RSS

Category Archives: ಮೈಸೂರು ಅನಂತಸ್ವಾಮಿ

ಈ ಬೀದಿಯಲ್ಲಿ ನಾ ಓಡಾಡಿದ್ದೆ / ee beediyalli naa odaadidde

click to play

ಈ ಬೀದಿಯಲ್ಲಿ ನಾ ಓಡಾಡಿದ್ದೆ
ಬೇಕಾದಷ್ಟು ಸಲ
ಈ ನಗರದ ಎಲ್ಲಾ ಬೀದಿಗಳಂತೆ
ಧೂಳು ಹೊಗೆ ಗದ್ದಲ ।।

ನಲ್ಲೆ ನಿನ್ನ ಮನೆ
ಇಲ್ಲೇ ಇರುವುದು ತಿಳಿದೊಡನೆ
ಎಂಥಾ ಚೆಲುವು ಬಂತು ಬೀದಿಗೆ
ಎಂಥಾ ಪರಿಮಳ ।। ಈ ಬೀದಿಯಲ್ಲಿ ।।

ಧೂಳು ಈಗ ಧೂಳಲ್ಲ ನನಗದೇ
ಪುಷ್ಪ ಪರಾಗ ರೇಣು
ಕಿವಿ ಗಡಚಿಕ್ಕುವ ಹಾರನ್ನುಗಳೇ
ಈಗ ಇಂಪಾದ ವೇಣು

ಬಸ್ಸು ಲಾರಿಯ ಹೊಗೆ ನಲ್ಲೆ
ಆಗರು ಧೂಪ ನನಗೆ
ನೀನಿರುವೆಡೆಯೇ ನನಗೆ ನಂದನ
ನೀನೇ ಕಾಮಧೇನು ।। ಈ ಬೀದಿಯಲ್ಲಿ ।।

ನಿನ್ನ ಮನೆಯೆ ದೇವಾಲಯ ದೇವಿ
ನಾನು ನಿನ್ನ ಭಕ್ತ
ಯಾರೇ ನಕ್ಕರೂ ಕೇರು ಮಾಡದೆ
ನಿಂತಿರುವೆನು ಅನುರಕ್ತ ।।

ನಿನ್ನ ಮನೆಯ ಮುಂದೆ
ನೆಟ್ಟ ಗರುಡಗಂಬದಂತೆ
ನಲ್ಲೆ ನಿನ್ನ ದರ್ಶನಕ್ಕಾಗಿ
ನಾ ಹಂಬಲಿಸುತ್ತಾ ನಿಂತಿರುವೆನು ಅನುರಕ್ತ ನಾನು ನಿನ್ನ ಭಕ್ತ ।। ಈ ಬೀದಿಯಲ್ಲಿ ।।

ಕರುಣಿಸಿ ನಿನ್ನ ಭಕ್ತನ ಮೇಲೆ
ಬಾರೇ ನೀನು ಹೊರಗೆ
ಕಿಟಕಿಯನ್ನು ತೆರೆದಾದರೂ ಒಮ್ಮೆ
ನೋಡೇ ಈ ಕಡೆಗೆ

ಪ್ರೀತಿಯ ಒಂದು ನಗೆ
ಸಿಕ್ಕರೆ ಅದೇ ಸಾಕು ನನಗೆ
ಬದುಕಿ ಉಳಿಯುವೆನು ಭರವಸೆಯಲ್ಲಿ
ನಾನು ನಾಳೆಯವರೆಗೆ ।। ಈ ಬೀದಿಯಲ್ಲಿ ।।

ಸಾಹಿತ್ಯ –  ಬಿ ಆರ್ ಲಕ್ಷ್ಮಣರಾವ್
ಸಂಗೀತ / ಗಾಯನ – ಮೈಸೂರು ಅನಂತಸ್ವಾಮಿ
 
download ee beediyalli naa odaadidde
 

ಟ್ಯಾಗ್ ಗಳು: , , , , , , ,

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು / nee nan atteeg belkang idde nanju

click to play

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು
ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು
ಮಾಗಿ ಕುಗ್ತು ಬೇಸ್ಗೆ ನುಗ್ತು
ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು
ನಂಗೂ ನಿಂಗೂ ಯೆಂಗ್ ಅಗಲೋಯ್ತು ನಂಜು ।। ನೀ ನನ್ ।।

ಸೀರಂಗ್ಪಟ್ನ ತಾವ್ ಕಾವೇರಿ ಒಡದಿ
ಯೆಳ್ಡೊಳಾಗಿ ಪಟ್ನದ್ ಸುತ್ತ ನಡದಿ
ಸಂಗಂದಲ್ಲಿ ಸೇರ್ಕೊಂಡ್ ಮಳ್ಳಿ
ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು
ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು ।। ನೀ ನನ್ ।।

ಆಗಲೋಡೋಗ್ತೆ ರಾತ್ರಿ ಬಂತಂತ್ ಅಂಜಿ
ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ
ರಾತ್ರಿ ಬಿತ್ತು ಆಗಲೇ ಬತ್ತು
ಓಗೋದ್ ಮಳ್ಳಿ ಬರೋದ್ಕಲ್ವ ನಂಜಿ
ಆ ನೆಮ್ಕೆ ನನ್ ಜೀವಾನ್ ಉಳಸೋ ಗಂಜಿ ।। ನೀ ನನ್ ।।

ಸಾಹಿತ್ಯ – ಜಿ.ಪಿ.ರಾಜರತ್ನಂ

ಸಂಗೀತ – ಮೈಸೂರು ಅನಂತಸ್ವಾಮಿ

ಗಾಯನ – ರಾಜು ಅನಂತಸ್ವಾಮಿ

download nee nan atteeg belkang idde nanju

 

 

 

ಟ್ಯಾಗ್ ಗಳು: , , , , , , ,

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ / baagilolu kai mugidu

click to play

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು… ಕಲೆಯ ಬಲೆಯು ||

ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ  ।। ಬಾಗಿಲೊಳು ।।

ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ ||
ಕರ್ಪೂರದಾರತಿಯ ಜ್ಯೋತಿ ಇಲ್ಲ

ಭಗವಂತನಾನಂದ ರೂಪುಗೊಂಡಿಹುದಿಲ್ಲಿ ।।
ರಸಿಕತೆಯ ಕಡಲುಕ್ಕಿ ಹರಿಹುದಿಲ್ಲಿ ।।

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಬೋಧಿಸಿದೆ ಭಾರತವನಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುತಿದೆ ಭೂಭಾರವಿಲ್ಲಿ

ಸಾಹಿತ್ಯ – ಕುವೆಂಪು

ಸಂಗೀತ – ಮೈಸೂರು ಅನಂತಸ್ವಾಮಿ

ಗಾಯನ – P ಕಾಳಿಂಗ ರಾವ್

download baagilolu kai mugidu

 

 

 

 

ಟ್ಯಾಗ್ ಗಳು: , , , , , , ,

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ / hendatiyobbalu maneyolagiddare

click to play

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರೂಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರ‍ಡುವೆನೆಂದರೆ ನನಗಿಲ್ಲದ ಕೋಪ

ಕೈ ಹಿಡಿದವಳು ಕೈ ಬಿಡದವಳು ಮಾಡಿದ ಅಡುಗೆಯ ಚಂದ
ನಾಗರಕುಚ್ಚಿನ ನಿಡುಜಡೆಯವಳು ಈಕೆ ಬಂದುದು ಎಲ್ಲಿಂದ?

ಕಬ್ಬಿಗನೂರಿಗೆ ದಾರಿಗಳಿದ್ದರೆ ಕನಸೆ ಇರಬೇಕು
ಅಲ್ಲಿಯ ದೊರೆತನ ಸಿಗುವಂತಿದ್ದರೆ ನನಗೆ ಸಿಗಬೇಕು

ತಾರೆಯ ಬೆಳಕಿನ ತುಂಬಿದ ಸಭೆಯಲಿ ಸುಂದರಿ ಮೆರೆದಾಳು
ನನ್ನೊಡನವಳು ಸಿಂಹಾಸನದಲಿ ಮೆಲ್ಲನೆ ನಕ್ಕಾಳು

ಚಂದಿರನೂರಿನ ಅರಮನೆಯಿಂದ ಬಂದವರೀಗೆಲ್ಲಿ
ಬೆಳ್ಳಿಯಕೋಟೆಯ ಬಾಗಿಲಿನಿಂದ ಬಂದವರೀಗೆಲ್ಲಿ?

ಹೆಂಡತಿಯೊಂದಿಗೆ ಬಡತನ ದೊರೆತನ ಏನೂ ಭಯವಿಲ್ಲ
ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ

ಸಾಹಿತ್ಯ – ಕೆ ಎಸ್ ನರಸಿಂಹಸ್ವಾಮಿ
ಸಂಗೀತ /ಗಾಯನ  – ಮೈಸೂರು ಅನಂತಸ್ವಾಮಿ
 
download hendatiyobbalu maneyolagiddare
 
 

ಟ್ಯಾಗ್ ಗಳು: , , , , , ,

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ / amma naanu devaraane benne kaddillamma

click to play

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ ||

ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ
ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ || ಅಮ್ಮಾ ||

ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿ೦ದೆ ಮರೆಸುತ್ತ || ಅಮ್ಮಾ ||

ಎತ್ತಿದ ಕೈಯ ಕಡುಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯ ಶ್ಯಾಮನ ಮುತ್ತಿಟ್ಟು ನಕ್ಕಳು ಗೋಪಿ || ಅಮ್ಮಾ ||

ಸಾಹಿತ್ಯ –  ಹೆಚ್.ಎಸ್.ವೆಂಕಟೇಶ ಮೂರ್ತಿ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ

download amma naanu devaraane benne kaddillamma

 

ಟ್ಯಾಗ್ ಗಳು: , , , ,

ಬಾ ಸವಿತಾ / baa savitha

click to play

ಬಾ ಸವಿತಾ ಬಾ ಸವಿತಾ ಬಾ ಸವಿತಾ..

ಒಳಗಿನ ಕಣ್ಣನು ಮುಚ್ಚಿಸಿವೊಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿವೊಮ್ಮೆ
ಒಳಿತಲ್ಲದುದೆ ಒಳಿತೆಂಬುದರ
ಚಳಕವೆಲ್ಲಕೆ ವಿನಾಶವತಾ || ಬಾ ||

ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ
ಛಲ ತೊಟ್ಟ ಮಲ್ಲ, ವಾಹಿನಿ ಬಾ
ನಿಲವಿಲ್ಲಾ ಜಗದಿ ಕತ್ತಲೆಗೆಂದು
ಗೆಲವನು ಸಾರುವ ಭಾಸವ ತಾ || ಬಾ ||

ಓಂ ತತ್ಸವಿತುರ್ವರೇಣ್ಯವೆಂಬೆವು
ಅಂತಲ್ಲದೆ ಬೇರೆಯದನು ನಂಬೆವು
ಪಂಥವ ಬೆಳೆಗಿಸಿ ನಿರೂಪಿಸಿ ಕೋಂಬೆವು
ಶಾಂತಸುಂದರ ಶಿವದಾ ಸವಿತಾ || ಬಾ ||

ಸಾಹಿತ್ಯ – ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ?

download baa savitha

 

ಟ್ಯಾಗ್ ಗಳು: , , , , , ,

ಲೋಕದ ಕಣ್ಣಿಗೆ / lokada kannige

click to play

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ || ಲೋ ||

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ || ಲೋ ||

ಮಹಾಪ್ರವಾಹ ಮಹಾಪ್ರವಾಹ ಮಹಾಪ್ರವಾಹ ಮಹಾಪ್ರವಾಹ
ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆದರೂ ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ರೀತಿ ಇದು || ೨|| || ಲೋ ||

ಸಾಹಿತ್ಯ – ಎಚ್.ಎಸ್.ವೆಂಕಟೇಶ್ ಮೊರ್ತಿ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ

download lokada kannige raadheyu kooda

 

ಟ್ಯಾಗ್ ಗಳು: , , , , ,

ಮಡಿಕೇರಿ ಮೇಲ್ ಮಂಜು / madikeri mel manju

click to play

ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಿಕೇರಿ ಮೇಲ್ ಮಂಜು!

ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡುಗೋದಂಗೆ
ಅಳ್ಳಾಡಾಲ್ದು ಮಂಜು!
ತಾಯಿ ಮೊಗೀನ್ ಎತ್ಕೊಂಡ೦ಗೆ
ಒಂದಕ್ಕೊಂದು ಅತ್ಕೊ೦ಡ೦ಗೆ
ಮಡಿಕೇರೀನ ಎದೆಗೊತ್ಕೊಂಡಿ
ಜೂಗಾಡ್ತಿತ್ತು ಮಂಜು!

ಮಲಗಾಕ್ ಸೊಳ್ಳೆಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಬಟಿ ಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್
ಮಡಿಕೇರೀ ಮೇಲ್ ಮಂಜು!
ಮಂಜಿನ್ ಮಸಕಿನ್ ಕಾವಲ್ನಲ್ಲಿ
ಒಣಗಿದ ಉದ್ದಾನೆ ಉಲ್ನಲ್ಲಿ
ಒಳಗೆ ಏನೋ ಸರದೋದಂಗೆ
ಅಲಗಾಡ್ತಿತ್ತು ಮಂಜು!
ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಟದ್ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
ಗಸ್ತಾಕ್ತಿತ್ತು ಮಂಜು!

ಸೂರ್ಯನ್ ಕರೆಯಾಕ್ ಬಂದ್ ನಿಂತೋರು
ಕೊಡಗಿನ್ ಎಲ್ಲಾ ಪೂವವ್ನೋರು
ತೆಳ್ನೆ ಬೆಳ್ನೆ ಬಟ್ಟೇನಾಕಿ
ಬಂದಂಗಿತ್ತು ಮಂಜು!
ಚಿಮ್ತಾನಿದ್ರ್ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
ಆಲಿನ್ ಸೌಂದ್ರೀ ಮಂಜು!
ಅಗಲೇ ಬರಲಿ ರಾತ್ರೇ ಬರಲಿ
ಬಿಸಿಲು ನೆರಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಲ್ದು
ಮಡಿಕೇರೀಗೆ ಮಂಜು!
ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ – ನನ್ ತಂಗೀದ್ದಂಗೆ
ಬಿಟ್ಟೂ ಬಿಡದಂಗ್ ಇಡಕೋ೦ತಿತ್ತು
ಮಡಿಕೇರೀಗೆ ಮಂಜು!

ಸಾಹಿತ್ಯ – ಜಿ. ಪಿ. ರಾಜರತ್ನಂ
ಸಂಗೀತ / ಗಾಯನ – ಮೈಸೂರು ಅನಂತಸ್ವಾಮಿ

download madikeril manju

 

ಟ್ಯಾಗ್ ಗಳು:

ಉರಿವ ಬಿಸಿಲಿರಲಿ / uriva bisilirali

click to play

ಉರಿವ ಬಿಸಿಲಿರಲಿ ಕೊರೆವ ಚಳಿ ಇರಲಿ
ನಮ್ಮ ಮನದೊಳಿರಲಿ ನಿನ್ನ ಧ್ಯಾನ
ಶರಣರ ನೆಲವೇ ತರುಣರ ಛಲವೇ
ನಿನ್ನ ಚರಣತಲಕೆ ನಮ್ಮ ಪ್ರಾಣ

ಊನವಾಗಿ ನಿನ್ನ ಮಾನ
ಓ ನಾವು ಜೀವಿಸಿದ್ದ ಫಲವೇನಾ ?
ದೇವರ ನೆಲವೇ ಕಾಯ್ವರ ಫಲವೇ
ನಿನ್ನ ನೇರ ಬಿರಿಸಿ ನಮ್ಮ ಪ್ರಾಣ

ಹೊಟ್ಟೆ ಹೊರೆಯಲು ರಟ್ಟೆ ಬೀಸುವ
ನಾವು ಹಿಟ್ಟಿನಾಳ್ಗಳಲ್ಲ
ಹುಟ್ಟಿನಿಂದ ನಿನ್ನ ಹೊರೆವ ಹೊಣೆ ಹೊತ್ತ
ದಿಟ್ಟರಾರು ಶಿವ ಬಲ್ಲ
ನಿನ್ನ ಮುಟ್ಟಿ ಬಹಕೆ ಬದುಕಿಲ್ಲ

ಧೀರರ ನಾಡೆ ವೀರರ ಬೀಡೆ
ನಿನ್ನ ಸೇವೆಗೈಯದವ ಹೊಲ್ಲ

ಸಾಹಿತ್ಯ – ಪು.ತಿ.ನ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ

download uriva bisilirali

 

ಟ್ಯಾಗ್ ಗಳು: , , , , ,

ಇಳಿದು ಬಾ ತಾಯೆ ಇಳಿದು ಬಾ / ilidu baa taaye ilidu baa

click to play

ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ ||

ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ ||

ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ ||

ಸಾಹಿತ್ಯ – ಕುವೆಂಪು
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಮೈಸೂರು ಅನಂತಸ್ವಾಮಿ

download rutha chinmaya

 

ಟ್ಯಾಗ್ ಗಳು: , , , ,