RSS

Category Archives: ಬಿ ಆರ್ ಲಕ್ಷ್ಮಣರಾವ್

ನಲ್ಲೆ ನಿನ್ನ ಮರೆಯಲು / nalle ninna mareyalu

click to play

[audio http://cl.ly/0J2b1K3e2o26/nalle_ninna_mareyalu.mp3]

ನಲ್ಲೆ ನಿನ್ನ ಮರೆಯಲು ಏನೆಲ್ಲ ಮಾಡಿದೆ
ಆದರೆ ಎಲ್ಲೆಲ್ಲೂ ನಿನ್ನ ನೆನಪೇ ಕಾಡಿದೆ

ಅರಳಿ ನಿಂತ ಮಲ್ಲಿಗೆಯಲಿ ನಿನ್ನದೆ ನಗೆ
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ
ಸುಳಿದು ಬಂದ ಗಾಳಿಯಲ್ಲಿ ನಿನ್ನ ಪರಿಮಳ
ಮಾಮರದಲಿ ನಿನ್ನದೇ ಗಾನ ಮಂಜುಳ ।। ನಲ್ಲೆ ।।

ಮರಗಳು ಮೈತುಂಬ ನಮ್ಮ ಹೆಸರು ತೊಟ್ಟಿವೆ
ಪೊದೆಪೊದೆಗಳ ಮರೆಗಳಲ್ಲೂ ನಮ್ಮ ಗುಟ್ಟಿವೆ
ಬಳ್ಳಿ ಬಳ್ಳಿ ಗೆಳತಿ ಎಲ್ಲಿ ಎಂದು ಕೇಳಿದೆ
ದುಃಖದ ಮಡು ಮಾತಿಲ್ಲದೆ ಮೌನ ತಾಳಿದೆ ।। ನಲ್ಲೆ ।।

ಸಾಹಿತ್ಯ – ಬಿ ಆರ್ ಲಕ್ಷ್ಮಣರಾವ್
ಸಂಗೀತ / ಗಾಯನ – ಸಿ ಅಶ್ವಥ್

download nalle ninna mareyalu

 

 

ಟ್ಯಾಗ್ ಗಳು: , , , , ,

ನೋಡಿದ ಅವನು ಹೀಗೆ ನೋಡಿದ / nodida avanu heege nodida

click to play

ನೋಡಿದ ಅವನು ಹೀಗೆ ನೋಡಿದ
ಒಣಬೇರಿಗೆ ನೀರೂರುವ ಹಾಗೆ ನೋಡಿದ
ಕೂಡಿದ ನನ್ನ ಹೇಗೆ ಕೂಡಿದ
ಹೊಸಚೇತನ ನನ್ನಲಿ ಹರಿವಂತೆ ಕೂಡಿದ ।। ನೋಡಿದ ।।

ನರಳಿದೆ ಆಹಾ ಹೇಗೆ ನರಳಿದೆ
ಮೈಯ ತುಂಬ ಚಿಗುರು ನಿಮಿರಿದಂತೆ ನರಳಿದೆ
ಅರಳಿದೆ ಹಿಗ್ಗಿ ಹೇಗೆ ಅರಳಿದೆ
ಹೂವಿನೋಕುಳಿಯಲಿ ಮಿಂದ ಹಾಗೆ ಅರಳಿದೆ ।। ನೋಡಿದ ।।

ಸುರಿಸಿದ ಒಲವ ಹೇಗೆ ಸುರಿಸಿದ
ಆಗುಂಬೆಯ ಹುಚ್ಚು ಮಳೆಯ ಹಾಗೆ ಸುರಿಸಿದ
ಫಲಿಸಿತು ನನ್ನೊಳೇನು ಫಲಿಸಿತು
ಜೊಂಪೆ ಜೊಂಪೆ ಹಣ್ಣು ತೂಗಿ ಜೀವ ಫಲಿಸಿತು ।। ನೋಡಿದ ।।

ತುಂಬಿತು ಎದೆಯೊಳೇನು ತುಂಬಿತು
ನೂರು ಹಕ್ಕಿ ಹೈಕಳುಗಳ ಹಾಡು ತುಂಬಿತು
ಆದೆನು ನಾನು ಏನಾದೆನು
ಸುತ್ತ ತಂಪು ನೆರಳು ಹರಡಿ ಧನ್ಯಳಾದೆನು ।। ನೋಡಿದ ।।

ಸಾಹಿತ್ಯ – ಬಿ ಆರ್ ಲಕ್ಷ್ಮಣರಾವ್
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್

download nodida avanu heege nodida

 

ಟ್ಯಾಗ್ ಗಳು: , , , , , , ,

ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ / kolluvudaadare kondubidu heege kaadabeda

click to play

ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ
ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ ।।

ದುಂದಿಯು ಧಗ ಧಗ ಧಗ ಉರಿದಂತೆ
ಅಂದು ನಿನ್ನ ಪ್ರೀತಿ
ಹೆಪ್ಪುಗಟ್ಟಿರುವ ಹಿಮದಂತೆ
ಇಂದು ನಿನ್ನ ರೀತಿ ।। ಕೊಲ್ಲುವುದಾದರೆ ।।

ಕಾಳಾಗದೆ ನಿನ್ನಾಳದ ಪ್ರೀತಿ
ಆಯಿತೇ ಬರೀ ಜೊಳ್ಳು ಹೇಳು
ಪ್ರೀತಿಯ ಸೇತುವೆಯಂತೆ ತೋರಿ
ಮರೆಯಾಯಿತೆ ಮಳೆಬಿಲ್ಲು ।। ಕೊಲ್ಲುವುದಾದರೆ ।।

ಇನ್ನೂ ಏಕೀ ಮುಚ್ಹುಮರೆ
ತೆರೆಗಳ ನೀ ಸರಿಸು
ತೊರೆಯುವುದಾದರೆ ತೊರೆದುಬಿಡು
ಇಲ್ಲವೇ ಸ್ವೀಕರಿಸು ।। ಕೊಲ್ಲುವುದಾದರೆ ।।

ಸಾಹಿತ್ಯ – ಬಿ ಆರ್ ಲಕ್ಷ್ಮಣರಾವ್
ಸಂಗೀತ / ಗಾಯನ – ಶಂಕರ್ ಶಾನಬಾಗ್

download kolluvudaadare kondubidu

 

ಟ್ಯಾಗ್ ಗಳು: , , , , , , ,

ಈ ಬೀದಿಯಲ್ಲಿ ನಾ ಓಡಾಡಿದ್ದೆ / ee beediyalli naa odaadidde

click to play

ಈ ಬೀದಿಯಲ್ಲಿ ನಾ ಓಡಾಡಿದ್ದೆ
ಬೇಕಾದಷ್ಟು ಸಲ
ಈ ನಗರದ ಎಲ್ಲಾ ಬೀದಿಗಳಂತೆ
ಧೂಳು ಹೊಗೆ ಗದ್ದಲ ।।

ನಲ್ಲೆ ನಿನ್ನ ಮನೆ
ಇಲ್ಲೇ ಇರುವುದು ತಿಳಿದೊಡನೆ
ಎಂಥಾ ಚೆಲುವು ಬಂತು ಬೀದಿಗೆ
ಎಂಥಾ ಪರಿಮಳ ।। ಈ ಬೀದಿಯಲ್ಲಿ ।।

ಧೂಳು ಈಗ ಧೂಳಲ್ಲ ನನಗದೇ
ಪುಷ್ಪ ಪರಾಗ ರೇಣು
ಕಿವಿ ಗಡಚಿಕ್ಕುವ ಹಾರನ್ನುಗಳೇ
ಈಗ ಇಂಪಾದ ವೇಣು

ಬಸ್ಸು ಲಾರಿಯ ಹೊಗೆ ನಲ್ಲೆ
ಆಗರು ಧೂಪ ನನಗೆ
ನೀನಿರುವೆಡೆಯೇ ನನಗೆ ನಂದನ
ನೀನೇ ಕಾಮಧೇನು ।। ಈ ಬೀದಿಯಲ್ಲಿ ।।

ನಿನ್ನ ಮನೆಯೆ ದೇವಾಲಯ ದೇವಿ
ನಾನು ನಿನ್ನ ಭಕ್ತ
ಯಾರೇ ನಕ್ಕರೂ ಕೇರು ಮಾಡದೆ
ನಿಂತಿರುವೆನು ಅನುರಕ್ತ ।।

ನಿನ್ನ ಮನೆಯ ಮುಂದೆ
ನೆಟ್ಟ ಗರುಡಗಂಬದಂತೆ
ನಲ್ಲೆ ನಿನ್ನ ದರ್ಶನಕ್ಕಾಗಿ
ನಾ ಹಂಬಲಿಸುತ್ತಾ ನಿಂತಿರುವೆನು ಅನುರಕ್ತ ನಾನು ನಿನ್ನ ಭಕ್ತ ।। ಈ ಬೀದಿಯಲ್ಲಿ ।।

ಕರುಣಿಸಿ ನಿನ್ನ ಭಕ್ತನ ಮೇಲೆ
ಬಾರೇ ನೀನು ಹೊರಗೆ
ಕಿಟಕಿಯನ್ನು ತೆರೆದಾದರೂ ಒಮ್ಮೆ
ನೋಡೇ ಈ ಕಡೆಗೆ

ಪ್ರೀತಿಯ ಒಂದು ನಗೆ
ಸಿಕ್ಕರೆ ಅದೇ ಸಾಕು ನನಗೆ
ಬದುಕಿ ಉಳಿಯುವೆನು ಭರವಸೆಯಲ್ಲಿ
ನಾನು ನಾಳೆಯವರೆಗೆ ।। ಈ ಬೀದಿಯಲ್ಲಿ ।।

ಸಾಹಿತ್ಯ –  ಬಿ ಆರ್ ಲಕ್ಷ್ಮಣರಾವ್
ಸಂಗೀತ / ಗಾಯನ – ಮೈಸೂರು ಅನಂತಸ್ವಾಮಿ
 
download ee beediyalli naa odaadidde
 

ಟ್ಯಾಗ್ ಗಳು: , , , , , , ,

ಚಿಟ್ಟೆ ಜೋಡಿ ಚಿಟ್ಟೆ / chitte jodi chitte

click to play

ಚಿಟ್ಟೆ ಜೋಡಿ ಚಿಟ್ಟೆ ಈ ಚಂಚಲ ಕಣ್ಣುಗಳು
ಪ್ರೀತಿಗೆ ಆರತಿ ದೀಪಗಳು ನಿರ್ಮಲ ಕಣ್ಣುಗಳು ಈ ನಿರ್ಮಲ ಕಣ್ಣುಗಳು ।।

ಸನಿಹ ಸುಳಿದು ಸೆಳೆಯುವ ಮೋಡಿಯ ಕಣ್ಣುಗಳು
ಸಿಗದೇ ಜಿಗಿದು ಹಾರುತ ಕಾಡುವ ಕಣ್ಣುಗಳು ।।

ಕನಸಲ್ಲೂ ಮಿಂಚಿ ಮರೆಯಾಗುತ ಹೊಂಚುವ ಕಣ್ಣುಗಳು
ಕಣ್ಣಾಮುಚ್ಚಾಲೆ ಆಟದ ಸಂಚಿನ ಕಣ್ಣುಗಳು ।। ಚಿಟ್ಟೆ ।।

ಕಡಲಿನಂತೆ ಆಳದ ನಿಗೂಢ ಕಣ್ಣುಗಳು
ಮುತ್ತು ಹವಳ ತಳದಲಿ ದಳದಂತ ಕಣ್ಣುಗಳು ।।

ಪ್ರೀತಿಯ ಸುಧೆಯನ್ನು ಸೂಸುವ ಸಂಜೀವಿನಿ ಕಣ್ಣುಗಳು
ನನ್ನೀ ಬಾಳ ನೌಕೆಗೆ ಚುಕ್ಕಾಣಿ ಕಣ್ಣುಗಳು ।। ಚಿಟ್ಟೆ ।।

ಸಾಹಿತ್ಯ- ಬಿ ಆರ್ ಲಕ್ಷ್ಮಣರಾವ್

ಸಂಗೀತ / ಗಾಯನ – ಸಿ ಅಶ್ವಥ್

download chitte jodi chitte

 

ಟ್ಯಾಗ್ ಗಳು: , , , , , ,

ಹೇಳಿ ಹೋಗು ಕಾರಣ / heli hogu kaarana

click to play

ಹೇಳಿ ಹೋಗು ಕಾರಣ ಹೋಗುವ ಮೊದಲು|!
ನನ್ನ ಬಾಳಿನಿಂದ ದೂರಾಗುವ ಮೊದಲು ||

ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ!!
ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ
ಇಂದ್ಯಾವ ಬಂಧ ತೊಡರಿದೆ
ನಿನ್ನ ಕಾಲಿಗೆ!!
ಸುಡುಬೆಂಕಿ ಬೆಳಕು ಉಳಿಯಿತೆ
ನನ್ನ ಪಾಲಿಗೆ

ಸವಿಭಾವಗಳಿಗೆ ನೀ ನಾದ ನೀಡಿ
ಜೊತೆಗೂಡಿ ಹಾಡಿದೆ!!
ಇಂದ್ಯಾವ ಅಳಲು ಸೆರೆ ಉಬ್ಬಿ ಕೊರಳು
ನೀ ಮೌನ ತಾಳಿದೆ
ನೀ ನೆಟ್ಟು ಬೆಳೆಸಿದ ಈ ಮರ
ಫಲ ತೊಟ್ಟ ವೇಳೆಗೆ!!
ಹೀಗೇಕೆ ಮುರಿದು ಉರುಳಿದೆ
ಯಾವ ದಾಳಿಗೆ

ಸಾಹಿತ್ಯ – ಬಿ ಆರ್ ಲಕ್ಷ್ಮಣರಾವ್
ಸಂಗೀತ / ಗಾಯನ – ಸಿ ಅಶ್ವಥ್

 

ಟ್ಯಾಗ್ ಗಳು: , , , , ,

ನಾ ಚಿಕ್ಕವನಾಗಿದ್ದಾಗ / naa chikkavanaagiddaaga

click to play

ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ || ನಿಂಬೆ ||

ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು || ನಿಂಬೆ ||

ಸಾಹಿತ್ಯ /ಗಾಯನ – ಬಿ ಆರ್ ಲಕ್ಷ್ಮಣರಾವ್
ಸಂಗೀತ – ಸಿ ಅಶ್ವಥ್

download naa chikkavanaagiddaaga

 

ಟ್ಯಾಗ್ ಗಳು: , , , , , ,

ಶ್ರುತಿ ಮೀರಿದ ಹಾಡು / shruthi meerida haadu

click to play

ಶ್ರುತಿ ಮೀರಿದ ಹಾಡು
ಪ್ರೇಮ ಸುಳಿವ ಜಾಡು
ಅಂದು ಕನಸಿನರಸ
ಇಂದು ಏನೋ ವಿರಸ
ಹಳಸಿತೆ ಆ ಒಲವು
ತಳೆಯಿತೆ ಈ ನಿಲುವು || ಶ್ರುತಿ ||

ಯಾರಿವಳೀ ಹುಡುಗಿ?
ಹೊಸ ಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಹೊನಲು || ಶ್ರುತಿ ||

ಮಗುವಿನ ನಗೆಯವನು
ಮಿಡಿಯುವ ಬಗೆಯವನು
ಬಾಗಿಲ ಬಡಿಯುವನು
ಇಂದು ಯಾರೊ ಇವನು || ಶ್ರುತಿ ||

ತೆರೆಗಳ ಮೊರೆತದಲಿ
ಆಳದ ಮೌನದಲಿ
ಹೊರಳು ದಾರಿಗಳಲಿ
ನನ್ನ ಮೂಕ ಅಳಲು || ಶ್ರುತಿ ||

ಸಾಹಿತ್ಯ – ಬಿ ಆರ್ ಲಕ್ಷ್ಮಣರಾವ್
ಸಂಗೀತ – ಸಿ ಅಶ್ವಥ್
ಗಾಯನ – ಸಿ ಅಶ್ವಥ್ / ರತ್ನಮಾಲ ಪ್ರಕಾಶ್

download shruthi meerida haadu

 

ಟ್ಯಾಗ್ ಗಳು: , , , ,

ಮನದ ಹಂಬಲದ / manada hambalada

click to play

ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೆ

ಸೆಲೆ ಬತ್ತಿತೆ ಆ ಪ್ರೀತಿಯ ಹೊಳೆ
ಜೊಳ್ಳಾಯಿತೆ ಆ ಸ್ನೇಹದ ಬೆಳೆ
ಏಕಾಂತವೇ ಈ ಬಾಳಿನ ನೆಲೆ
ಮನಸು ವಿಷಾದಕೆ ಸೆರೆಯಾಯಿತೆ

ಎರಗಿ ಬಿರುಗಾಳಿ, ಬಡಿದು ಸಿಡಿಲು
ನಡುಗಡಲಿನಲ್ಲಿ ಒಡೆದ ಹಡಗು
ನೆರವಿರದೆ ಸೋತು, ತೇಲು ಮುಳುಗು
ಬದುಕು ಹತಾಶೆಗೆ ವಶವಾಯಿತೆ

ಈ ಬಾಳಿಗುಂಟೆ ಮರುವಸಂತ
ಈ ಪಯಣಕುಂಟೆ ಹೊಸ ದಿಗಂತ
ಬೆಳಕು ಮೂಡೀತೆ ಇರುಳು ಕಳೆದು
ಹೊಸ ಅಂಕಕಾಗಿ ತೆರೆ ಸರಿವುದೆ

ಸಾಹಿತ್ಯ – ಬಿ ಆರ್ ಲಕ್ಷ್ಮಣರಾವ್
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ

download manada hambalada

 

ಟ್ಯಾಗ್ ಗಳು: , , , , ,

ಬಾ ಮಳೆಯೇ ಬಾ / baa maleye baa

click to play

ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು
ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ನಲ್ಲೆ, ಹಿಂತಿರುಗಿ ಹೋಗ ದಂತೆ

ಓಡು, ಕಾಲವೇ,ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ ನಿಲ್ಲು, ಕಾಲವೇ ನಿಲ್ಲು
ತೆಕ್ಕೆ ಸಡಿಲಾಗದಂತೆ
ನಮ್ಮ ತೆಕ್ಕೆ ಸಡಿಲಾಗದಂತೆ

ಬೀರು, ದೀಪವೇ, ಬೀರು, ನಿನ್ನ ಹೊಂಬಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ
ನಲ್ಲೆ ನಾಚಿ ನೀರಾಗದಂತೆ

ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲಿ
ಪ್ರೇಮಿಗಳ ಸೀಮೆಯಲ್ಲಿ;
ನಾವೀಗ ಅನಿಮಿಷರು, ನಮ್ಮ ಈ ಮಿಲನ
ಗಂಧರ್ವ ವೈಭೋಗದಂತೆ
ಮಿಲನ, ಗಂಧರ್ವ ವೈಭೋಗದಂತೆ.

ಸಾಹಿತ್ಯ – ಬಿ ಆರ್ ಲಕ್ಷ್ಮಣರಾವ್
ಸಂಗೀತ / ಗಾಯನ – ಸಿ ಅಶ್ವಥ್

download baa maleye baa

 

ಟ್ಯಾಗ್ ಗಳು: , , , , ,