RSS

Tag Archives: bhavageete_online_listen

ಹೊಸ ಬಗೆಯಲಿ ಬರಲಿ / hosa bageyali barali

ಹೊಸ ಬಗೆಯಲಿ ಬರಲಿ
ಸುಖ ಸಾವಿರ ತರಲಿ ।।

ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ
ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ ।। ಹೊಸ ।।

ತುಳಿದು ಆಳಲಾಗದಂಥ ಬಾಳಿಗೆ
ಹೊನ್ನಿನ ತೋರಣವ ಬಿಗಿದ ನಾಳೆಗೆ
ಹೊಂಬಿಸಿಲಿನ ಹಾದಿಗೆ
ಕೇದಗೆ ಹೂ ಬೀದಿಗೆ
ಮಾತೆಲ್ಲವು ಕೃತಿಯಾಗುವ ಜಾಡಿಗೆ ।। ಹೊಸ ।।

ಕಣ್ಣೆರಡೂ ಉರಿವ ದೀಪಸ್ಥಂಭ
ಮೇಲೆತ್ತಿದ ತೋಳುಗಳೇ ಕಂಬ
ದೇಹವೆ ಗುಡಿಯಾಗಿ
ನಾಡೇ ಇಡಿಯಾಗಿ
ಸ್ವಾಗತಿಸಲಿ ಸಂಕ್ರಾಂತಿಯ ಕೂಗಿ ।। ಹೊಸ ।।

ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಎಚ್ ಕೆ ನಾರಾಯಣ್
ಗಾಯನ – ರತ್ನಮಾಲ ಪ್ರಕಾಶ್ / ಮಾಲತಿ ಶರ್ಮ

download hosa bageyali barali

 

ಟ್ಯಾಗ್ ಗಳು: , , , , , , ,

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ / gudi charchu masajeedigala bittu

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ

ಬಡತನವ ಬುಡಮಟ್ಟ ಕೀಳಬನ್ನಿ

ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ಓ ಬನ್ನಿ ಸೋದರರೆ ಬೇಗ ಬನ್ನಿ ।। ಗುಡಿ||

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ ।। ಗುಡಿ ।।

ಸಾಹಿತ್ಯ – ಕುವೆಂಪು
ಸಂಗೀತ – ಸಿ ಅಶ್ವಥ್
ಗಾಯನ – ವೈ ಕೆ ಮುದ್ದುಕೃಷ್ಣ

download gudi charchu masajeedigala bittu horabanni

 

ಟ್ಯಾಗ್ ಗಳು: , , , , , , ,

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ / banni bhaavagale banni nannedege

click to play

[audio http://cl.ly/062n3F353g0f/Banni_Bhaavagale.mp3]

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ
ಕರೆಯುವೆ ಕೈ ಬೀಸಿ
ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ ।।

ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು
ಮೀಯುವ ಮುಗಿಲಿನಲಿ
ತವರಿನೆದೆಗೆ ತಂಪೆರೆಯುವ ಮೇಘದ
ಪ್ರೀತಿಯ ಧಾರೆಯಲಿ ।। ಬನ್ನಿ ।।

ಲೋಕಕೆ ಹೊದಿಸಿದ ಕರಿತೆರೆ ಸರಿಸುವ
ಅರುಣೋದಯದಲ್ಲಿ
ಪಕ್ಷಕ್ಕೊಮ್ಮೆ ಬಿಳಿಪತ್ತಲ ನೇಯುವ
ಹುಣ್ಣಿಮೆ ಹಸ್ತದಲಿ ।। ಬನ್ನಿ ।।

ಬನ್ನಿ ಬನ್ನಿ ನನ್ನೆದೆಯ ಬಯಲಿದು
ಬಿತ್ತದ ಕನ್ನೆನೆಲ
ಬೆಳೆಯಿರಿ ಇಲ್ಲಿ ಬಗೆ ಬಗೆ ತೆನೆಯ
ನಮಿಸುವೆ ನೂರು ಸಲ

ನಿಮ್ಮನೆ ಕನವರಿಸಿ
ನಿಮಗೇ ಮನವರಿಸಿ
ಕಾಯುತ್ತಿರುವೆನು ಕ್ಷಣಕ್ಷಣವೂ
ಎದೆಯನು ಹದಗೊಳಿಸಿ ।। ಬನ್ನಿ ।।

ಸಾಹಿತ್ಯ – ಎನ್  ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಸಿ ಅಶ್ವಥ್
ಗಾಯನ – ಶಿವಮೊಗ್ಗ ಸುಬ್ಬಣ್ಣ
 

 

download banni bhaavagale banni nannedege

 

 

ಟ್ಯಾಗ್ ಗಳು: , , , , , ,

ಅಮ್ಮ ಹಚ್ಚಿದೊಂದು ಹಣತೆ / amma hachidondu hanate

click to play

[audio http://cl.ly/1g1I0n2M3B2N/amma_hachidondu_hanate.mp3]

ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ ।।

ಕಪ್ಪು ಕಡಲಿನಲ್ಲಿ ದೋಣಿ
ದಿಕ್ಕು ತಪ್ಪಲು
ದೂರದಲ್ಲಿ ತೀರವಿದೆ
ಎಂದು ತೋರಲು ।। ಅಮ್ಮ ।।

ಕೃತಕ ದೀಪ ಕತ್ತಲಲ್ಲಿ
ಕಳೆದು ಹೋಗದಂತೆ
ಸೂರ್ಯ ಚಂದ್ರ ತಾರೆಯಾಗಿ
ಹೊಳೆದು ಬಾಳುವಂತೆ ।। ಅಮ್ಮ ।।

ಅಂತರಂಗದಲ್ಲಿ ನೂರು
ಕಗ್ಗತ್ತಲ ಕೋಣೆ
ನಾದ ಬೆಳಕ ತುಂಬಲು
ಮಿಡಿದ ಹಾಗೆ ವೀಣೆ ।। ಅಮ್ಮ ।।

ಸಾಹಿತ್ಯ – M R ಕಮಲ
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ
 
download amma hachidondu hanate
 

 

 

ಟ್ಯಾಗ್ ಗಳು: , , , , , ,

ಬಾ ಬಾ ಓ ಬೆಳಕೇ / baa baa o belake

click to play

[audio http://cl.ly/1l0e2I1M3v41/Baa_Baa_O_Belake.mp3]

ಬಾ ಬಾ ಓ ಬೆಳಕೇ
ಕರುಣಿಸಿ ಇಳಿ ನೆಲಕೆ
ನೀನಿಲ್ಲದೆ ಬಾಳೆಲ್ಲಿದೆ
ಹೋಳಾಗಿದೆ ಬದುಕಿಲ್ಲಿ ।।

ಕಾಡು ಕಡಲು ಬಾನು
ಏನಿದ್ದೂ ಏನು
ಮೈಯೆಲ್ಲಿದೆ ಇಡಿ ಭುವಿಗೆ
ಕಾಣಿಸದಿರೆ ನೀನು ।। ಬಾ ।।

ನಿನ್ನ ಕೃಪಾಚರಣ
ಚಾಚಿ ತನ್ನ ಕಿರಣ
ಸೋಕಿದೊಡನೆ ಸಂಚರಿಸಿದೆ
ನೆಲದೆದೆಯಲಿ ಹರಣ ।। ಬಾ ।।

ಬಾಂದಳದಾ ತಿಲಕವೇ
ವಿಶ್ವದೆದೆಯ ಪದಕವೇ
ನಿನ್ನೊಳಗಿನ ಸತ್ಯ ತೋರು
ಬಂಗಾರದ ಫಲಕವೇ ।। ಬಾ ।।

ಸಾಹಿತ್ಯ – ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಎಚ್ ಕೆ ನಾರಾಯಣ್
ಗಾಯನ –  ಸುಲೋಚನ

 

download baa baa o belake

 

ಟ್ಯಾಗ್ ಗಳು: , , , , , , ,

ದಿನ ಹೀಗೆ ಜಾರಿ ಹೋಗಿದೆ / dina heege jaari hogide

click to play

[audio http://cl.ly/1W2S1H2a2k0e/dina_heege_jaari_hogide.mp3]

ದಿನ ಹೀಗೆ ಜಾರಿ ಹೋಗಿದೆ
ನೀನೀಗ ಬಾರದೆ
ಜತೆಯಿರದ ಬಾಳ ಜಾತ್ರೆಯಲಿ
ಸೊಗಸೇನಿದೆ ।।

ಅರಳಿ ಅನೇಕ ಹೂಗಳು
ಬರಿದೆ ಕಾದಿವೆ
ಹಿಮದ ಕಠೋರ ಕೈಯಲಿ
ನರಳಿ ಕೆಡೆದಿವೆ ।। ದಿನ ।।

ಜತೆಯ ಕಾಣದೀಗ ಹಕ್ಕಿ
ಅನಾಥವಾಗಿದೆ
ಋತು ಚೈತ್ರ ಜಾರಿ ಹೋಗಿದೆ
ಗ್ರೀಷ್ಮ ಬರುತಿದೆ ।। ದಿನ ।।

ದುಗುಡ ನಿಧಾನ ಬೆಳೆಯುತ
ಬಾಳ ಮುಸುಕಿದೆ
ಉಳಿದೇನಿತಾಂತ ಕಾಯುತ
ಕನಸು ಮಾಸಿದೆ ।। ದಿನ ।।

ಸಾಹಿತ್ಯ – ಸುಬ್ರಾಯ ಚೊಕ್ಕಾಡಿ
ಸಂಗೀತ – ಸಿ ಅಶ್ವಥ್
ಗಾಯನ –  ನರಸಿಂಹ ನಾಯಕ್

download dina heege jaari hogide

 

 

ಟ್ಯಾಗ್ ಗಳು: , , , ,

ಇದಾವ ರಾಗ ಮತ್ತೆ / idaava raaga mathe

click to play

[audio http://cl.ly/040R0g1L1I2t/idaava_raaga.mp3]

ಇದಾವ ರಾಗ ಮತ್ತೆ ಇದಾವ ರಾಗ
ಎದೆಯಾಳದಿಂದೆದ್ದು ನಭನೀಲಿಗೇರುತಿದೆ

ಯುಗ ಯುಗಾಂತರದೆದೆಯ ನೋವುಗಳ ಕೆರಳಿಸಿದೆ
ಜನುಮಗಳ ಕಣ್ಣೀರ ಕೊಳಗಳನು ಕದಡುತಿದೆ
ಮುರಿದ ಶತ ಬಯಕೆಗಳ ಮೇಲೆತ್ತಿ ತೂರುತಿದೆ
ಬಗೆಯ ಬಾನ್ಬಯಲಿನಲಿ ಮೋಡಗಳ ಕವಿಸುತಿದೆ ।। ಇದಾವ ।।

ಹಚ್ಚಹಸುರೆದೆಯಿಂದ ಬಿಸಿಯುಸಿರ ಹೊಮ್ಮಿಸಿದೆ
ಜೀವನದ ತಂತಿಗಳ ಝಮ್ಮೆಂದು ನಡುಗಿಸಿದೆ
ಸುಪ್ತಜ್ವಾಲಾಮುಖಿಯ ತಟ್ಟಿ ಎಚ್ಚರಿಸುತಿದೆ
ಹಣೆಯ ಬರಹವನೊರೆಸಿ ಬೇರೊಂದ ಬರೆಯುತಿದೆ ।। ಇದಾವ ।।

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ಸಿ ಅಶ್ವಥ್
ಗಾಯನ – ರತ್ನಮಾಲ ಪ್ರಕಾಶ್

download idaava raaga mathe

 

 

ಟ್ಯಾಗ್ ಗಳು: , , , , ,

ನಿನ್ನ ನೀತಿ ಅದಾವ ದೇವರಿಗೆ / ninna neeti adaava devarige

click to play

[audio http://cl.ly/0Y2O343G1W1T/ninna_neeti_adaava_devarige.mp3]

ನಿನ್ನ ನೀತಿ ಅದಾವ ದೇವರಿಗೆ ಪ್ರೀತಿಯೋ
ನೀನೇ ಸರಿ ಅನ್ನಬೇಕು
ಪ್ರೀತಿಗಾಗಿಯೇ ಎಲ್ಲ ತೆತ್ತ ಜೀವವನು
ಈ ರೀತಿ ಕಾಡುವುದು ಸಾಕು ।। ನಿನ್ನ ।।

ಏಕಾಂತವೆನ್ನುವುದು ಎಲ್ಲಿ ನನಗೀಗ
ಎದೆಯಲೇ ಮನೆಯಾ ಹೂಡಿರುವೆ
ಶಾಂತಿ ನೆಮ್ಮದಿ ಈಗ ಯಾವ ಊರಾಚೆಗೋ
ನಿನ್ನದೆ ನಾಮ ಜಪ ನನಗೆ ।। ನಿನ್ನ ।।

ನಿನ್ನ ಕಾಣುವ ಮುನ್ನ ಏನೆಲ್ಲ ಆಸೆಗಳು
ಏನೆಲ್ಲ ಕನಸಿತ್ತು ನನಗೆ
ಎಲ್ಲಾ ತೀರಿತು ನಿನ್ನ ಧ್ಯಾನವೊಂದೆ ಈಗ
ಕಿಚ್ಚಾಗಿ ಒಗ್ಗುತಿದೆ ಒಳಗೆ ।। ನಿನ್ನ ।।

ಕಲ್ಲ ದೇವರ ಹಾಗೆ ನಿಲ್ಲಬಾರದು ಹೀಗೆ
ಕ್ರೂರವಾದರೆ ಹೇಗೆ ಚೆಲುವು
ಶರಣಾದ ಜೀವಕ್ಕೆ ಮರುಗಿ ಸಂತೈಸದೆ
ದೂರವಾದರೆ ಹೇಗೆ ಒಲವು ।। ನಿನ್ನ ।।

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ / ಗಾಯನ – ಸಿ ಅಶ್ವಥ್

download ninna neeti adaava devarige

 

 

ಟ್ಯಾಗ್ ಗಳು: , , , , , , , ,

ಸಂಜೆ ಬಾನಿನಂಚಿನಲ್ಲಿ / sanje baaninanchinalli

click to play

[audio http://cl.ly/251m0Q2N1400/sanje_baaninalli.mp3]

ಸಂಜೆ ಬಾನಿನಂಚಿನಲ್ಲಿ
ಬಿದ್ದ ಬಿದಿಗೆ ಚಂದಿರ
ಶಚೀ ತೀರ್ಥದಾಳದಲ್ಲಿ
ಶಕುಂತಲೆಯ ಉಂಗುರ ।। ಸಂಜೆ ।।

ದೂರ್ವಾಸರ ಶಾಪವಿಗೋ
ಕವಿಯುತಿಹುದು ಸುತ್ತಲೂ
ಕಂಡುದೆಲ್ಲ ಜಾರುತಿಹುದು
ಮೆಲ್ಲನಿರುಳ ತಮದೊಳು ।। ಸಂಜೆ ।।

ಅಸಹಾಯಕ ತಾರೆಬಳಗ
ಹನಿಗಣ್ಣೊಳು ನೀರವ
ಸುಯ್ವ ಗಾಳಿ ತಡೆಯುತಿಹುದು
ಉಕ್ಕಿ ಬರುವ ದುಃಖವ ।। ಸಂಜೆ ।।

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ – ?
ಗಾಯನ – ರತ್ನಮಾಲ ಪ್ರಕಾಶ್

download sanje baaninanchinalli

 

ಟ್ಯಾಗ್ ಗಳು: , , , , ,

ಯಾರಿಗುಂಟು ಯಾರಿಗಿಲ್ಲ / yaariguntu yaarigilla

click to play

[audio http://cl.ly/3u1n2a1I0N3H/yaariguntu_yaarigilla.mp3]

ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ
ಬಂದದ್ದೆಲ್ಲ ನೀಸಬೇಕಯ್ಯ ಗೆಣೆಯ
ಕಾಣದ್ದಕ್ಕೆ ಚಿಂತೆ ಯಾಕಯ್ಯ,
ಗೋಣು ಹಾಕಿ ಕೂಡ ಬ್ಯಾಡ ಗತ್ತಿನಾಗೆ ಬಾಳ ನೋಡ ।। ಯಾರಿಗುಂಟು ।।

ಏಳು ಬೀಳು ಇರುವುದೇನೆ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪುಖಾರ ತಿಂದ ಮೇಲೆ
ಕಷ್ಟ ಮೆಟ್ಟಿ ಸಾಗ ಬೇಕಯ್ಯ ಓ ಗೆಣೆಯ
ಕೈಯ ಚೆಲ್ಲಿ ಕೊರಗ ಬೇಡಯ್ಯ ।। ಗೋಣು ।।

ಪ್ರೀತಿ ಪ್ರೇಮ ನಡೆದ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದುಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯ ಓ ಗೆಣೆಯ
ಕಣ್ಣು ತೆರೆದು ಲೋಕ ನೋಡಯ್ಯ ।। ಗೋಣು ।।

ಸಾಹಿತ್ಯ – ದೊಡ್ಡರಂಗೇಗೌಡ
ಸಂಗೀತ – ಸಿ ಅಶ್ವಥ್
ಗಾಯನ – SPB

download yaariguntu yaarigilla

 

 

ಟ್ಯಾಗ್ ಗಳು: , , , , , , , ,