RSS

ಮಡಿಕೇರಿ ಮೇಲ್ ಮಂಜು / madikeri mel manju

06 ಆಗಸ್ಟ್

click to play

ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಿಕೇರಿ ಮೇಲ್ ಮಂಜು!

ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡುಗೋದಂಗೆ
ಅಳ್ಳಾಡಾಲ್ದು ಮಂಜು!
ತಾಯಿ ಮೊಗೀನ್ ಎತ್ಕೊಂಡ೦ಗೆ
ಒಂದಕ್ಕೊಂದು ಅತ್ಕೊ೦ಡ೦ಗೆ
ಮಡಿಕೇರೀನ ಎದೆಗೊತ್ಕೊಂಡಿ
ಜೂಗಾಡ್ತಿತ್ತು ಮಂಜು!

ಮಲಗಾಕ್ ಸೊಳ್ಳೆಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಬಟಿ ಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್
ಮಡಿಕೇರೀ ಮೇಲ್ ಮಂಜು!
ಮಂಜಿನ್ ಮಸಕಿನ್ ಕಾವಲ್ನಲ್ಲಿ
ಒಣಗಿದ ಉದ್ದಾನೆ ಉಲ್ನಲ್ಲಿ
ಒಳಗೆ ಏನೋ ಸರದೋದಂಗೆ
ಅಲಗಾಡ್ತಿತ್ತು ಮಂಜು!
ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಟದ್ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
ಗಸ್ತಾಕ್ತಿತ್ತು ಮಂಜು!

ಸೂರ್ಯನ್ ಕರೆಯಾಕ್ ಬಂದ್ ನಿಂತೋರು
ಕೊಡಗಿನ್ ಎಲ್ಲಾ ಪೂವವ್ನೋರು
ತೆಳ್ನೆ ಬೆಳ್ನೆ ಬಟ್ಟೇನಾಕಿ
ಬಂದಂಗಿತ್ತು ಮಂಜು!
ಚಿಮ್ತಾನಿದ್ರ್ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
ಆಲಿನ್ ಸೌಂದ್ರೀ ಮಂಜು!
ಅಗಲೇ ಬರಲಿ ರಾತ್ರೇ ಬರಲಿ
ಬಿಸಿಲು ನೆರಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಲ್ದು
ಮಡಿಕೇರೀಗೆ ಮಂಜು!
ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ – ನನ್ ತಂಗೀದ್ದಂಗೆ
ಬಿಟ್ಟೂ ಬಿಡದಂಗ್ ಇಡಕೋ೦ತಿತ್ತು
ಮಡಿಕೇರೀಗೆ ಮಂಜು!

ಸಾಹಿತ್ಯ – ಜಿ. ಪಿ. ರಾಜರತ್ನಂ
ಸಂಗೀತ / ಗಾಯನ – ಮೈಸೂರು ಅನಂತಸ್ವಾಮಿ

download madikeril manju

 

ಟ್ಯಾಗ್ ಗಳು:

6 responses to “ಮಡಿಕೇರಿ ಮೇಲ್ ಮಂಜು / madikeri mel manju

  1. Juroofie

    ಮೇ 29, 2013 at 2:37 ಅಪರಾಹ್ನ

    ತುಂಬಾ ಚೆನ್ನಾಗಿದೆ. ಧನ್ಯವಾದಗಳು !

     
  2. Pramod

    ಜುಲೈ 17, 2013 at 4:57 ಅಪರಾಹ್ನ

    ಮಡಿಕೇರಿ ಆಕಾಶವಾಣಿಯಲ್ಲಿ ದಿನ ಸ೦ಜೆ/ಬೆಳಗ್ಗೆ ವಾರ್ತೆ ಮುಗಿದ ಕೂಡಲೇ ಬರುತ್ತಿದ್ದ ಈ ಹಾಡು ಸೂಪರ್ 🙂
    ನನ್ನ ಹತ್ರ ಕ್ವಾಲಿಟೀ ಆಡಿಯೋ ಇರಲಿಲ್ಲ. ಧನ್ಯವಾದಗಳು.
    ಹಲವು ತಿ೦ಗಳುಗಳ ಹುಡುಕಾಟಕ್ಕೆ ಒ೦ದು ಕೊನೆ, ಅರ್ಥ ಸಿಕ್ಕಿದೆ 🙂

     
  3. Chenanda Shithil Nanaiah

    ಜೂನ್ 14, 2014 at 10:58 ಅಪರಾಹ್ನ

    great work… thanks a lot…

     
  4. Mickey Karthik

    ಅಕ್ಟೋಬರ್ 27, 2014 at 11:36 ಫೂರ್ವಾಹ್ನ

    Thank you, for bringing memories . 🙂

     
  5. nikita 00

    ಮಾರ್ಚ್ 6, 2018 at 10:14 ಫೂರ್ವಾಹ್ನ

    I was not able to get hold of a more clear version of this song anywhere else. Thank you so much for sharing this!

     
  6. VIKAS. BHAT

    ಮಾರ್ಚ್ 26, 2019 at 11:50 ಫೂರ್ವಾಹ್ನ

    ಧನ್ಯವಾದಗಳು

     

ನಿಮ್ಮ ಟಿಪ್ಪಣಿ ಬರೆಯಿರಿ