RSS

Daily Archives: ಜೂನ್ 23, 2012

ಉರಿವ ಬಿಸಿಲಿರಲಿ / uriva bisilirali

click to play

ಉರಿವ ಬಿಸಿಲಿರಲಿ ಕೊರೆವ ಚಳಿ ಇರಲಿ
ನಮ್ಮ ಮನದೊಳಿರಲಿ ನಿನ್ನ ಧ್ಯಾನ
ಶರಣರ ನೆಲವೇ ತರುಣರ ಛಲವೇ
ನಿನ್ನ ಚರಣತಲಕೆ ನಮ್ಮ ಪ್ರಾಣ

ಊನವಾಗಿ ನಿನ್ನ ಮಾನ
ಓ ನಾವು ಜೀವಿಸಿದ್ದ ಫಲವೇನಾ ?
ದೇವರ ನೆಲವೇ ಕಾಯ್ವರ ಫಲವೇ
ನಿನ್ನ ನೇರ ಬಿರಿಸಿ ನಮ್ಮ ಪ್ರಾಣ

ಹೊಟ್ಟೆ ಹೊರೆಯಲು ರಟ್ಟೆ ಬೀಸುವ
ನಾವು ಹಿಟ್ಟಿನಾಳ್ಗಳಲ್ಲ
ಹುಟ್ಟಿನಿಂದ ನಿನ್ನ ಹೊರೆವ ಹೊಣೆ ಹೊತ್ತ
ದಿಟ್ಟರಾರು ಶಿವ ಬಲ್ಲ
ನಿನ್ನ ಮುಟ್ಟಿ ಬಹಕೆ ಬದುಕಿಲ್ಲ

ಧೀರರ ನಾಡೆ ವೀರರ ಬೀಡೆ
ನಿನ್ನ ಸೇವೆಗೈಯದವ ಹೊಲ್ಲ

ಸಾಹಿತ್ಯ – ಪು.ತಿ.ನ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಎಂ ಡಿ ಪಲ್ಲವಿ

download uriva bisilirali

 

ಟ್ಯಾಗ್ ಗಳು: , , , , ,

ನಗುವಾಗ ನಕ್ಕು / naguvaaga nakku

click to play

ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿತ್ತು ಅರ್ಧ ದಾರಿ
ಹೂಬಳ್ಳಿಯಿಂದ ಹೆಮ್ಮರನ ಎದೆಗೆ ಬಿಳಿ ಬಿಳಿಯ ಹಕ್ಕಿ ಹಾರಿ||ಪ||

ನಸು ನಕ್ಕು ನಾಚಿ ನೀ ಬಳಿಗೆ ಬಂದೆ ಕೆಂಪಾದ ಹೂಗಳಲ್ಲಿ
ಆ ಮೊದಲ ದಿನದ ಅದೆ ನಲಿವ ಕಂಡೆ ಹೂವೆದೆಯ ಹನಿಗಳಲ್ಲಿ
ನಕ್ಷತ್ರ ಲೋಕ ತೆರೆದಿತ್ತು ಮೇಲೆ ಹೊಸ ಭಾವಗೀತೆಯಂತೆ
ಎದೆಯಾಳದಿಂದ ತುಳುಕಿತ್ತು ಜ್ವಾಲೆ ಬಾಂದಳದ ಮಿಂಚಿನಂತೆ||ನಗುವಾಗ||

ಮೈ ಮೈಗೆ ಸೋಂಕಿ ಆಗಿತ್ತು ಸಂಜೆ ಹುಣ್ಣಿಮೆಯ ತಂಪಿನಲ್ಲಿ
ನಾ ನಿನ್ನ ಕಂಡೆ ನಿನ್ನೊಲವ ಕಂಡೆ ಮಲ್ಲಿಗೆಯ ಕಂಪಿನಲ್ಲಿ
ಓ ನನ್ನ ನಲ್ಲೆ ನಗುತಿರುವೆಯಲ್ಲೆ ನನ್ನೆದೆಯ ತುಂಬ ನೀನೆ
ಈ ಕತ್ತಲೊಳಗೆ ಹುಡುಕುವುದು ಬೇಡ ಇಲ್ಲಿಹುದು ನಿನ್ನ ವೀಣೆ||ನಗುವಾಗ||

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ – ?
ಗಾಯನ – ರಾಜು ಅನಂತಸ್ವಾಮಿ

download naguvaaga nakku

 

ಟ್ಯಾಗ್ ಗಳು: , , , , ,

ಮುನಿಸು ತರವೇ ಮುಗುದೆ / munisu tarave mugude

click to play

ಮುನಿಸು ತರವೇ ಮುಗುದೆ
ಹಿತವಾಗಿ ನಗಲೂ ಬಾರದೆ ||

ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಜುಮ್ಮೆನ್ನಲು |
ನವ ಭಾವ ತುಂಬಿ ತುಂಬಿ ಮನ ಹಾಡಲು
ತೆರದಂತಿದೆ ಭಾಗ್ಯದ ಬಾಗಿಲು ||ಮುನಿಸು||

ಎಷ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ |
ಜೀವನದ ನೂರು ಕನಸು ನನಸಾಗಿದೆ
ಮುನಿಸೇತಕೆ ಈ ಬಗೆ ಮೂಡಿದೆ ||ಮುನಿಸು||

ಹೊಸ ಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀ ಮನ |
ವಾಗರ್ಥದಂತೆ ನಮ್ಮ ಈ ಮೈಮನ
ಜತೆ ಸೇರಲು ಜೀವನ ಪಾವನ ||ಮುನಿಸು||

ಸಾಹಿತ್ಯ – ಸುಬ್ರಾಯ ಚೊಕ್ಕಾಡಿ
ಸಂಗೀತ – ?
ಗಾಯನ – ಪುತ್ತೂರು ನರಸಿಂಹ ನಾಯಕ್

download munisu tarave mugude

 

ಟ್ಯಾಗ್ ಗಳು: , , , ,

ಮುಗಿಲ ಮಾರಿಗೆ ರಾಗರತಿಯ / mugila maarige raagaratiya

click to play

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ

ಬಿದಿಗಿ ಚಂದ್ರನ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ

ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬನ್ನಿಲೆ ಬರತಿತ್ತ
ತನ್ನ ಮೈಮರ ಮರತಿತ್ತ

ಸಾಹಿತ್ಯ – ದ. ರಾ. ಬೇಂದ್ರೆ
ಸಂಗೀತ – ?
ಗಾಯನ – ಸಂಗೀತ ಕಟ್ಟಿ ಕುಲಕರ್ಣಿ

download mugila maarige raaga ratiya

 

ಟ್ಯಾಗ್ ಗಳು: , , , , , ,

ಕಾಂತನಿಲ್ಲದ ಮ್ಯಾಲೆ ಎಕಾಂತವ್ಯಾತಕೆ / kaantanillada myaale

click to play

ಕಾಂತನಿಲ್ಲದ ಮ್ಯಾಲೆ ಎಕಾಂತವ್ಯಾತಕೆ
ಗಂಧಲೇಪನವ್ಯಾತಕೆ ಈ ದೇಹಕೆ ||

ಮಂದಮಾರುತ ಮೈಗೆ ಬಿಸಿಯಾದರೆ ತಾಯಿ
ಬೆಳುದಿಂಗಳು ಉರಿವ ಬಿಸಿಲಾಯಿತೆ ನನಗೆ | ೨ |
ಹೂ ಜಾಜಿ ಸೂಜಿಯ ಹಾಗೆ ಚುಚ್ಚುತಲಿವೆ || ಕಾಂತನಿಲ್ಲದ ಮ್ಯಾಲೆ ||

ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ
ಉಸಿರಿನ ಬಿಸಿಯವಗೆ ತಾಗದೇ ಹುಸಿ ಹೋಯ್ತೇ |೨ |
ಚೆಲುವ ಬಾರದಿರೇನು ಫಲವೇ ಈ ಚೆಲುವಿಗೆ || ಕಾಂತನಿಲ್ಲದ ಮ್ಯಾಲೆ ||

ಕಾಮನ ಬಾಣ ಹತ್ಯಾವ ಬೆನ್ನ
ಆತುರ ತೀವ್ರ ಕಾಮಾತುರ ತಾಳೆನಾ |೨ |
ಆರ್ತಳಿಗೆ ಆಶ್ರಯವಿರದೇ -ಒದ್ದಾಡುವೆ || ಕಾಂತನಿಲ್ಲದ ಮ್ಯಾಲೆ ||

ಅನ್ಯ ಪುರುಷನ್ ಮಾರ ಅಂಗನೆಯನೆಳೆದರೆ
ಕೈ ಹಿಡಿದ ಸರಿ ಪುರುಷ ಸುಮ್ಮನಿರತಾರೆನೆ |೨ |
ಕರುಣೆಯ ತೋರುವರ್ಯಾರೆ ಸಣ್ಣವಳಿಗೆ || ಕಾಂತನಿಲ್ಲದ ಮ್ಯಾಲೆ ||

ಸಾಹಿತ್ಯ – ಚಂದ್ರಶೇಖರ ಕಂಬಾರ
ಸಂಗೀತ – ?
ಗಾಯನ – ರತ್ನಮಾಲಾ ಪ್ರಕಾಶ್

download kaantanillada myaale

 

ಟ್ಯಾಗ್ ಗಳು: , , , , ,

ಕಾಣದ ಕಡಲಿಗೆ / kaanada kadalige

click to play

ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು, ಎಂತಿರುವುದೋ ಅದು
ನೋಡಬಲ್ಲೆನೇ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ, ಅಪಾರವಂತೆ
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು
ಸೇರಬಲ್ಲೆನೇನು
ಸೇರಬಹುದೇ ನಾನು
ಕಡಲ ನೀಲಿಯೊಳು ಕರಗಬಹುದೇ ನಾನು

ಸಾಹಿತ್ಯ – ಜಿ. ಎಸ್. ಶಿವರುದ್ರಪ್ಪ
ಸಂಗೀತ / ಗಾಯನ – ಸಿ ಅಶ್ವಥ್

download kaanada kadalige

 

ಟ್ಯಾಗ್ ಗಳು: , , , , ,

ಘಮ ಘಮ ಘಮಾಡಿಸ್ತಾವ ಮಲ್ಲಿಗೆ / ghama ghama ghamaadistaava

click to play

ಘಮ ಘಮ ಘಮಾಡಿಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ

ತುಳುಕ್ಯಾಡುತ್ತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ
ಕನಸು ತೇಲಿ ಬರುತ್ತಾವ ಹುಡುಕಿ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ ಚಂದ್ರಮ ಕನ್ನಡಿ ಹರಳ
ಮನ ಸೋತು ಆಯಿತು ಮರುಳ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ನೆರಳಲ್ಲಾಡುತ್ತಾವ ಮರದ ಬುಡಕ್ಕ ಕೇರಿ ತೇರಿ ನೂಗುತ್ತಾವ ದಡಕ್ಕ
ಹಿಂಗ ಬಿಟ್ಟು ಇಲ್ಲಿ ನನ್ನ ನಡಕ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ನನ್ನ ನಿನ್ನ ಒಂದತನದಾಗ ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ಬಂತ್ಯಾಕ ನಿನಗ ಇಂದ ಮುನಿಸು ಬೀಳಲಿಲ್ಲ ನನಗ ಇದರ ಕನಸು
ಪ್ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟಿದ್ದೀಗ ಎಲ್ಲಿಗೆ || ಘಮ ||

ಸಾಹಿತ್ಯ – ದ ರಾ ಬೇಂದ್ರೆ
ಸಂಗೀತ – ?
ಗಾಯನ – ಸಂಗೀತ ಕಟ್ಟಿ ಕುಲಕರ್ಣಿ

download ghama ghama ghamaadistaava mallige

 

ಟ್ಯಾಗ್ ಗಳು: , , , , ,

ಇಷ್ಟು ಕಾಲ ಒಟ್ಟಿಗಿದ್ದು / ishtu kaala ottigiddu

click to play

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೊಣಿಗೆ

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೆ ಕನ್ನಡಿಯ ಪಾಲಿಗೆ

ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ – ಬಿ ಕೆ ಚಂದ್ರಶೇಖರ್
ಗಾಯನ – ಎಂ ಡಿ ಪಲ್ಲವಿ

download ishtu kaala ottigiddu

 

ಟ್ಯಾಗ್ ಗಳು: , , , , ,