RSS

Category Archives: ಜನಪದ

ಯಾಕಳುವೆ ಎಲೆ ರಂಗ / yaakaluve ele ranga

click to play

ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೀವೆ

ನಾಕೆಮ್ಮೆ ಕರೆದ ನೊರೆಹಾಲು | ಸಕ್ಕರೆ

ನೀ ಕೇಳಿದಾಗ ಕೊಡುವೇನು  || ೧ ||

ಯಾತಕಳುತಾನೆಂದು ಎಲ್ಲಾರು ಕೇಳ್ಯಾರು

ಕಾಯದಾ ಹಾಲ ಕೆನೆ ಬೇಡಿ | ಕಂದಯ್ಯ

ಕಾಡಿ ಕೈಬಿಟ್ಟು ಇಳಿಯಾನು || ೨ ||

ಅಳುವ ಕಂದನ ತುಟಿಯು ಹವಳದಾ ಕುಡಿಹಂಗೆ

ಕುಡಿಹುಬ್ಬು ಬೇವಿನೆಸಳ್ಹಂಗೇ |ಕಣ್ಣೋಟ

ಶಿವನ ಕೈಯಲಗು ಹೊಳೆದಂಗೇ || ೩ ||

ಅತ್ತರೇ ಅಳಲವ್ವ ಈ ಕೂಸು ನನಗಿರಲಿ

ಕೆಟ್ಟರೇ ಕೆಡಲಿ ಮನೆಗೆಲಸ । ಕಂದನಂಥ

ಮಕ್ಕಳಿರಲವ್ವ ಮನೆತುಂಬಾ || ೪ ||

ಜೋಗುಳಾ ಹಾಡಿದರೆ ಆಗಲೇ ಕೇಳ್ಯಾನು

ಹಾಲ ಹಂಬಲವ ಮರೆತಾನು । ಕಂದಂಗೆ

ಜೋಗುಳದಾಗ ಅತಿ ಮುದ್ದಾ || ೫ ||

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ

ಎತ್ತಿ ಕೊಳ್ಳೆಂಬ ಹಠವಿಲ್ಲ । ನಿನ್ನಂಥ

ಹತ್ತು ಮಕ್ಕಳು ಇರಬಹುದು || ೬ ||

ಸಾಹಿತ್ಯ – ಜನಪದ
ಸಂಗೀತ – P ಕಾಳಿಂಗ ರಾವ್
ಗಾಯನ – ಮೋಹನ ಕುಮಾರಿ

download yaakaluve ele ranga

 

ಟ್ಯಾಗ್ ಗಳು: , , , , , , ,

ಅದು ಬೆಟ್ಟ ಇದು ಬೆಟ್ಟವೋ / adu betta idu bettavo

click to play

ಅದು ಬೆಟ್ಟ ಇದು ಬೆಟ್ಟವೋ ನಂಜುಂಡ
ನಂದ್ಯಾಲಗಿರಿ ಬೆಟ್ಟವೋ

ನಂದ್ಯಾಲಗಿರಿ ಬೆಟ್ಟಕೆ ನಂಜುಂಡ
ದಾಸ್ವಾಳದ ಗಿಡ ಹುಟ್ಟಿತು

ದಾಸ್ವಾಳದ ಹೂವ ತಂದು ನಂಜುಂಡ
ದಾರ್ಯಾಗ ಪೂಜೆ ಮಾಡಿ

ಹೂ ಬಾಡಿ ಹೋಯಿತಯ್ಯ ನಂಜುಂಡ
ಎದ್ದು ಬಾರಯ್ಯ ಮನೆಗೆ

ಕರನಾಟ ಸೀಮೆದವನೇ ನಂಜುಂಡ
ಕರಪೂರ ವೀಳ್ಯದವನೇ

ನಿನ ಕರುಣೆ ತಪ್ಪಿದ್ಮ್ಯಾಲೆ ನಂಜುಂಡ
ಪರದೇಸಿ ನಾನಾದೆನು

ಪರದೇಸಿ ನಾನಾದೆನು ನಂಜುಂಡ
ಪರಪಂಚ ನನಗ್ಯಾತಕೋ

ಪರಪಂಚ ನನಗ್ಯಾತಕೋ ನಂಜುಂಡ
ನನ ಚಿಂತೆ ನಿನಗ್ಯಾತಕೋ

ಸ್ವಾತಿಯ ಮಳೆ ಹುಯ್ಯಿತೋ ನಂಜುಂಡ
ಸಂಪಂಗಿ ಕೆರೆ ತುಂಬಿತೋ

ಸಂಪಂಗಿ ಕೆರೆಯ ಕೆಳಗೇ ನಂಜುಂಡ
ಕೆಂಬತ್ತಿನೆಲ್ಲ ಬಿತ್ತಿ

ಸಾಲ್ಹಿಡಿದು ಕಬ್ಬ ನೆಟ್ಟು ನಂಜುಂಡ
ಮುಂಭ್ಹಿಡಿದು ನೀರ ಕೊಟ್ಟು

ಜಲ ನೋಡಿ ಬಾವಿ ತೆಗೆಯೋ ನಂಜುಂಡ
ಕುಲ ನೋಡಿ ಹೆಣ್ಣ ತೆಗೆಯೋ

ಮೂಡಲ ಸೀಮೆದವನೇ ನಂಜುಂಡ
ಮುತ್ತಿನ ಹಾರದವನೆ

ಬಡಗಲ ಸೀಮೆದವನೇ ನಂಜುಂಡ
ಬಯಲಾದ ರೂಪದವನೇ

ಸಾಲು ತೆಂಗಿನಮರ ನಂಜುಂಡ
ಮೇಲೆ ನಂಜಾನ ಗುಡಿಯು

ಹದಿನಾಲ್ಕು ಪರದಕ್ಷಿಣಾ ನಂಜುಂಡ
ಹದಿನಾಲ್ಕು ಕಿರುದಕ್ಷಿಣಾ ।। ಅದು ಬೆಟ್ಟ ।।

ಸಾಹಿತ್ಯ – ಜನಪದ
ಸಂಗೀತ –  P ಕಾಳಿಂಗ ರಾವ್
ಗಾಯನ – P ಕಾಳಿಂಗ ರಾವ್ / ಮೋಹನ ಕುಮಾರಿ
 
download adu betta idu bettavo
 

ಟ್ಯಾಗ್ ಗಳು: , , , , , , ,