RSS

Category Archives: ರತ್ನಮಾಲ ಪ್ರಕಾಶ್

ಹೊಸ ಬಗೆಯಲಿ ಬರಲಿ / hosa bageyali barali

ಹೊಸ ಬಗೆಯಲಿ ಬರಲಿ
ಸುಖ ಸಾವಿರ ತರಲಿ ।।

ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ
ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ ।। ಹೊಸ ।।

ತುಳಿದು ಆಳಲಾಗದಂಥ ಬಾಳಿಗೆ
ಹೊನ್ನಿನ ತೋರಣವ ಬಿಗಿದ ನಾಳೆಗೆ
ಹೊಂಬಿಸಿಲಿನ ಹಾದಿಗೆ
ಕೇದಗೆ ಹೂ ಬೀದಿಗೆ
ಮಾತೆಲ್ಲವು ಕೃತಿಯಾಗುವ ಜಾಡಿಗೆ ।। ಹೊಸ ।।

ಕಣ್ಣೆರಡೂ ಉರಿವ ದೀಪಸ್ಥಂಭ
ಮೇಲೆತ್ತಿದ ತೋಳುಗಳೇ ಕಂಬ
ದೇಹವೆ ಗುಡಿಯಾಗಿ
ನಾಡೇ ಇಡಿಯಾಗಿ
ಸ್ವಾಗತಿಸಲಿ ಸಂಕ್ರಾಂತಿಯ ಕೂಗಿ ।। ಹೊಸ ।।

ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಎಚ್ ಕೆ ನಾರಾಯಣ್
ಗಾಯನ – ರತ್ನಮಾಲ ಪ್ರಕಾಶ್ / ಮಾಲತಿ ಶರ್ಮ

download hosa bageyali barali

 

ಟ್ಯಾಗ್ ಗಳು: , , , , , , ,

ಇದಾವ ರಾಗ ಮತ್ತೆ / idaava raaga mathe

click to play

[audio http://cl.ly/040R0g1L1I2t/idaava_raaga.mp3]

ಇದಾವ ರಾಗ ಮತ್ತೆ ಇದಾವ ರಾಗ
ಎದೆಯಾಳದಿಂದೆದ್ದು ನಭನೀಲಿಗೇರುತಿದೆ

ಯುಗ ಯುಗಾಂತರದೆದೆಯ ನೋವುಗಳ ಕೆರಳಿಸಿದೆ
ಜನುಮಗಳ ಕಣ್ಣೀರ ಕೊಳಗಳನು ಕದಡುತಿದೆ
ಮುರಿದ ಶತ ಬಯಕೆಗಳ ಮೇಲೆತ್ತಿ ತೂರುತಿದೆ
ಬಗೆಯ ಬಾನ್ಬಯಲಿನಲಿ ಮೋಡಗಳ ಕವಿಸುತಿದೆ ।। ಇದಾವ ।।

ಹಚ್ಚಹಸುರೆದೆಯಿಂದ ಬಿಸಿಯುಸಿರ ಹೊಮ್ಮಿಸಿದೆ
ಜೀವನದ ತಂತಿಗಳ ಝಮ್ಮೆಂದು ನಡುಗಿಸಿದೆ
ಸುಪ್ತಜ್ವಾಲಾಮುಖಿಯ ತಟ್ಟಿ ಎಚ್ಚರಿಸುತಿದೆ
ಹಣೆಯ ಬರಹವನೊರೆಸಿ ಬೇರೊಂದ ಬರೆಯುತಿದೆ ।। ಇದಾವ ।।

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್

download idaava raaga mathe

 

 

ಟ್ಯಾಗ್ ಗಳು: , , , , ,

ಸಂಜೆ ಬಾನಿನಂಚಿನಲ್ಲಿ / sanje baaninanchinalli

click to play

[audio http://cl.ly/251m0Q2N1400/sanje_baaninalli.mp3]

ಸಂಜೆ ಬಾನಿನಂಚಿನಲ್ಲಿ
ಬಿದ್ದ ಬಿದಿಗೆ ಚಂದಿರ
ಶಚೀ ತೀರ್ಥದಾಳದಲ್ಲಿ
ಶಕುಂತಲೆಯ ಉಂಗುರ ।। ಸಂಜೆ ।।

ದೂರ್ವಾಸರ ಶಾಪವಿಗೋ
ಕವಿಯುತಿಹುದು ಸುತ್ತಲೂ
ಕಂಡುದೆಲ್ಲ ಜಾರುತಿಹುದು
ಮೆಲ್ಲನಿರುಳ ತಮದೊಳು ।। ಸಂಜೆ ।।

ಅಸಹಾಯಕ ತಾರೆಬಳಗ
ಹನಿಗಣ್ಣೊಳು ನೀರವ
ಸುಯ್ವ ಗಾಳಿ ತಡೆಯುತಿಹುದು
ಉಕ್ಕಿ ಬರುವ ದುಃಖವ ।। ಸಂಜೆ ।।

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ?
ಗಾಯನ – ರತ್ನಮಾಲ ಪ್ರಕಾಶ್

download sanje baaninanchinalli

 

ಟ್ಯಾಗ್ ಗಳು: , , , , ,

ಯಾರ ಹಾಡ ಕೊರಳಾಗಿ / yaara haada koralaagi

click to play

ಯಾರ ಹಾಡ ಕೊರಳಾಗಿ ಒಳ ದನಿಯ ಮರೆತೇನೋ
ಯಾರ ವೀಣೆ ಬೆರಳಾಗಿ ಅಪಸ್ವರವ ಮಿಡಿದೇನೋ ।।

ಯಾವ ವೇಷ ತೊಟ್ಟು ನಾನು ರಂಗದಲ್ಲಿ ಕುಣಿದೇನೋ
ಯಾವ ಗೆಜ್ಜೆ ನಾದಕಾಗಿ ಪಾದವನ್ನೇ ತೆತ್ತೇನೋ ।। ಯಾರ ।।

ಯಾವ ಜೀವ ಬೆಳಗಲೆಂದು ದೀಪವಾಗಿ ಉರಿದೇನೋ
ಯಾರ ಪಯಣ ಸಾಗಲೆಂದು ಹಾದಿಯಾಗಿ ಹರಿದೇನೋ ।। ಯಾರ ।।

ಯಾರ ಕನಸ ಕಟ್ಟ ಹೋಗಿ ಬಣ್ಣಗೆಟ್ಟು ನಿಂತೇನೋ
ಎದೆಯ ನೋವು ಹಾಡಾಗದೆ ಬರಿಯ ಶಬ್ಧವಾದೇನೋ ।। ಯಾರ ।।

ಸಾಹಿತ್ಯ – M R ಕಮಲ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್

download yaara haada koralaagi

 

ಟ್ಯಾಗ್ ಗಳು: , , , , , , ,

ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ / yelliruve kaanisade kareva korale

click to play

ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ
ಎಲ್ಲಿರುವೆ ಹೇಳು ನೀ ನಿಜವೆ ನೆರಳೆ ।।

ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ
ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರು
ಎಸೆದ ಕೋಗಿಲೆಯ ದನಿ ಹರಳಿನಂತೆ || ಎಲ್ಲಿರುವೆ ।।

ನಿನಗೆಂದೆ ನೆಲ ಬಾನು ಕೂಗಿ ಕರೆದೆ
ಹೊಲ ಕಾನು ಬನವೆಲ್ಲ ತಿರುಗಿ ನವೆದೆ
ಓಡಿ ಬಂದೆನು ಇಗೋ ಪರಿವೆ ಇರದೇ
ಓಡಿ ಬರುವಂತೆ ನದಿ ಕಡಲ ಕರೆಗೆ || ಎಲ್ಲಿರುವೆ ।।

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್

download yelliruve kaanisade kareva korale

 

ಟ್ಯಾಗ್ ಗಳು: , , , , , , , , ,

ನೋಡಿದ ಅವನು ಹೀಗೆ ನೋಡಿದ / nodida avanu heege nodida

click to play

ನೋಡಿದ ಅವನು ಹೀಗೆ ನೋಡಿದ
ಒಣಬೇರಿಗೆ ನೀರೂರುವ ಹಾಗೆ ನೋಡಿದ
ಕೂಡಿದ ನನ್ನ ಹೇಗೆ ಕೂಡಿದ
ಹೊಸಚೇತನ ನನ್ನಲಿ ಹರಿವಂತೆ ಕೂಡಿದ ।। ನೋಡಿದ ।।

ನರಳಿದೆ ಆಹಾ ಹೇಗೆ ನರಳಿದೆ
ಮೈಯ ತುಂಬ ಚಿಗುರು ನಿಮಿರಿದಂತೆ ನರಳಿದೆ
ಅರಳಿದೆ ಹಿಗ್ಗಿ ಹೇಗೆ ಅರಳಿದೆ
ಹೂವಿನೋಕುಳಿಯಲಿ ಮಿಂದ ಹಾಗೆ ಅರಳಿದೆ ।। ನೋಡಿದ ।।

ಸುರಿಸಿದ ಒಲವ ಹೇಗೆ ಸುರಿಸಿದ
ಆಗುಂಬೆಯ ಹುಚ್ಚು ಮಳೆಯ ಹಾಗೆ ಸುರಿಸಿದ
ಫಲಿಸಿತು ನನ್ನೊಳೇನು ಫಲಿಸಿತು
ಜೊಂಪೆ ಜೊಂಪೆ ಹಣ್ಣು ತೂಗಿ ಜೀವ ಫಲಿಸಿತು ।। ನೋಡಿದ ।।

ತುಂಬಿತು ಎದೆಯೊಳೇನು ತುಂಬಿತು
ನೂರು ಹಕ್ಕಿ ಹೈಕಳುಗಳ ಹಾಡು ತುಂಬಿತು
ಆದೆನು ನಾನು ಏನಾದೆನು
ಸುತ್ತ ತಂಪು ನೆರಳು ಹರಡಿ ಧನ್ಯಳಾದೆನು ।। ನೋಡಿದ ।।

ಸಾಹಿತ್ಯ – ಬಿ ಆರ್ ಲಕ್ಷ್ಮಣರಾವ್
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್

download nodida avanu heege nodida

 

ಟ್ಯಾಗ್ ಗಳು: , , , , , , ,

ಒಂದೇ ವೃಕ್ಷದ ಕೊಂಬೆಗಳು / onde vrukshada kombegalu

click to play

ಒಂದೇ ವೃಕ್ಷದ ಕೊಂಬೆಗಳು
ನಾವೊಂದೇ ಬಳ್ಳಿಯ ಹೂವುಗಳು
ಒಂದೇ ನೆಲದೊಳು ಬೇರೂರುತ
ನಾವೊಂದೇ ಮುಗಿಲಿಗೆ ನೆಗೆವವರು

ಒಂದೆ ವಸಂತದ ಸ್ಪರ್ಶಕೆ ಝಗ್ಗನೆ
ಚಿಗುರುತ ಎದೆಯನು ತೆರೆದವರು
ಹಳೆಯ ನೆನಪುಗಳನೊಂದೇ ಗಾಳಿಗೆ
ತೂರುತ ಭರವಸೆಗೊಲಿದವರು

ಹಣ್ಣು-ಕಾಯ್ಗಳಲಿ ನಾಳಿನ ಕನಸಿನ
ಬೀಜವ ಹುದುಗಿಸಿ ಇಟ್ಟವರು
ಕೊಂಬೆ ಕೊಂಬೆಯಲಿ ಹಾಡುವ ಹಕ್ಕಿಯ
ರಾಗಕೆ ಮನಸನು ಕೊಟ್ಟವರು

ಹಗಲಿರುಳಿನ ಋತುಮಾನದ ಗತಿಯೊಳು
ಮರಳಿ ಮರಳಿ ಹೊಸತಾಗುವರು
ಹಿಂದು-ಮುಂದುಗಳನೊಂದೇ ಕೇಂದ್ರಕೆ
ತಂದುಕೊಂಡು ನೆಲೆ ನಿಂತವರು

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲಾ ಪ್ರಕಾಶ್ / ಮಾಲತಿ ಶರ್ಮ

download onde vrukshada kombegalu

 

ಟ್ಯಾಗ್ ಗಳು: , , , , , , ,

ದೀಕ್ಷೆಯ ತೊಡು ಇಂದೇ / deeksheya todu inde

click to play

ದೀಕ್ಷೆಯ ತೊಡು ಇಂದೇ
ಕಂಕಣ ಕಟ್ಟಿಂದೇ
ಕನ್ನಡ ನಾಡೊಂದೇ
ಇನ್ನೆಂದೂ ತಾನೊಂದೇ ।।

ನೃಪತುಂಗನ ದೊರೆಮುಡಿ ಸಾಕ್ಷಿ
ಪಂಪನ ಪದ ಧೂಳಿಯ ಸಾಕ್ಷಿ
ಕೂಡಲ ಸಂಗನ ಅಡಿ ಸಾಕ್ಷಿ
ಗದುಗಿನ ಕವಿದೇವನ ಸಾಕ್ಷಿ ।। ದೀಕ್ಷೆಯ ।।

ಇಡು ಸಹ್ಯಾದ್ರಿಯ ಮೇಲಾಣೆ
ಇಡು ಕಾವೇರಿಯ ಮೇಲಾಣೆ
ಇಡು ಚಾಮುಂಡಿಯ ಮೇಲಾಣೆ
ಇಡು ಗೊಮ್ಮಟ ಗುರುದೇವಾಣೆ ।। ದೀಕ್ಷೆಯ ।।

ಕಾಣಲಿ ಕನ್ನಡ ವ್ಯೋಮಾಕ್ಷಿ
ನಿಲ್ಲಲಿ ರವಿ ಚಂದ್ರರ ಸಾಕ್ಷಿ
ಕೇಳಲಿ ಕನ್ನಡ ಪಶು ಪಕ್ಷಿ
ಸರ್ವ ದೇವರೂ ಶ್ರೀ ಸಾಕ್ಷಿ ।। ದೀಕ್ಷೆಯ ।।

ಇಡು ನಿನ್ನಯ ಸತಿಯಾಣೆ
ಇಡು ನಿನ್ನಯ ಪತಿಯಾಣೆ
ಮಕ್ಕಳ ಮೇಲಾಣೆ
ಅಕ್ಕರೆ ಮೇಲಾಣೆ
ಗುರುದೇವರ ಆಣೆ
ನನ್ನಾಣೆ
ನಿನ್ನಾಣೆ
ತೊಡು ದೀಕ್ಷೆಯ
ಇಡು ರಕ್ಷೆಯ
ಕಂಕಣ ಕಟ್ಟಿಂದೇ
ಇನ್ನೆಂದೂ ತಾನೊಂದೇ
ಕನ್ನಡ ನಾಡೊಂದೇ

ಸಾಹಿತ್ಯ – ಕುವೆಂಪು

ಸಂಗೀತ – ಸಿ ಅಶ್ವಥ್

ಗಾಯನ – ರತ್ನಮಾಲ ಪ್ರಕಾಶ್ / ನರಸಿಂಹ ನಾಯಕ್

download deeksheya todu inde

 

ಟ್ಯಾಗ್ ಗಳು: , , , , , , ,

ಹಾಲು ಹಳ್ಳ ಹರಿಯಲಿ / haalu halla hariyali

click to play

ಹಾಲು ಹಳ್ಳ ಹರಿಯಲಿ
ಬೆಣ್ಣೆ ಬೆಟ್ಟವಾಗಲಿ
ಜೇನು ಮಳೆಯು ಸುರಿಯಲಿ
ತೊಟ್ಟಿಲೊಲಿದು ತೂಗಲಿ || ಹಾಲು ||

ಪೈರು ಪಚ್ಚೆ ಬೆಳೆಯಲಿ
ತೆನೆಯ ಚಿನ್ನ ಹೊಳೆಯಲಿ
ಹಕ್ಕಿ ಹೊಟ್ಟೆ ತಣಿಯಲಿ
ಮಿಗವು ಸೊಗಸಿ ನಲಿಯಲಿ || ಪೈರು ||

ಮುಗಿದು ಸಮರ ನರಗಲಿ
ನರರು ನರರ ನಂಬಲಿ
ಸ್ವಾಮಿ ಅಮೃತ ಕೃಪೆಯಲಿ
ಶಾಂತಿ ಜಗವ ತುಂಬಲಿ

ಸಾಹಿತ್ಯ – ಕುವೆಂಪು
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್
 
download haalu halla hariyali
 

ಟ್ಯಾಗ್ ಗಳು: , , , , , ,

ಯಾವ ರಾಗಕೊ ಏನೋ / yaava raagako eno

click to play

ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ
ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ

ಉದಯ ಅಸ್ತಗಳೆದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಲ ಬೇಗೆಗೆ ತಣಿಲ ತಂಪಿಗೆ ಧುಮುಕಿ ಶೋಧಿಸಿ ಬಳಲಿತು
ಬೀಸಿಬಹ ಬಿರುಗಾಳಿಯಬ್ಬರದೆದೆಗೆ ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಹಿಡಿಯಲೆಳಸುತ ಸೋತಿತು

ಮುಗಿಲ ತಾರೆಯ ರಜತನಂದನದಲ್ಲಿ ದನಿಯನು ಹುಡುಕಿತು
ಸರ್ವ ಋತುಗಳ ಕೋಶಕೋಶಕೆ ನುಗ್ಗಿ ತೃಪ್ತಿಯನರಸಿತು
ಏನು ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ ಎದೆಯ ತುಂಬಿದೆ, ಮೂಕವಾಗಿದೆ ಹೃದಯವು.

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ?
ಗಾಯನ – ರತ್ನಮಾಲ ಪ್ರಕಾಶ್
 

download yaava raagako eno

 

ಟ್ಯಾಗ್ ಗಳು: , , , , , ,