RSS

ಇಷ್ಟು ಕಾಲ ಒಟ್ಟಿಗಿದ್ದು / ishtu kaala ottigiddu

23 ಜೂನ್

click to play

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೊಣಿಗೆ

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೆ ಕನ್ನಡಿಯ ಪಾಲಿಗೆ

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಬಿ ಕೆ ಚಂದ್ರಶೇಖರ್
ಗಾಯನ – ಎಂ ಡಿ ಪಲ್ಲವಿ

download ishtu kaala ottigiddu

 

ಟ್ಯಾಗ್ ಗಳು: , , , , ,

1 responses to “ಇಷ್ಟು ಕಾಲ ಒಟ್ಟಿಗಿದ್ದು / ishtu kaala ottigiddu

  1. kuntadynithesh

    ಆಗಷ್ಟ್ 5, 2017 at 11:48 ಫೂರ್ವಾಹ್ನ

    ಇದು ವೆಂಕಟೇಶ್ ಮೂರ್ತಿಗಳ ರಚನೆ

     

ನಿಮ್ಮ ಟಿಪ್ಪಣಿ ಬರೆಯಿರಿ