚಲಿಸುವ ಚಂದಿರನ ಅಲೆಗೆ ಅಲೆಗೆ ಅಲೆಗೆ
ಅಲೆ ಅಲೆ ಮುಸುಕಾಗುವ ಪ್ರತಿಬಿಂಬ ಪ್ರತಿಬಿಂಬ

ಹೇಳಿದ್ದು ಬೇಕಾದಷ್ಟು ಹೇಳದೆ ಉಳಿದದ್ದು ಬಹಳಷ್ಟು
ವಿರಸಿನಾಣಿ ಬಂದ ಬಂದ ಎಲ್ಲಿಂದ ಬಂದ ಎತ್ತ ಬಂದ
ಹೇಳದೆ ಉಳಿದ ಮನಸಿನೊಳಗಿನ ಭಾವಗಳ
ನಾಲಿಗೆ ನುಲಿಯದ ನುಡಿಗಳ

ಸಾಹಿತ್ಯ – ?
ಸಂಗೀತ – ಸಿ ಅಶ್ವಥ್
ಗಾಯನ – ಸಿ ಅಶ್ವಥ್ / ಎಂ ಡಿ ಪಲ್ಲವಿ

download nadiya tilineera

 

ಟ್ಯಾಗ್ ಗಳು: , , , ,

ನನ್ನ ಇನಿಯನ ನೆಲೆಯ ಬಲ್ಲೆಯೇನೆ / nanna iniyana neleya

click to play

ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೇ ನೀನೆ

ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲಿಸಬಲ್ಲ
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆ ಬಿದ್ದು ತೆನೆಎದ್ದು ತೂಗುವವನು
ನಲ್ಲೆ ಅಳಲನು ಏಕೆ ತಿಳಿಯನವನು

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ

download nanna iniyana neleya

 

ಟ್ಯಾಗ್ ಗಳು: , , , , , ,

ಮನದ ಹಂಬಲದ / manada hambalada

click to play

ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೆ

ಸೆಲೆ ಬತ್ತಿತೆ ಆ ಪ್ರೀತಿಯ ಹೊಳೆ
ಜೊಳ್ಳಾಯಿತೆ ಆ ಸ್ನೇಹದ ಬೆಳೆ
ಏಕಾಂತವೇ ಈ ಬಾಳಿನ ನೆಲೆ
ಮನಸು ವಿಷಾದಕೆ ಸೆರೆಯಾಯಿತೆ

ಎರಗಿ ಬಿರುಗಾಳಿ, ಬಡಿದು ಸಿಡಿಲು
ನಡುಗಡಲಿನಲ್ಲಿ ಒಡೆದ ಹಡಗು
ನೆರವಿರದೆ ಸೋತು, ತೇಲು ಮುಳುಗು
ಬದುಕು ಹತಾಶೆಗೆ ವಶವಾಯಿತೆ

ಈ ಬಾಳಿಗುಂಟೆ ಮರುವಸಂತ
ಈ ಪಯಣಕುಂಟೆ ಹೊಸ ದಿಗಂತ
ಬೆಳಕು ಮೂಡೀತೆ ಇರುಳು ಕಳೆದು
ಹೊಸ ಅಂಕಕಾಗಿ ತೆರೆ ಸರಿವುದೆ

ಸಾಹಿತ್ಯ – ಬಿ ಆರ್ ಲಕ್ಷ್ಮಣರಾವ್
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ

download manada hambalada

 

ಟ್ಯಾಗ್ ಗಳು: , , , , ,

ಉರಿವ ಬಿಸಿಲಿರಲಿ / uriva bisilirali

click to play

ಉರಿವ ಬಿಸಿಲಿರಲಿ ಕೊರೆವ ಚಳಿ ಇರಲಿ
ನಮ್ಮ ಮನದೊಳಿರಲಿ ನಿನ್ನ ಧ್ಯಾನ
ಶರಣರ ನೆಲವೇ ತರುಣರ ಛಲವೇ
ನಿನ್ನ ಚರಣತಲಕೆ ನಮ್ಮ ಪ್ರಾಣ

ಊನವಾಗಿ ನಿನ್ನ ಮಾನ
ಓ ನಾವು ಜೀವಿಸಿದ್ದ ಫಲವೇನಾ ?
ದೇವರ ನೆಲವೇ ಕಾಯ್ವರ ಫಲವೇ
ನಿನ್ನ ನೇರ ಬಿರಿಸಿ ನಮ್ಮ ಪ್ರಾಣ

ಹೊಟ್ಟೆ ಹೊರೆಯಲು ರಟ್ಟೆ ಬೀಸುವ
ನಾವು ಹಿಟ್ಟಿನಾಳ್ಗಳಲ್ಲ
ಹುಟ್ಟಿನಿಂದ ನಿನ್ನ ಹೊರೆವ ಹೊಣೆ ಹೊತ್ತ
ದಿಟ್ಟರಾರು ಶಿವ ಬಲ್ಲ
ನಿನ್ನ ಮುಟ್ಟಿ ಬಹಕೆ ಬದುಕಿಲ್ಲ

ಧೀರರ ನಾಡೆ ವೀರರ ಬೀಡೆ
ನಿನ್ನ ಸೇವೆಗೈಯದವ ಹೊಲ್ಲ

ಸಾಹಿತ್ಯ – ಪು.ತಿ.ನ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ

download uriva bisilirali

 

ಟ್ಯಾಗ್ ಗಳು: , , , , ,

ಇಷ್ಟು ಕಾಲ ಒಟ್ಟಿಗಿದ್ದು / ishtu kaala ottigiddu

click to play

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೊಣಿಗೆ

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೆ ಕನ್ನಡಿಯ ಪಾಲಿಗೆ

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಬಿ ಕೆ ಚಂದ್ರಶೇಖರ್
ಗಾಯನ – ಎಂ ಡಿ ಪಲ್ಲವಿ

download ishtu kaala ottigiddu

 

ಟ್ಯಾಗ್ ಗಳು: , , , , ,