RSS

ಘಮ ಘಮ ಘಮಾಡಿಸ್ತಾವ ಮಲ್ಲಿಗೆ / ghama ghama ghamaadistaava

23 ಜೂನ್

click to play

ಘಮ ಘಮ ಘಮಾಡಿಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ

ತುಳುಕ್ಯಾಡುತ್ತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ
ಕನಸು ತೇಲಿ ಬರುತ್ತಾವ ಹುಡುಕಿ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ ಚಂದ್ರಮ ಕನ್ನಡಿ ಹರಳ
ಮನ ಸೋತು ಆಯಿತು ಮರುಳ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ನೆರಳಲ್ಲಾಡುತ್ತಾವ ಮರದ ಬುಡಕ್ಕ ಕೇರಿ ತೇರಿ ನೂಗುತ್ತಾವ ದಡಕ್ಕ
ಹಿಂಗ ಬಿಟ್ಟು ಇಲ್ಲಿ ನನ್ನ ನಡಕ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ನನ್ನ ನಿನ್ನ ಒಂದತನದಾಗ ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ಬಂತ್ಯಾಕ ನಿನಗ ಇಂದ ಮುನಿಸು ಬೀಳಲಿಲ್ಲ ನನಗ ಇದರ ಕನಸು
ಪ್ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ಸಾಹಿತ್ಯ – ದ ರಾ ಬೇಂದ್ರೆ
ಸಂಗೀತ – ?
ಗಾಯನ – ಸಂಗೀತ ಕಟ್ಟಿ ಕುಲಕರ್ಣಿ

download ghama ghama ghamaadistaava mallige

 

ಟ್ಯಾಗ್ ಗಳು: , , , , ,

1 responses to “ಘಮ ಘಮ ಘಮಾಡಿಸ್ತಾವ ಮಲ್ಲಿಗೆ / ghama ghama ghamaadistaava

  1. cbmanjula (@manjulaumesh)

    ಆಗಷ್ಟ್ 28, 2014 at 9:58 ಅಪರಾಹ್ನ

    Hello Kiran,
    Nice effort to share the lyrics & songs, please try to upload more of ಸಂಗೀತ ಕಟ್ಟಿ ಕುಲಕರ್ಣಿ songs,
    its not ಪ್ರಾಯ its ರಾಯ in this song ಘಮ ಘಮ ಘಮಾಡಿಸ್ತಾವ ಮಲ್ಲಿಗೆ.

     

ನಿಮ್ಮ ಟಿಪ್ಪಣಿ ಬರೆಯಿರಿ